Karnataka Times
Trending Stories, Viral News, Gossips & Everything in Kannada

Credit Card: ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟದೇ ಇದ್ದವರಿಗೆ ಸಿಹಿಸುದ್ದಿ! ರಿಸರ್ವ್ ಬ್ಯಾಂಕ್ ಹೊಸ ರೂಲ್ಸ್

advertisement

ಸ್ನೇಹಿತರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜನರಿಗೆ ಉಪಯುಕ್ತ ವಾಗುವಂತಹ ನಿಯಮಗಳನ್ನು ಆಗಾಗ ಜಾರಿಗೊಳಿಸುತ್ತಲೇ ಇರುತ್ತದೆ. ಅದರಂತೆ ಈಗ ಕ್ರೆಡಿಟ್ ಕಾರ್ಡ್ ಬಿಲ್ಗೆ (Credit Card Bill) ಸಂಬಂಧಿಸಿದ ಹೊಸ ನಿಯಮವನ್ನು ಆರ್ಬಿಐ ಜಾರಿಗೊಳಿಸಿದ್ದು, ಇದರಿಂದ ಕ್ರೆಡಿಟ್ ಕಾರ್ಡ್ ಬಳಕೆದಾರರು (Credit Card Users) ಸಂತಸಪಟ್ಟಿದ್ದಾರೆ. ಹೌದು ಸ್ನೇಹಿತರೆ ಈ ಹೊಸ ನಿಯಮದಿಂದಾಗಿ ನಿಗದಿತ ಅವಧಿಯಲ್ಲಿ ಬಿಲ್ ಪಾವತಿ ಮಾಡುವಂತಹ ಟೆನ್ಶನ್ ಖಂಡಿತ ಇರುವುದಿಲ್ಲ. ಅಷ್ಟಕ್ಕೂ ಈ ಆರ್ ಬಿ ಐ ಜಾರಿಗೊಳಿಸಿರುವ ಹೊಸ ನಿಯಮವೇನು? ಇದರಿಂದ ಯಾವೆಲ್ಲ ಅನುಕೂಲಗಳನ್ನು ಪಡೆಯಬಹುದು? ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಆರ್ಬಿಐನ ಹೊಸ ಮಾರ್ಗ ಸೂಚಿಯ ಅನುಕೂಲಗಳೇನೇನು?

 

Image Source: Deccan Herald

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊರಡಿಸಿರುವ ಹೊಸ ಮಾರ್ಗಸೂಚಿಯ ಪ್ರಕಾರ, ನಿಮ್ಮ ಬಿಲ್ಲಿಂಗ್ ಸೈಕಲ್ (Billing Cycle)ನ ಪ್ರಾರಂಭ ಮತ್ತು ಮುಕ್ತಾಯದ ದಿನಾಂಕವನ್ನು ನೀವೇ ಆಯ್ಕೆ ಮಾಡಬಹುದಾದಂತಹ ಅವಕಾಶವನ್ನು ಆರ್ ಬಿ ಐ ಕ್ರೆಡಿಟ್ ಕಾರ್ಡ್ (Credit Card) ದಾರರಿಗೆ ಒದಗಿಸಿಕೊಟ್ಟಿದೆ. ಇದರಿಂದಾಗಿ ನೀವು ನಿಗದಿತ ದಿನಾಂಕಕ್ಕೆ ಬಿಲ್ಲನ್ನು ಪಾವತಿಸಬೇಕಾದಂತಹ ಅನಿವಾರ್ಯವಿರುವುದಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವಂತಹ ಈ ಸೂಚನೆಯೂ ಕ್ರೆಡಿಟ್ ಕಾರ್ಡ್ ನೀಡುವಂತಹ ಎಲ್ಲಾ ಬ್ಯಾಂಕ್ ಹಾಗೂ ಖಾಸಗಿ ಕಂಪನಿಗಳಿಗೆ ಅನ್ವಯಿಸುತ್ತದೆ.

advertisement

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಎಂದರೇನು?

