Karnataka Times
Trending Stories, Viral News, Gossips & Everything in Kannada

Indian Railways: ರೈಲ್ವೇ ಇಲಾಖೆಯಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್! ಎಲೆಕ್ಷನ್ ಗೂ ಮುನ್ನವೇ ಕೇಂದ್ರದ ಹೊಸ ಘೋಷಣೆ

advertisement

ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಮನೆಯ ನಾಲ್ಕು ಗೋಡೆ ನಡುವೆ ವಾಸ ಇರಬೇಕೆಂಬ ನಿಯಮ ಇತ್ತು ಆದರೆ, ಈಗ ಕಾಲ ಸಂಪೂರ್ಣ ಬದಲಾಗಿದೆ. ಹೆಣ್ಣುಮಕ್ಕಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಒತ್ತು ನೀಡುತ್ತಿದ್ದು ಸಾಮಾಜಿಕ , ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ವಲಯದಲ್ಲಿ ಈಗಾಗಲೇ ವಿಶೇಷ ಮೀಸಲಾತಿ ನೀಡಿರುವುದನ್ನು ನಾವು ಕಾಣಬಹುದು. ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಧಿಕ ಒತ್ತನ್ನು ನೀಡುತ್ತಿವೆ.

ಭಾರತೀಯ ಸರಕಾರ ಮಹಿಳಾ ಪರವಾದ ಅನೇಕ ಯೋಜನೆ ಜಾರಿಗೆ ತಂದಿದೆ. ರಾಜ್ಯ ಸರಕಾರ ಕೂಡ ಮಹಿಳೆಯರಿಗಾಗಿ ಅನೇಕ ಯೋಜನೆ ಪರಿಚಯಿಸಿದ್ದು ಪಂಚ ಗ್ಯಾರೆಂಟಿ ಯೋಜನೆ ಕೂಡ ಇದರಲ್ಲಿ ಸೇರಿರುವುದು ಕಾಣಬಹುದು. ಇದೀಗ ಕೇಂದ್ರ ಸರಕಾರ ವಿನೂತನ ಸೂಚನೆ ಯೊಂದನ್ನು ನೀಡಿದ್ದು ಭಾರತೀಯ ರೈಲ್ವೆ (Indian Railways) ಯಲ್ಲಿ  ಪ್ರಯಾಣ ಮಾಡುವವರಿಗೆ ಈ ವಿಚಾರ ದೊಡ್ಡ ಸುದ್ದಿ ನೀಡಲಿದೆ

Indian Railways ಗುಡ್ ನ್ಯೂಸ್ ನೀಡಿದೆ

ಭಾರತೀಯ ಸಂಪರ್ಕ ಸಾಧನದಲ್ಲಿ ರೈಲ್ವೇ ಸೇವೆಗಳನ್ನು ನಾವು ಎಷ್ಟು ಸ್ಮರಿಸಿದರೂ ಕಡಿಮೆ ಎಂದು ಹೇಳಬಹುದು. ರೈಲ್ವೆ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು ರೈಲ್ವೇ ಪ್ರಯಾಣ ಮಾಡುವ ಮಹಿಳೆಯರಿಗೆ ಈಗೊಂದು ಶುಭ ಸುದ್ದಿ ಸಿಕ್ಕಿದೆ.

advertisement

Image Source: DNA india

ಈ ಎಲ್ಲ ವಿಶೇಷ ಮೀಸಲಾತಿ ಸಿಗಲಿದೆ

ಮಹಿಳೆಯರಿಗೆಂದೆ ವಿಶೇಷ ಮೀಸಲಾತಿ ನೀಡಿದ್ದು ನಿವೀಗ ಕಾಣಬಹುದು. ಮಹಿಳೆಯರಿಗೆ ಉಪನಗರ ಮತ್ತು ಸ್ಥಳೀಯ ರೈಲಿನಲ್ಲಿ ಪ್ರತ್ಯೇಕ ಕೋಚ್ ಇರಲಿದೆ. ಅದೇ ರೀತಿ ಭದ್ರತಾ ಸಮಸ್ಯೆ ಇದ್ದಾಗ ಸಹಾಯವಾಣಿ ಸಂಖ್ಯೆ 182ಕ್ಕೆ ಕರೆ ಮಾಡುವ ಸೌಲಭ್ಯ ನೀಡಲಾಗಿದೆ‌. ಮಹಿಳೆಯರಲ್ಲಿ ಗರ್ಭಿಣಿಯರಿಗೆ ಹಾಗೂ ಹಿರಿಯ ನಾಗರಿಕರಿಗೆ (Senior Citizen) ಸೀಟ್ ನಲ್ಲಿ ಮೀಸಲಾತಿ ಇರಲಿದೆ ಇದರ ಜೊತೆಗೆ ಸ್ಲೀಪರ್ ಸೀಟ್ ನಲ್ಲಿ ಕೆಳಗಿನ ಭಾಗ ಮಹಿಳೆಯರಿಗೆ ನೀಡುವ ಮೀಸಲಾತಿ ಕೂಡ ಇದೆ. ರೈಲು ನಿಲ್ದಾಣದಲ್ಲಿ ಕೂಡ ಮಹಿಳೆಯರಿಗೆ ರೆಸ್ಟ್ ರೂಂ ಇದೆ.

ದೂರು ಸಲ್ಲಿಸಲು ಅವಕಾಶ

ಇನ್ನು ಮುಂದೆ ಮಹಿಳಾ ಪ್ರಯಾಣಿಕರು ಟಿಕೇಟ್ ರಹಿತ ಪ್ರಯಾಣ ಮಾಡಿದರೆ ಅವರನ್ನು ಟಿಸಿ ಕೆಳಗೆ ಇಳಿಸಿದರೆ ಆಗ RPF ಮತ್ತು GRK ಅವರನ್ನು ಸುರಕ್ಷಿತವಾಗಿ ತಲುಪುವಂತೆ ನೋಡಿಕೊಳ್ಳುವ ಹೊಣೆ ಇರಲಿದೆ. ಟಿಕೇಟ್ ಇಲ್ಲದೆ ರೈಲ್ವೆ ಪ್ರಯಾಣ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ ಇದಕ್ಕೂ ಮಿಗಿಲಾಗಿ ಮಹಿಳೆಯರಿಗೆ ಸುರಕ್ಷತೆ ನೀಡಬೇಕು, ರೈಲಿನಿಂದ ಕೆಳಗೆ ಇಳಿಸಿದರೆ ಮಹಿಳೆ ರೈಲ್ವೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದು ರೈಲ್ವೇ ಇಲಾಖೆ ಮೂಲಕ ಮಾಹಿತಿ ಬಂದಿದೆ.

advertisement

Leave A Reply

Your email address will not be published.