Karnataka Times
Trending Stories, Viral News, Gossips & Everything in Kannada

RBI: FD ಯಲ್ಲಿ ಹಣ ಇಡುವವರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ರಿಸರ್ವ್ ಬ್ಯಾಂಕ್! ನಿರ್ಧಾರ ಬದಲು

advertisement

ಇನ್ನು ಹೊಸ ಆರ್ಥಿಕ ವರ್ಷ ಪ್ರಾರಂಭ ಆಗಿದೆ ಇನ್ನು ಎಲ್ಲೆಡೆ ಕೂಡ ಬ್ಯಾಂಕ್ ಗಳು ತನ್ನ ಹೊಸ ಹೊಸ ಬಡ್ಡಿದರವನ್ನು ಮತ್ತು ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗುತ್ತಿದೆ. ಇನ್ನು ಈ ಬಾರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಜನಸಾಮಾನ್ಯರಿಗೆ ಹೊಸ ಗುಡ್ ನ್ಯೂಸ್ ಸಿಕ್ಕಿದೆ ಅದೇನೆಂದರೆ, ಇನ್ನು ವಿವಿಧ ರೀತಿಯಾದಂತಹ ಬದಲಾವಣೆಯನ್ನು ತೆಗೆದುಕೊಂಡು ಬರಲು ಹೊರಟಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇದೀಗ ಠೇವಣಿ ಮೊತ್ತವನ್ನು 15 ಲಕ್ಷದಿಂದ ಒಂದು ಕೋಟಿಯವರೆಗೂ ವಿಸ್ತರಿಸಿದೆ.

ಅಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಾನ್ ರೀಫಂಡೇಬಲ್ ಫಿಕ್ಸೆಡ್ ಡೆಪಾಸಿಟ್ (Non Refundable Fixed Deposit) ನ ಹೂಡಿಕೆ ಮೊತ್ತವನ್ನು 15 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಿದೆ. ಇನ್ನು (RBI) ಮರುಪಾವತಿಸಲಾಗದ ಸ್ಥಿರ ಠೇವಣಿಯ ಕನಿಷ್ಠ ಮೊತ್ತವನ್ನು 15 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಿದೆ. ಇನ್ನು ಅದರ ಬಡ್ಡಿಯ ಮೊತ್ತವು ಕೂಡ ಹೆಚ್ಚಾಗಿ ಸಿಗಲಿದ್ದು ಬಹಳ ಲಾಭದಾಯಕವಾಗಿರುತ್ತದೆ ಎಂದು ಬ್ಯಾಂಕ್ ಗಳು ತಿಳಿಸಿದೆ. ಇನ್ನು ಆರ್‌ಬಿಐ ಇದರ ಜೊತೆಗೆ ಹಲವಾರು ಹೊಸ ನಿಯಮಗಳನ್ನು ಬದಲಾವಣೆಯನ್ನು ಕೂಡ ಮಾಡಿದೆ ಅವುಗಳನ್ನು ತಿಳಿದುಕೊಳ್ಳುವುದು ಎಲ್ಲರಿಗೂ ಅವಶ್ಯಕ.

 

Image Source: Deccan Herald

 

