Karnataka Times
Trending Stories, Viral News, Gossips & Everything in Kannada

RBI: ಇದೀಗ ಮತ್ತೊಂದು ಬ್ಯಾಂಕಿನ ಮೇಲೆ ನಿರ್ಬಂಧ ಹೇರಿದ ರಿಸರ್ವ್ ಬ್ಯಾಂಕ್! ಧೀಡಿರ್ ಆದೇಶ

advertisement

ಸ್ನೇಹಿತರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಮಹಾರಾಷ್ಟ್ರದಲ್ಲಿ ಇರುವ ಶಿರ್ ಪೂರ್ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕಿನ (Shirpur Merchant Cooperative Bank) ಅರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೆಲ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, ಇದರಿಂದಾಗಿ ಈ ಬ್ಯಾಂಕಿನಲ್ಲಿ ಹೂಡಿಕೆ ಮಾಡಿರುವಂತಹ ಗ್ರಾಹಕರು ಬ್ಯಾಂಕ್ನ ಆರ್ಥಿಕ ಪರಿಸ್ಥಿತಿ ಸುಗಮಗೊಳ್ಳುವವರೆಗೂ ತಮ್ಮ ಸೇವಿಂಗ್ (Saving Account) ಅಥವಾ ಕರೆಂಟ್ ಅಕೌಂಟ್ನಲ್ಲಿ (Current Account) ಠೇವಣಿ ಮಾಡಿರುವಂತಹ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.

ಪೇಟಿಎಂ ಪೇಮೆಂಟ್ ಬ್ಯಾಂಕಿಗೂ ಇದೇ ನಿರ್ಬಂಧ!

ಈ ಹಿಂದೆ ಮುಂಬೈನಲ್ಲಿರುವ ಪೇಟಿಎಂ ಪೇಮೆಂಟ್ ಬ್ಯಾಂಕ್ (Paytm Payment Bank, Mumbai)ಗೆ, ಇದೇ ರೀತಿಯಾದಂತಹ ಆರ್ಥಿಕ ಸಂಕಷ್ಟ ಎದುರಾದ ಕಾರಣ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕ್ರಮ ಕೈ ತೆಗೆದುಕೊಂಡು ಗ್ರಾಹಕರು ಬ್ಯಾಂಕಿನಲ್ಲಿ ಹೂಡಿಕೆ ಮಾಡಿದಂತಹ ಹಣವನ್ನು ಹಿಂಪಡೆಯಲು ಸಾಧ್ಯವಾಗದಂತೆ ಮಾಡಿತ್ತು. ಈ ವಿಷಯ ಇನ್ನು ಸಂಪೂರ್ಣ ತಣ್ಣಗಾಗಿಲ್ಲ, ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮತ್ತೊಂದು ಬ್ಯಾಂಕ್ ಇದೆ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಶಿರ್ಪುರ್ ಮರ್ಚೆಂಟ್ ಕಾರ್ಪೊರೇಟಿವ್ ಬ್ಯಾಂಕ್ಗೆ ಆರ್ಥಿಕ ಸಂಕಷ್ಟ!

 

Image Source: Justdial

 

ಕಳೆದ ಸೋಮವಾರ ಆರ್ಥಿಕ ವಹಿವಾಟಿನ ಮುಕ್ತಾಯ ದಿನದ ನಂತರ, ಮಹಾರಾಷ್ಟ್ರದ ಶಿರ್ಪುರ್ ಮರ್ಚೆಂಟ್ ಕಾರ್ಪೊರೇಟಿವ್ ಬ್ಯಾಂಕ್ನ (Shirpur Merchant Cooperative Bank) ಆರ್ಥಿಕ ಪರಿಸ್ಥಿತಿಯ ಕುರಿತು ತನಿಖೆ ನಡೆಸಿದಂತ ಸೆಂಟ್ರಲ್ ಬ್ಯಾಂಕ್ ಕಠಿಣ ಕ್ರಮವನ್ನು ಕೈ ತೆಗೆದುಕೊಂಡಿದ್ದು, ಇದೀಗ ಶಿರ್ಪುರ್ ಮರ್ಚೆಂಟ್ ಬ್ಯಾಂಕ್ ನಲ್ಲಿ ಕೇಂದ್ರ ಬ್ಯಾಂಕ್ ಅಥವಾ RBI ನ ಅನುಮತಿ ಇಲ್ಲದೆ ಯಾವುದೇ ರೀತಿಯ ಹೊಸ ಸಾಲವನ್ನು ನೀಡಲು ಸಾಧ್ಯವಾಗುವುದಿಲ್ಲ, ಜೊತೆಗೆ ಬ್ಯಾಂಕ್ ತನ್ನ ಆಸ್ತಿ ಅಥವಾ ಸ್ವತ್ತನ್ನು ವರ್ಗಾವಣೆ ಮಾಡಲು ಕೂಡ ಆಗುವುದಿಲ್ಲ.

