Karnataka Times
Trending Stories, Viral News, Gossips & Everything in Kannada

JioPay: Paytm, PhonePe, Google Pay ಜೊತೆಗೆ ಸ್ಪರ್ಧಿಸಲಿದೆ ಜಿಯೋ ಪೇ! ವಿಶೇಷ ಸೌಲಭ್ಯ ಘೋಷಿಸಿದ ಮುಕೇಶ್ ಅಂಬಾನಿ!

advertisement

ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡಿರುವ ಏಕೈಕ ಟೆಲಿಕಾಂ ಕಂಪನಿ ಜಿಯೋ. ಭಾರತೀಯ ದೂರಸಂಪರ್ಕ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಿಯೋ ಕಂಪನಿ ಡಿಜಿಟಲ್ ಕ್ಷೇತ್ರದಲ್ಲಿ ಮೋಡಿಯನ್ನೇ ಮಾಡಿದೆ.

ಇದೀಗ ಯುಪಿಐ ಪಾವತಿ (UPI Payment) ವ್ಯವಸ್ಥೆಯನ್ನು ಕೂಡ ಜಿಯೋ (Jio) ಗ್ರಾಹಕರಿಗೆ ನೀಡಿದ್ದು ಪೇಟಿಎಂ (Paytm) ಫೋನ್ ಮೊದಲಾದವುಗಳ ಜೊತೆಗೆ ನೇರವಾಗಿ ಸ್ಪರ್ಧಿಸಲಿದೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ಪೇಟಿಎಂ ಸೌಂಡ್ ಬಾಕ್ಸ್ (Paytm Sound Box) ಅನ್ನು ನೀವು ನೋಡಿರುತ್ತೀರಿ ಇದೀಗ ಜಿಯೋ ಕೂಡ ಈ ಸೌಲಭ್ಯವನ್ನು ಅಂಗಡಿ ಮಾಲೀಕರಿಗೆ ಒದಗಿಸಿ ಕೊಡಲಿದ್ದು, ಇನ್ನು ಮುಂದೆ ನೀವು ಪಾವತಿ ಮಾಡಿದ ನಂತರ ಜಿಯೋ ಸೌಂಡ್ ಬಾಕ್ಸ್ ಕೆಲಸ ಮಾಡಲಿದೆ.

advertisement

ಹೌದು, ಜಿಯೋ ಸೌಂಡ್ ಬಾಕ್ಸ್ (Jio Sound Box) ಸಹಾಯದಿಂದ ತನ್ನ ಕಂಪನಿಯ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಇದಕ್ಕೆ ಜಿಯೋ ಪೇ ಆಪ್ (JioPay App) ಬಳಸಲಾಗುವುದು. ಶೀಘ್ರದಲ್ಲಿಯೇ ಎಲ್ಲಾ ಅಂಗಡಿಗಳಲ್ಲಿಯೂ ಜಿಯೋ ಸೌಂಡ್ ಬಾಕ್ಸ್ (Jio Sound Box) ಅಳವಡಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಈಗಾಗಲೇ ಪ್ರಯೋಗ ಕೂಡ ಪ್ರಾರಂಭವಾಗಿದೆ. ಅಂಗಡಿ ಮಾಲೀಕರಿಗೆ ಜಿಯೋ ಪೇ ಆಪ್ ಬಳಸುವಂತೆ ಮುಕೇಶ್ ಅಂಬಾನಿ (Mukesh Ambani) ಕಂಪನಿ ವಿಶೇಷ ಕೊಡುಗೆಯನ್ನು ನೀಡಲಿದೆ. ಹೀಗಾಗಿ ಪೇಟಿಎಂ (Paytm), ಫೋನ್ ಪೇ (PhonePe), ಗೂಗಲ್ ಪೇ (Google Pay) ಯಂತಹ ಅಪ್ಲಿಕೇಶನ್ಗಳ ಜೊತೆಗೆ ಜಿಯೋ ನೇರವಾಗಿ ಸ್ಪರ್ಧಿಸಲಿದೆ.

 

 

ಈಗಾಗಲೇ ಆರ್‌ಬಿಐ (RBI) ಪೇಟಿಎಂ ಅನ್ನು ಬ್ಯಾನ್ ಮಾಡಿದೆ. ಆದ್ರೆ ಗ್ರಾಹಕರು ಪೇಟಿಎಂ ಯುಪಿಐ ಅನ್ನು ಬಳಸಬಹುದು ಎಂದು ಆರ್‌ಬಿಐ ತಿಳಿಸಿದೆ. ಇದರ ಜೊತೆಗೆ ಈಗ ಜಿಯೋ ತೆಗೆದುಕೊಂಡ ಈ ಮಹತ್ವದ ನಿರ್ಧಾರದಿಂದ, ಇತರ ಯುಪಿಐ ಪೇಮೆಂಟ್ ಅಪ್ಲಿಕೇಶನ್ ಗಳು ಸೈಡ್ ಲೈನ್ ಆಗುವ ಸಾಧ್ಯತೆ ಎದ್ದು ಕಾಣಿಸುತ್ತಿದೆ.

advertisement

Leave A Reply

Your email address will not be published.