advertisement

ಬ್ಯಾಂಕ್ ಗಳಲ್ಲಿ ಎರಡು ರೀತಿಯಾದಂತಹ ಫಿಕ್ಸೆಡ್ ಡೆಪಾಸಿಟ್ (Fixed Deposit) ಗಳನ್ನು ನಾವು ಕಾಣಬಹುದಾಗಿದೆ ಒಂದು ಕಾಲೆಬಲ್ ಫಿಕ್ಸ್ಡ್ ಡೆಪಾಸಿಟ್ (Callable Fixed Deposit), ಎರಡನೆಯದು ನಾನ್ ಕಾಲೆಬಲ್ ಫಿಕ್ಸ್ಡ್ ಡೆಪಾಸಿಟ್ (Non Callable Fixed Deposit) ಇನ್ನು ಆರ್ ಬಿ ಐ ಬ್ಯಾಂಕ್ ನಾನ್ ಕಾಲೆಬಲ್ ಫಿಕ್ಸೆಡ್ ಡೆಪಾಸಿಟ್ ಮೇಲೆ ಗಮನಹರಿಸಿದ್ದು ಇಲ್ಲಿ ಗ್ರಾಹಕರಿಗೆ ಹೊಸ ಆಫರ್ ಸಿಕ್ಕಿದೆ. ಇನ್ನು ಇಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುವಂತಹ ಮೊತ್ತವನ್ನು 15 ಲಕ್ಷದಿಂದ ಒಂದು ಕೋಟಿ ಅಥವಾ ಅದಕ್ಕಿಂತ ಹೆಚ್ಚಾಗಿ ಹೆಚ್ಚಿಸಬಹುದು ಎಂದು ತಿಳಿಸಲಾಗಿದೆ.

 

Image Source: Business Today

 

ಇನ್ನು ಬ್ಯಾಂಕಳಲ್ಲಿ ಒಮ್ಮೆ ಹೂಡಿಕೆ ಮಾಡಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡಿದರೆ, ಅದರ ಮಧ್ಯದಲ್ಲಿ ಯಾವುದೇ ಕಾರಣಕ್ಕೂ ಹಣವನ್ನು ಮೆಚುರಿಟಿ ಅವಧಿಯ ಮೊದಲು ಹಿಂಪಡೆಯಲು ಸಾಧ್ಯವಿಲ್ಲ. ಇದಕ್ಕೆ ಎಲ್ಲ ಬ್ಯಾಂಕುಗಳು ಕೂಡ ಒಪ್ಪಿಗೆ ನೀಡುತ್ತದೆ ಮತ್ತು ಇದಕ್ಕೆ ಎಲ್ಲರ ಸಹಕಾರವು ಇದೆ. ಇನ್ನು ಆ ರೀತಿಯಾಗಿ ಮೆಚುರಿಟಿ ಅವಧಿಗೂ ಮುನ್ನವೇ ಫಿಕ್ಸ್ಡ್ ಡೆಪಾಸಿಟ್ ತೆಗೆದುಕೊಳ್ಳಬಹುದು ಆದರೆ ಕೆಲವು ಷರತ್ತುಗಳ ಅನ್ವಯ. ಇದರ ಅನುಸಾರ ಹದಿನೈದು ಲಕ್ಷಕ್ಕಿಂತ ಕಡಿಮೆ ಠೇವಣಿ ಇಟ್ಟಿರುವಂತಹ ವ್ಯಕ್ತಿಗಳು ಕೂಡ ಹಣವನ್ನು ಹಿಂಪಡೆಯಬಹುದಾಗಿದೆ.

ಇನ್ನು ರಿಸರ್ವ್ ಬ್ಯಾಂಕ್ ತಂದಿರುವಂತಹ ನಿಯಮಗಳ ತಿದ್ದುಪಡಿ ಪ್ರಕಾರ ಒಂದು ಕೋಟಿ ವರೆಗಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯಲ್ಲಿ NRE ಮತ್ತು NRO ಖಾತೆಗಳನ್ನು ಹೊಂದಿರುವಂತಹ ಚಂದದಾರರು ಆರಂಭಿಕವಾಗಿಯೇ ಫಿಕ್ಸೆಡ್ ಡೆಪಾಸಿಟ್ (Fixed Deposit) ಹಿಂಪಡೆಯುವಂತಹ ಆಯ್ಕೆಯನ್ನು ಕೂಡ ನೀಡಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಸುಲಭವಾಗಿ ಮತ್ತು ಆರಾಮದಾಯಕವಾಗಿ ಜನರು ಫಿಕ್ಸೆಡ್ ಡೆಪಾಸಿಟ್ ಅಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ.

advertisement

Leave A Reply

Your email address will not be published.