Karnataka Times
Trending Stories, Viral News, Gossips & Everything in Kannada

NWKRTC: ಉತ್ತರ ಕರ್ನಾಟಕದಲ್ಲಿ ಸರಕಾರಿ ಬಸ್ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ!

advertisement

ಈಗಂತೂ ಡಿಜಿಟಲ್ ವ್ಯವಹಾರ ಎಲ್ಲೆಡೆ ಇದೆ ಎಂದು ಹೇಳಬಹುದು. ಸಣ್ಣ ಪುಟ್ಟ ಕಿರಾಣಿ ಅಂಗಡಿಯಿಂದ ದೊಡ್ಡ ಮಟ್ಟದ ಅಂಗಡಿವರೆಗೂ ಈಗ ಡಿಜಿಟಲ್ ಪೇ ಬಳಸಲಾಗುತ್ತಿದೆ. ಹಾಗೆ ಇದ್ದರೂ ಕೂಡ ಬಸ್ ವ್ಯವಸ್ಥೆಯಲ್ಲಿ ಇನ್ನು ಕೂಡ ಹಣಕಾಸಿನ ವಹಿವಾಟು ನಡೆಯುತ್ತಿದೆ. ಹಾಗಾಗಿ ಬಸ್ ವ್ಯವಸ್ಥೆಯಲ್ಲಿ ಕೂಡ ಡಿಜಿಟಲ್ ಪೇಮೆಂಟ್ ಸಿಸ್ಟಂ ತರಲು ಸರಕಾರ ಮುಂದಾಗಿದೆ. ಈ ಮೂಲಕ ಸರಕಾರಿ ಬಸ್ ನಲ್ಲಿ ಡಿಜಿಟಲ್ ಪೇಮೆಂಟ್ ಅನ್ನು ಬೆಂಬಲಿಸಲಾಗುತ್ತಿದ್ದು ವಾಯುವ್ಯ ಕರ್ನಾಟಕ ಸಾರಿಗೆ ಬಸ್ ವ್ಯವಸ್ಥೆಯಲ್ಲಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಸರಕಾರಿ ಬಸ್ ನಲ್ಲಿ UPI ಆಧಾರಿತ ವ್ಯವಸ್ಥೆ ಜಾರಿಗೆ ತರಲು ಮುಂದಾಗಲಾಗಿದೆ‌.

ನಗದು ರಹಿತ ವ್ಯವಹಾರಕ್ಕೆ ಒತ್ತು?

ನಗದು ರಹಿತ ವ್ಯವಹಾರಕ್ಕೆ ಬೆಂಬಲ ನೀಡುವ ಸಲುವಾಗಿ ಸರಕಾರವು ಈ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ನಗದು ರಹಿತ ವ್ಯವಹಾರವನ್ನು ಜಾರಿಗೆ ತಂದಿದೆ. 2024ರ ಜನವರಿಯಲ್ಲಿ ಮೊದಲ ಬಾರಿಗೆ UPI ಆಧಾರಿತ ಸೇವೆಯನ್ನು ಹುಬ್ಬಳ್ಳಿಯಲ್ಲಿ ಜಾರಿಗೆ ತರಲಾಗಿದೆ. ಇದು ಸಮಯದ ಉಳಿತಾಯ ಆಗುವ ಜೊತೆಗೆ ವ್ಯವಹಾರ ಸುಲಭತೆಗೂ ಕೂಡ ಉಪಯುಕ್ತ ಆಗಲಿದೆ. ಸಾರಿಗೆ ಸಿಬಂದಿ ಹಾಗೂ ನಿಗಮದಿಂದ ನಿರೀಕ್ಷೆಗೂ ಮೀರಿ ಬೆಂಬಲಿಸಲಾಗಿದೆ.

ಸಾರಿಗೆ ಸಚಿವರಿಂದ ಸ್ಪಷ್ಟನೆ

advertisement

ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು NWKRTC ಯಲ್ಲಿ ನಗದು ರಹಿತ ವಹಿವಾಟನ್ನು UPI ಪೇಮೆಂಟ್ ಆ್ಯಪ್ ಜಾರಿಗೆ ತರಲಾಗುತ್ತಿದೆ. ಈ ಮೂಲಕ ಎಲ್ಲ ಜನತೆಗೆ ಈ ಸೇವೆ ಸಿಗಲಿದ್ದು ಇನ್ನು ಮುಂದೆ ಎಲ್ಲ ಸಾರಿಗೆ ಬಸ್ ಗಳಲ್ಲೂ ಇದೆ ಸೇವೆ ಸಿಗುವುದಾಗಿ ಸಾರಿಗೆ ಸಚಿವರು ತಿಳಿಸಿದ್ದಾರೆ. ಸಚಿವ ರಾಮಲಿಂಗ ರೆಡ್ಡಿ (Ramalinga Reddy)  ಅವರು ಫೆಬ್ರವರಿಯಂದು ಗದಗ ದಲ್ಲಿ ಸಾರಿಗೆ ಬಸ್ ನ UPI ಸೇವೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ 15,000 ರೂಪಾಯಿಯಂತೆ 14ಲಕ್ಷ ರೂಪಾಯಿಯನ್ನು ಸಂಗ್ರಹ ಮಾಡಲಾಗುತ್ತಿದೆ.

ಜಾಗೃತಿ ಪಾಕ್ಷಿಕ

ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ವಾಯುವ್ಯ ಸಾರಿಗೆ ಸಂಸ್ಥೆಯು ಮಾರ್ಚ್ 3ರಿಂದ 16ರ ವರೆಗೆ UPI ಪೇಮೆಂಟ್ ಪಾವತಿ ಜಾಗೃತಿ ಪಾಕ್ಷಿಕವನ್ನು ಅದರ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಒಂದು ಅಭಿಯಾನ ಯಶಸ್ವಿಯಾಗಬೇಕೆಂಬ ಕಾರಣಕ್ಕೆ ವಿವಿಧ ಘಟಕಗಳಿಗೆ ನಗದು ಮತ್ತು ಪ್ರಶಂಸನಾ ಪತ್ರ ನೀಡಲು ಚಿಂತಿಸಲಾಗುತ್ತಿದೆ. ಮೊದಲ ವಿಭಾಗಕ್ಕೆ 10,000 ಹಾಗೂ ಮೊದಲ ಘಟಕಕ್ಕೆ 5,000 ರೂಪಾಯಿ ಸಿಗಲಿದೆ. ಅದರೊಂದಿಗೆ ಅತಿ ಹೆಚ್ಚು UPI ವ್ಯವಹಾರ ಮಾಡುವ ನಿರ್ವಾಹಕರಿಗೆ 1000 ಬಹುಮಾನ ಮೊತ್ತ ಹಾಗೂ ಪ್ರಶಂಸನಾ ಪತ್ರ ಸಹ ನೀಡಲಾಗುವುದು.

ಹೊಸ ಬಸ್ ಖರೀದಿ

ಸರಕಾರಿ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣದಿಂದಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿಸಲು ಸರಕಾರ ಮುಂದಾಗಿದೆ. ಇದರ ಮೊದಲ ಹಂತವಾಗಿ ಉತ್ತರ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 884 ಹೊಸ ಬಸ್ ಖರೀದಿ ಮಾಡಲಾಗುವುದು ಹಾಗೂ 334 ಬಸ್ ಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಇತ್ತೀಚೆಗಷ್ಟೇ ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.

advertisement

Leave A Reply

Your email address will not be published.