Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಹೊಸ ಮಾಹಿತಿ!

advertisement

ರಾಜ್ಯ ಸರಕಾರ ಮಹಿಳಾ ಪರವಾದ ಯೋಜನೆಯನ್ನು ಹೆಚ್ಚಾಗಿ ಜಾರಿಗೆ ತರುತ್ತಿದೆ. ಮಹಿಳೆಯರನ್ನು ಆರ್ಥಿಕ ವಾಗಿ ಬೆಂಬಲಿಸಬೇಕು, ಅವರಿಗೆ ಬೇಕಾದ ಮೂಲಭೂತ ಅವಶ್ಯಕ ವಸ್ತುಗಳನ್ನು‌ ಖರೀದಿ ಮಾಡುವಂತೆ ಆಗಬೇಕು‌ ಎಂದು ರಾಜ್ಯ ಸರಕಾರ ಮನೆಯ ಯಜಮಾನಿ ಮಹಿಳೆಗೆ‌ ತಿಂಗಳಿಗೆ ಎರಡು ಸಾವಿರ ರೂಪಾಯಿ‌ ನೀಡುವ ‌ಮೂಲಕ ಖಾತೆಗೆ ಹಣ ಜಮೆ ಮಾಡುತ್ತಿದೆ. ಈಗಾಗಲೇ ಹೆಚ್ಚಿನ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು ಕೆಲವು ಮಹಿಳೆಯರು ನೋಂದಣಿ ಮಾಡಿದ್ರೂ ಹಣ ಜಮೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Gruha Lakshmi Yojana ಹಣ ಬಂದಿಲ್ಲ ಯಾಕೆ?

 

Image Source: Hindustan Times

 

  • ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ನೊಂದಣಿ ಮಾಡಿದ್ರೂ ಹಣ ಯಾಕೆ ಬಂದಿಲ್ಲ ಎಂಬ ಸ್ಪಷ್ಟನೆ ಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಪಷ್ಟನೆಯನ್ನು ನೀಡಿದ್ದಾರೆ. ಹೆಚ್ಚಿನ ‌ಜನರ ರೇಷನ್ ಕಾರ್ಡ್ (Ration Card) ನಲ್ಲಿ ಪುರುಷ ಯಜಮಾನನ ಹೆಸರು ಮೊದಲ ಪುಟದಲ್ಲಿ ಇದ್ದು ಇದನ್ನು ಇನ್ನು ಕೂಡ ತಿದ್ದುಪಡಿ ಮಾಡಿಲ್ಲ ಹಾಗಾಗಿ ಈ ಹಣ ಜಮೆಯಾಗಿಲ್ಲ.
  • ಕೆಲವು ಮಹಿಳೆಯರು ನೋಂದಾವಣೆ ಮಾಡಿದ್ರೂ ಹಣ ಬಾರದೇ ಇರಲು ಕಾರಣ ತಾಂತ್ರಿಕ ದೋಷ ಮತ್ತು ದಾಖಲೆಗಳು ಸರಿಯಾಗಿಲ್ಲ, ಹಾಗಾಗಿ ಈ ಬಗ್ಗೆ ಮಹಿಳೆಯರು ಎಚ್ಚೆತ್ತುಕೊಂಡು ದಾಖಲೆ ಸರಿಪಡಿಸಬೇಕು.
  • ಒಬ್ಬ ಮಹಿಳೆಯ ಹೆಸರಿನಲ್ಲಿ ಮೂರು, ನಾಲ್ಕು ಖಾತೆಗಳಿದ್ದರೂ ಅಂತಹವರಿಗೆ ಗೃಹಲಕ್ಷ್ಮಿಯ ಹಣ (Gruha Lakshmi Money) ಬರುವುದಿಲ್ಲ.
  • ಇನ್ನೂ ಆಧಾರ್ ಆಪ್ಡೆಟ್, ಇ ಕೆವೈಸಿ ಸಮಸ್ಯೆ ಬ್ಯಾಂಕ್ ಖಾತೆ ಲಿಂಕ್ , ಇತ್ಯಾದಿ ಅಪ್ಡೇಟ್ ಆಗದೇ ಇರೋ ಕಾರಣವು ಹಣ ಜಮೆಯಾಗಿಲ್ಲ.
  • ನೋಂದಣಿ ಮಾಡಿದ ಮಹಿಳೆಯರ ಹೆಸರು, ವಿಳಾಸ ದಾಖಲೆಗಳು ಸರಿ ಇಲ್ಲದೆ ಇದ್ದಲ್ಲಿ ಅರ್ಜಿ ವಿಲೇವಾರಿಯಾಗದೆ ಮಿಸ್‌ ಮ್ಯಾಚ್‌ ಆಗುತ್ತಿದೆ

advertisement

ಈ ಜಿಲ್ಲೆಯ ಮಹಿಳೆಯರು ಅರ್ಜಿ ಹಾಕಿಲ್ಲ:

 

Image Source: Deccan Herald

 

ಈ ಯೋಜನೆಗೆ ಈಗಾಗಲೇ 1.10 ಕೋಟಿ ಗಿಂತಲೂ ಹೆಚ್ಚಿನ ಮಹಿಳೆಯರು ಅರ್ಜಿ ಸಲ್ಲಿಸಿದ್ದು ಕೆಲವು ಜಿಲ್ಲೆಯ ಮಹಿಳೆಯರು ಇನ್ನೂ ಕೂಡ ಅರ್ಜಿ ಹಾಕಿಲ್ಲ. ಹಾಗಿದ್ರೆ ಯಾವ ಜಿಲ್ಲೆಯವರು ಅರ್ಜಿ ಹಾಕಿಲ್ಲ ಎಂಬ ಕುತೂಹಲ ನಿಮಗೆ ಇರಬಹುದು. ಹೌದು ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿಲ್ಲ, ಅದೇ ರೀತಿ ಬೆಳಗಾವಿ, ಮೈಸೂರು, ಕಲಬುರ್ಗಿ, ತುಮಕೂರು, ದಕ್ಷಿಣ ಕನ್ನಡ, ವಿಜಯಪುರ, ಧಾರವಾಡ, ಉಡುಪಿ ಇತ್ಯಾದಿ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸದೇ ಇರುವ ಮಹಿಳೆಯರು ಹೆಚ್ಚು ಇದ್ದಾರೆ. ಈ ಮೂಲಕ‌ ಸುಮಾರು 14 ಲಕ್ಷ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂಬ ಮಾಹಿತಿ‌ ವಿವಿಧ ಮೂಲಗಳಿಂದ ಲಭ್ಯವಾಗಿದೆ.

ಇನ್ನೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು:

ಈ ಯೋಜನೆಗೆ ಇನ್ನೂ ಕೂಡ ಅರ್ಜಿ‌ಸಲ್ಲಿಕೆ ಮಾಡಿಲ್ಲ ಎಂದಾದರೆ ಅರ್ಜಿ ಹಾಕಲು ಇನ್ನೂ ಕೂಡ ಅವಕಾಶ ಇದೆ.ಹಾಗಾಗಿ ಮಹಿಳೆಯರು ತಮ್ಮ ದಾಖಲೆಗಳನ್ನು‌ ಆಪ್ಡೆಟ್ ಮಾಡಿಕೊಂಡು ಅರ್ಜಿ ಹಾಕಬಹುದಾಗಿದೆ.

advertisement

Leave A Reply

Your email address will not be published.