Karnataka Times
Trending Stories, Viral News, Gossips & Everything in Kannada

Unprofitable Crop: ಅಡಿಕೆ ತೋಟದ ಬಳಿ ಲಾಭಕ್ಕಾಗಿ ಈ ಬೆಳೆ ಬೆಳೆದು ದೊಡ್ಡ ನಷ್ಟ ಅನುಭವಿಸಿದ ರೈತ! ಈ ತಪ್ಪು ಮಾಡಬೇಡಿ

advertisement

ಕೃಷಿ ಲಾಭದಾಯಕವಾಗಿದ್ದರೂ ಅದರ ನಿರ್ವಹಣೆ ಮಾಡುವುದು ದೊಡ್ಡ ಸಮಸ್ಯೆ ಇದ್ದಂತೆ ಎಂದು ಹೇಳಬಹುದು. ಅಡಿಕೆ ಕೃಷಿ (Arecanut Cultivation) ಮಾಡುವಾಗ ಬರೀ ಅಡಿಕೆ ನೆಟ್ಟರೆ ಲಾಭ ಬರಲು ಸಮಯ ಕಾಯಬೇಕಾಗುತ್ತದೆ ಹಾಗಾಗಿ ಉಪಕೃಷಿ ಅಳವಡಿಕೆ ಮಾಡಲಾಗುತ್ತದೆ. ಅಂತವುಗಳಲ್ಲಿ ಕೆಲವು ಕೃಷಿ ಲಾಭ ತರಿಸಿದರೆ ಇನ್ನು ಕೆಲವು ಕೃಷಿ ಅಡಿಕೆ ಗಿಡಕ್ಕೆ ಹಾನಿಯನ್ನು ಮಾಡಲಿದೆ.

ಯಾವೆಲ್ಲ ಉಪಕೃಷಿ:

ಉಪಕೃಷಿ ವಿಚಾರಕ್ಕೆ ಬಂದಾಗ ಅಡಿಕೆ ಮರದ ಸಾಲಿನ ನಡು ನಡುವೆ ಏಲಕ್ಕಿ, ಲಿಂಬೆ, ಕಾಳು ಮೆಣಸು, ಮೆಣಸು, ಶುಂಠಿ, ಬೇವು ಗಳನ್ನು ಉಪಕೃಷಿಯಾಗಿ ಹೆಚ್ಚು ಬಳಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಅಡಿಕೆ ಕೃಷಿಯೊಂದಿಗೆ ಕೆಲವು ಉಪಕೃಷಿ ಮಾಡುವುದರ ವಿಚಾರದಲ್ಲಿ ಶುಂಠಿ ಬೆಳೆಯುವುದು ಉತ್ತಮ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅದು ಮಾರಕ ಅನ್ನುತ್ತಾರೆ. ಹಾಗಾದರೆ ಯಾವುದು ಸರಿ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಶುಂಠಿ ಕೃಷಿ ಮಾಡಬಹುದೆ?

ಶುಂಠಿಗೆ (Ginger) ಬೆಲೆ ಅಧಿಕ ಇದ್ದು ಮಾರುಕಟ್ಟೆಯ ಬೇಡಿಕೆ ಕೂಡ ಅಧಿಕ ಇದೆ. ಹಾಗಾಗಿ ನೀವು ಈ ಕೃಷಿ ಮಾಡಿದಾಗ ಲಾಭ ಪಡೆಯಬಹುದು. ಆದರೆ ಅದನ್ನು ಅಡಿಕೆ ಕೃಷಿ (Arecanut Cultivation) ಜೊತೆಗೆ ಮಾಡುವುದು ಉತ್ತಮ ವಿಧಾನ ಅಲ್ಲ. ಯಾಕೆಂದರೆ ಇದರ ನಿರ್ವಹಣೆಗಾಗಿ ಕೆಲವು ಕೆಮಿಕಲ್ ಹೇರಳವಾಗಿ ಬಳಸಿ ಅದು ನಿಮ್ಮ ಅಡಿಕೆ ಗಿಡ ಅಥವಾ ಮರಕ್ಕೆ ಹಾನಿ ನೀಡಲಿದೆ. ಹೀಗಾಗಿ ಅಡಿಕೆ ಇಳುವರಿ (Arecanut Yield) ಕೂಡ ಕುಂಟಿತವಾಗಲಿದೆ. ಇದನ್ನು ಪ್ರತ್ಯೇಕ ವಾಗಿ ನೆಡುವುದು ಉತ್ತಮ ಎಂದು ಅನೇಕ ಕೃಷಿಕರು ಈ ಬಗ್ಗೆ ಅಭಿಪ್ರಾಯಿಸಿದ್ದಾರೆ.