 

Image Source: Paytm

 

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಎನ್ನುವುದು 45 ದಿನಗಳ ಚಕ್ರವಾಗಿದ್ದು (45 Days Program), ಇದನ್ನು 30 ಮತ್ತು 15 ದಿನಗಳೆಂದು ವಿಂಗಡಿಸಲಾಗುತ್ತದೆ. ಇಲ್ಲಿ ನೀವು 30 ದಿನಗಳ ಕಾಲ ಖರ್ಚು ಮಾಡಿದ ಹಣವನ್ನು 15 ದಿನಗಳ ಕಾಲ ಮರು ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ ಏಪ್ರಿಲ್ ಒಂದರಿಂದ ಏಪ್ರಿಲ್ 30ನೇ ತಾರೀಕಿನವರೆಗೂ ನೀವು ಖರ್ಚು ಮಾಡಿದ ಮೊತ್ತವನ್ನು ಮೇ 1ರಿಂದ ಮೇ 15ರ ದಿನಾಂಕದ ಒಳಗೆ ಪಾವತಿಸಬೇಕು. ಇನ್ನು ಮುಖ್ಯವಾಗಿ ನಿಮ್ಮ ಕ್ರೆಡಿಟ್ ಕಾರ್ಡ್ನ ಮಿತಿಯು (Limit) ಒಂದು ಲಕ್ಷ ಇದ್ದು, ನೀವು 30 ದಿನಗಳಲ್ಲಿ ಕೇವಲ 30,000 ಬಳಸಿ, 15ನೇ ತಾರೀಕು ನೀವು ಖರ್ಚು ಮಾಡಿದ ಬಿಲ್ಲನ್ನು ಮರುಪಾವತಿ ಮಾಡಿದರೆ, ಇನ್ನುಳಿದ 70,000 ಹಣವು ಮುಂದಿನ ತಿಂಗಳ ಮಿತಿಯೊಂದಿಗೆ ಸೇರುತ್ತದೆ. ಆದರೆ ಅಪ್ಪಿ ತಪ್ಪಿ ಕೆಲ ಕಾರಣಗಳಿಂದಾಗಿ ನೀವು 15ನೇ ದಿನಾಂಕದೊಳಗೆ ಬಿಲ್ ಪಾವತಿ (Bill Repayment) ಮಾಡದೆ ಹೋದರೆ ಅತಿ ಹೆಚ್ಚಿನ ಬಡ್ಡಿ ಅಥವಾ ಶುಲ್ಕ ದರವನ್ನು ಪಾವತಿಸಬೇಕಾಗುತ್ತದೆ.

ಹೊಸ ನಿಯಮದಿಂದ ಗ್ರಾಹಕರಿಗೆ ಹೇಗೆ ಪ್ರಯೋಜನ ಸಿಗಲಿದೆ?

ಹೊಸ ಮಾರ್ಗಸೂಚಿಯ ಪ್ರಕಾರ, ನಿಮ್ಮ ಕ್ರೆಡಿಟ್ ಕಾರ್ಡ್ನ ಬಿಲ್ಲಿಂಗ್ ಚಕ್ರ (Credit Card Billing Cycle) ವನ್ನು ನಿಮಗೆ ಇಷ್ಟ ಬಂದ ದಿನಾಂಕಕ್ಕೆ ಹಾಕಿಸಿಕೊಳ್ಳಬಹುದು, ಉದಾಹರಣೆಗೆ ನಿಮಗೆ 15ನೇ ತಾರೀಕು ಕ್ರೆಡಿಟ್ ಕಾರ್ಡ್ ಮೊತ್ತವನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಹೋದರೆ 10 ಅಥವಾ 25ನೇ ದಿನಾಂಕಕ್ಕೆ ಬದಲಿಸಿಕೊಳ್ಳಬಹುದು. ಯಾರ ಮರುಪಾವತಿಯ ದಿನಾಂಕ 28 ಅಥವಾ 29ನೇ ತಾರೀಕು ಇರುತ್ತದೆಯೋ ಅಂತವರಿಗೆ ಇದು ಬಹಳ ಅನುಕೂಲಕರವಾದ ನಿಯಮ. ಹೊಸ ನಿಯಮದ ಅನ್ವಯದಂತೆ, ನೀವು ಕ್ರೆಡಿಟ್ ಕಾರ್ಡ್ ಪಡೆದಿರುವಂತಹ ಬ್ಯಾಂಕ್ ಅಥವಾ ಸಂಸ್ಥೆಗೆ ತೆರಳಿ ನಿಮಗೆ ಇಷ್ಟ ಬಂದ ದಿನಾಂಕಕ್ಕೆ ಮರುಪಾವತಿ ದಿನಾಂಕವನ್ನು ಬದಲಿಸಿಕೊಳ್ಳಬಹುದು.

advertisement

Leave A Reply

Your email address will not be published.