advertisement

ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣವನ್ನು ತೆಗೆಯಲು ಸಾಧ್ಯವಿಲ್ಲ!

 

Image Source: India TV News

 

ಈ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿರುವಂತಹ ಗ್ರಾಹಕರು ಯಾವುದೇ ಕಾರಣಕ್ಕೂ ತಮ್ಮ ಉಳಿತಾಯ ಖಾತೆಯಲ್ಲಿ ಇರುವಂತಹ ಹಣವನ್ನು ಹಿಂಪಡೆಯಲು ಸಾಧ್ಯವಾಗದಂತೆ ಮಾಡಿದೆ, ಹಾಗೂ ಮತ್ತಷ್ಟು ಸೇವೆಗಳಲ್ಲಿ ನಿರ್ಬಂಧವನ್ನು ವಿಧಿಸಿದೆ. ಇದರಿಂದಾಗಿ ಗ್ರಾಹಕರು ಸಮಸ್ಯೆಯನ್ನು ಎದುರಿಸಬೇಕಾದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಮುಂದಿನ ಆರು ತಿಂಗಳವರೆಗೂ ಬ್ಯಾಂಕ್ ಸ್ಥಗಿತ!

ಏಪ್ರಿಲ್ 8, 2024 ರಂದು ಶಿರ್ಪುರ್ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್ (Shirpur Merchant Cooperative Bank) ಮೇಲೆ ಏರಲಾದಂತ ನಿರ್ಬಂಧವು ಮುಂದಿನ ಆರು ತಿಂಗಳ ಕಾಲ ಮುಂದುವರೆಯಲಿದ್ದು, ಬ್ಯಾಂಕಿನ ಅನೇಕ ವಹಿವಾಟುಗಳು ಈ ಅವಧಿಯಲ್ಲಿ ಸ್ಥಗಿತಗೊಂಡಿದೆ. ಆದರೆ ಆರ್ಬಿಐ ಯಾವುದೇ ಕಾರಣಕ್ಕೂ ಬ್ಯಾಂಕಿನ ಲೈಸೆನ್ಸ್ ರದ್ದುಗೊಳಿಸುವುದಿಲ್ಲ ಬದಲಿಗೆ ಸ್ವಲ್ಪ ಸಮಯಗಳ ನಂತರ ಬ್ಯಾಂಕ್ ತನ್ನ ಆರ್ಥಿಕ ಸ್ಥಿತಿಯನ್ನು ಚೇತರಿಸಿಕೊಂಡರೆ ಯಥಾಪ್ರಕಾರ ಕಾರ್ಯನಿರ್ವಹಿಸಲಿದೆ ಎಂಬ ಸೂಚನೆಯನ್ನು ಆರ್ಬಿಐ ಹೊರಡಿಸಿದೆ.

ಜೊತೆಗೆ ಶಿರ್ಪೂರ್ ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಹೂಡಿಕೆ ಮಾಡಿರುವಂತಹ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ನಿಂದ ಬರೋಬ್ಬರಿ ಐದು ಲಕ್ಷ ರೂಪಾಯಿಗಳ ವರೆಗೂ ವಿಮೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂಬ RBI ಅಧಿಸೂಚನೆಯನ್ನು ನೀಡಿದೆ.

advertisement

Leave A Reply

Your email address will not be published.