Karnataka Times
Trending Stories, Viral News, Gossips & Everything in Kannada

Subsidy: ಇಂತಹ ಜನರಿಗೆ ಹೊಸ ಉದ್ಯೋಗ ಆರಂಭಿಸಲು ರಾಜ್ಯ ಸರ್ಕಾರ ನೀಡುತ್ತಿದೆ 5ಲಕ್ಷ ರೂಪಾಯಿ ಸಹಾಯಧನ, ಈ ಷರತ್ತು ಅನ್ವಯ!

advertisement

ರಾಜ್ಯ ಸರಕಾರವು ಬಡವರ್ಗದ ಜನರಿಗಾಗಿ ಈಗಾಗಲೇ ಅನೇಕ ಯೋಜನೆಯನ್ನು ಜಾರಿಗೆ ತರುತ್ತಲಿದೆ. ಅದೇ ರೀತಿ ರಾಜ್ಯ ಸರಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಅನುಕೂಲ ಆಗಲೆಂದು ಹೊಸತೊಂದು ನೀತಿ ಜಾರಿಗೆ ತರಲು ಸರಕಾರ ಮುಂದಾಗಿದೆ. ಪತ್ರಿಕೋದ್ಯಮ ವ್ಯಾಸಾಂಗ ಮಾಡಿದ್ದ ಪರಿಶಿಷ್ಟ ಜಾತಿ, ವರ್ಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಅನುಕೂಲಕರ ನೀತಿ ಜಾರಿಗೆ ತರಲು ಮುಂದಾಗಿದೆ. ಹೀಗಾಗಿ ಸಾಕಷ್ಟು ಜನರಿಗೆ ಈ ಒಂದು ಕ್ರಮ ಬಹಳಷ್ಟು ಅನುಕೂಲ ಆಗಲಿದೆ.

ಸಹಾಯಧನ ವಿತರಣೆ:

 

 

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರು ಪದವಿಧರರಿಗೆ ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸ್ಥಾಪಿಸಲು ಸಹಾಯಧನ ನೀಡಲು ಸರಕಾರ ಮುಂದಾಗಿದೆ. ನಿರುದ್ಯೋಗ ಯುವಕ, ಯುವತಿಯರನ್ನು ಉದ್ಯೋಗ ಕ್ಷೇತ್ರ ದತ್ತ ಆಶ್ರಯಿಸುವ ಸಲುವಾಗಿ ಈ ಸಹಾಯಧನದ ಕ್ರಮ ಅನುಸರಿಸಲು ಚಿಂತಿಸಲಾಗಿದೆ. 19 ಅಕ್ಟೋಬರ್ 2023ರಕ್ಕೆ ಪತ್ರಿಕೋದ್ಯಮ ಮಾಡಿದ್ದವರಿಗೆ ಈ ಅವಕಾಶ ಸಿಗಲಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸ್ಥಾಪನೆ ಮಾಡಲು ಘಟಕ ಸ್ಥಾಪನೆಗೆ 5 ಲಕ್ಷ ರೂಪಾಯಿ Subsidy ಅಥವಾ 70% ನಷ್ಟು ನಿರ್ವಹಣಾ ವೆಚ್ಚ ಬರಿಸಲು ಸಹಾಯಧನ ಸರಕಾರದ ವತಿಯಿಂದ ನೀಡಲಾಗುವುದು.

ಕೆಲ ನಿರ್ದಿಷ್ಟ ಷರತ್ತು ಜಾರಿ:

