Karnataka Times
Trending Stories, Viral News, Gossips & Everything in Kannada

Tata Nano EV: ಮುಂಬರಲಿರುವ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನ ಬೆಲೆ ಸೇರಿದಂತೆ ಹಲವು ಫೀಚರ್ ಗಳು ಬಹಿರಂಗ! ಸಂಭ್ರಮಿಸಿದ ಜನರು

advertisement

ಇಂದು ಕಾರು ಖರೀದಿಯ ಸಂಖ್ಯೆ ಗಣನೀಯ ವಾಗಿ ಏರಿಕೆ ಯಾಗಿದೆ. ಯಾಕಂದ್ರೆ ಕಾರು ಖರೀದಿ ಮಾಡುವಲ್ಲಿ ವಾಹನ ಪ್ರಿಯರ ಕ್ರೇಜ್ ಕೂಡ ಹೆಚ್ಚಾಗಿದೆ. ಇಂದು ಮಾರುಕಟ್ಟೆ ಗೂ ಕೂಡ ನನಾ ರೀತಿಯ ವಿವಿಧ ಪಿಚರ್ಸ್ ನ ಕಾರು ಎಂಟ್ರಿ ನೀಡಿದ್ದು ವಾಹನ ಪ್ರಿಯರನ್ನು ಸೆಳೆಯುತ್ತಲೆ ಬಂದಿದೆ.‌ ಅದರಲ್ಲೂ ಎಲೆಕ್ಟ್ರಿಕ್ ವಾಹನ (Electric Vehicle)ದತ್ತ ಹೆಚ್ಚಿನ‌ ಜನರು ಆಕರ್ಷಿತರಾಗಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆಯು ಏರಿಕೆಯಾಗಿರುವುದರಿಂದ ಹಣವೂ ಉಳಿಕೆ ಯಾಗುತ್ತೆ ಎಂಬ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನೇ ಜನರು ಖರೀದಿ ಮಾಡುತ್ತಿದ್ದಾರೆ.

ನೂತನ‌ ವೈಶಿಷ್ಟ್ಯ ದೊಂದಿಗೆ ಈ ಕಾರು ಎಂಟ್ರಿ

ಟಾಟಾ ನ್ಯಾನೋ (Tata Nano) ಕಾರು ಇಂದು‌ಕೂಡ ಜನಪ್ರಿಯ ಎಂದೆನಿಸಿದ ಕಾರು ಇದಾಗಿದೆ. ಮೂಲ ನ್ಯಾನೋ ಕಾರು ಉತ್ಪಾದನೆಯು 2018 ರಲ್ಲಿ ಸ್ಥಗಿತಗೊಂಡಿದ್ದರೂ, ಟಾಟಾ ಮೋಟಾರ್ಸ್ ಇದೀಗ ಟಾಟಾ ನ್ಯಾನೋ ಎಲೆಕ್ಟ್ರಿಕ್‌ನೊಂದಿಗೆ (Tata Nano EV) ಮಾರುಕಟ್ಟೆ ಗೆ ಎಂಟ್ರಿಕೊಡಲು ಸಿದ್ಧವಾಗಿದೆ. ಈ ಕಾರು ಉತ್ತಮ ಗುಣಮಟ್ಟದ ವೈಶಿಷ್ಟ್ಯ ವನ್ನು ಹೊಂದಿದ್ದು ಪ್ರಯಾಣ ಮಾಡಲು ಕೂಡ‌ ಹಿತಕರ ಮತ್ತು ಆರಾಮದಾಯಕ ಅನುಭವ ಕೂಡ ನೀಡಲಿದೆ. ಉತ್ತಮ ವಿನ್ಯಾಸದೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಗಳಿರಲಿದ್ದು, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದೆ ಈ ಕಾರು.

advertisement

Image Source: Times Of India

Tata Nano EV ವೈಶಿಷ್ಟ್ಯ ಹೇಗಿದೆ?

  • ದೈನಂದಿನ ಪ್ರಯಾಣಕ್ಕೆ ಈ ಕಾರು ಹಿತಕರ ಪ್ರಯಾಣ ನೀಡಲಿದೆ.
  • ಈ ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಸಿಸ್ಟಮ್ ಕೂಡ ಹೊಂದಿದೆ
  • ಅದೇ ರೀತಿ ಈ ಕಾರು ಉತ್ತಮ ಬ್ಯಾಟರಿ ಪ್ಯಾಕ್, ಸುಧಾರಿತ ಸಂಪರ್ಕ ವೈಶಿಷ್ಟ್ಯಗಳೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಕೂಡ ಹೊಂದಿದೆ
  • ಅದೇ ರೀತಿ ಈ ಕಾರು 23 HP ಗರಿಷ್ಠ ಪವರ್ ಹಾಗೂ 85 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ
  • 24 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 250 km ನಿಂದ 315km ರೇಂಜ್ ನೀಡಲಿದೆ

ಈ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಈಗಾಗಲೇ ಹೆಚ್ಚಿನ ಕ್ಯುರಾಸಿಟಿ ಹೊಂದಿದ್ದು ಇದರ ಬೆಲೆ ರೂ 4.00 ಲಕ್ಷದ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎನ್ನಲಾಗಿದೆ.

advertisement

Leave A Reply

Your email address will not be published.