 

advertisement

Image Source: Instagram

 

ಪೋಷಕಾಂಶ ಅಗತ್ಯ:

ಪೋಷಕಾಂಶ ಅಡಿಕೆ ಸಸಿಗೆ ಅಗತ್ಯವಾಗಿದ್ದು ನೀವು ಸಾವಯವ ಗೊಬ್ಬರ ಹೇರಳವಾಗಿ ಬಳಕೆ ಮಾಡಬಹುದು ಅದರ ಜೊತೆಗೆ ಡಾಕ್ಟರ್ ಸಾಯಿಲ್ (Dr. Soil) ಬಳಕೆ ಮಾಡುವುದರಿಂದ ಅಧಿಕ ಇಳುವರಿಯ ಜೊತೆಗೆ ಮಣ್ಣಿನ ಫಲವತ್ತತೆ ಯಥಾ ಸ್ಥಿತಿಯಲ್ಲಿ ಕಾಯ್ದಿಟ್ಟುಕೊಳ್ಳಲಿದೆ. ನೀವು ಕೂಡ ಅಡಿಕೆ ಸಸಿಗಳಿಗೆ ಪೋಷಕಾಂಶ ನೀಡಲು ಬಯಸಿದರೆ ಡಾಕ್ಟರ್ ಸಾಯ್ಲ್ ಹಾಗೂ ಇತರ ನೈಸರ್ಗಿಕ ವಿಧಾನಕ್ಕೆ ಅಧಿಕ ಆದ್ಯತೆ ನೀಡಿ.

ಸಾವಯವ ವಿಧಾನ ಮನೆಯಲ್ಲಿಯೆ ಮಾಡಿ:

ಅಡಿಕೆ ಸಸಿಗಳಿಗೆ ಸಾವಯವ ಗೊಬ್ಬರ ಮಾಡುವಾಗ ಮನೆಯಲ್ಲಿಯೇ ನೀವು ಗೊಬ್ಬರ ತಯಾರಿ ಮಾಡುವುದು ಬಹಳ ಮುಖ್ಯ. ನೀವು ಕೂಡ ಸಾವಯವ ಗೊಬ್ಬರಮಾಡುವಾಗ ಬೇರೆ ಕಡೆಯಿಂದ ಖರೀದಿ ಮಾಡುವ ಬದಲು ಮನೆಯಲ್ಲಿಯೇ ಕೊಟ್ಟಿಗೆ ಗೊಬ್ಬರ ಸಗಣಿ ಬಳಸಿ , ಹಣ್ಣು ತರಕಾರಿ ಸಿಪ್ಪೆ ಒಣಗಿದ ಎಲೆಯಿಂದ ಕಂಪೋಸ್ಟ್ ಮಾಡಿ ಅದನ್ನು ಸಂಗ್ರಹ ಮಾಡಿ ಇಟ್ಟರೆ ನಿಮ್ಮ ತೋಟಕ್ಕೆ ಬಹಳ ಪೋಷಕಾಂಶ ನೀಡಲಿದೆ.

 

advertisement

Leave A Reply

Your email address will not be published.