advertisement

ರಾಜ್ಯ ಸರಕಾರವು ಈ ರೀತಿ ಸಹಾಯಧನ ವಿತರಣೆ ಮಾಡಲು ಕೆಲ ನಿರ್ದಿಷ್ಟ ಷರತ್ತನ್ನು ವಿಧಿಸಿದ್ದು ಅವುಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 10 ಲಕ್ಷ ವ್ಯಾಪ್ತಿ ಮಿತಿಯಲ್ಲಿ ಇರಬೇಕು.
  • ಅರ್ಜಿದಾರರು ನಿಗಮಗಳಿಂದ ಯಾವುದೇ ತರನಾದ ಆರ್ಥಿಕ ಸೌಲಭ್ಯ ಪಡೆದಿರಬಾರದು.
  • ಅರ್ಜಿದಾರರು 15 ವರ್ಷಗಳಿಂದ ಕರ್ನಾಟಕದ ನಿವಾಸಿ ಆಗಿರಬೇಕು.
  • ಅರ್ಜಿದಾರರು 30ವರ್ಷದಿಂದ 50ವರ್ಷದ ಮಿತಿ ಹೊಂದಿರಬೇಕು.
  • ಅರ್ಜಿದಾರರು ಯಾವುದಾದರೂ ಪದವಿಯ ಜೊತೆಗೆ 10ವರ್ಷಗಳ ಸೇವಾನುಭವ ಹೊಂದಿರಬೇಕು. ಅಂದರೆ ವಾರ್ತಾ ಇಲಾಖೆ ಅಥವಾ ಇತರ ಡಿಜಿಟಲ್ ಮಾಧ್ಯಮದ ಅನುಭವ‌.
  • ಅರ್ಜಿದಾರರು ಕಡ್ಡಾಯವಾಗಿ UAM (Udyog Aadhaar Memorandum) ನಲ್ಲಿ ನೋಂದಾಯಿಸಿರಬೇಕು.
  • ಅರ್ಜಿದಾರರ ಕುಟುಂಬದಲ್ಲಿ ಯಾವುದೆ ಸದಸ್ಯರು ಸರಕಾರಿ ನೌಕರಿಯಲ್ಲಿ ಇರಬಾರದು..

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಜಿದಾರರು ಪ್ರಾಜೆಕ್ಟ್ ರಿಪೋರ್ಟಿಂಗ್ ಜೊತೆಗೆ ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಬೇಕು. ಬಳಿಕ ಅಲ್ಲಿ ಕೂಡ ಪರಿಶೀಲನೆ ಮಾಡಲಾಗುತ್ತದೆ ಆ ಬಳಿಕ ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯವರು ಅನುಮೋದನೆ ನೀಡಿ ಬ್ಯಾಂಕಿಗೆ ಮಾಹಿತಿ ಕಳುಹಿಸುತ್ತಾರೆ. ಬ್ಯಾಂಕ್ ನಲ್ಲಿ ಸಹಾಯಧನ ಮೊತ್ತ ಬಿಡುಗಡೆ ಮಾಡಲು ಕ್ಲೈಮ್ ಬಂದ ಕೂಡಲೇ ಕ್ಲೈಮ್ ಮಾಡಬೇಕು. ಹೀಗೆ ಹಂತ ಹಂತವಾಗಿ ಮೊತ್ತ ಬಿಡುಗಡೆ ಆಗಲಿದೆ.

ಜಾಗೃತಿ ಪ್ರಸಾರ:

ಹೀಗೆ ಪಡೆದ ಹಣದಿಂದ ಡಿಜಿಟಲ್ ಮಾಧ್ಯಮ ಘಟಕ ಸ್ಥಾಪಿಸುವಾಗ ಹಂತ ಹಂತವಾಗಿ ಅದರ ಬಗ್ಗೆ ವರದಿಯನ್ನು ಸಹ ಕಡ್ಡಾಯವಾಗಿ ಸಲ್ಲಿಸಬೇಕು‌. ಪೂರ್ತಿ ಘಟಕ ಸ್ಥಾಪನೆಯಾದ ಬಳಿಕ ಆ ಘಟಕದಲ್ಲಿ ಪರಿಶಿಷ್ಟ ಜಾತಿ ಪಂಗಡದ ಒಬ್ಬರಿಗೆ ಉದ್ಯೋಗ ನೀಡಲೇ ಬೇಕು. ಸಮಾಜ ಕಲ್ಯಾಣ ಇಲಾಖೆ ನಿಗಮದ ಜಿಲ್ಲಾ ಮತ್ತು ತಾಲೂಕು ಘಟಕದ ಸೌಲಭ್ಯ ವಿತರಣೆ, ಜಾಗೃತಿ ಅಭಿಯಾನ ಇತ್ಯಾದಿಗಳನ್ನು ಪ್ರಸಾರ ಮಾಡಬೇಕು. ಅದೇ ರೀತಿ ನಿರುದ್ಯೋಗ ಯುವಕ ಯುವತಿಯರಿಗೆ 7 ತಿಂಗಳ ಕಾಲ ತರಬೇತಿಯನ್ನು ಘಟಕದಲ್ಲಿ ನೀಡಬೇಕು ಎಂಬ ನಿಯಮ ಕೂಡ ಇದೆ.

advertisement

Leave A Reply

Your email address will not be published.