Karnataka Times
Trending Stories, Viral News, Gossips & Everything in Kannada

7 Seater Car: ಎರ್ಟಿಗಾ, ಟೊಯೋಟಾಗಿಂತ ಹೆಚ್ಚುತ್ತಿದೆ ಈ 7 ಸೀಟ್ ಕಾರಿನ ಬುಕಿಂಗ್! ಬೈಕ್ ಗಿಂತ ಕಡಿಮೆ EMI ನಲ್ಲಿ ಮನೆಗೆ ತನ್ನಿ

advertisement

ಮನೆಯ ಎಲ್ಲಾ ಸದಸ್ಯರು ಸೇರಿ ಒಂದು ಟ್ರಿಪ್ ಅಥವಾ ಯಾವುದಾದರೂ ಮನೆಗೆ ಹೋಗಬೇಕು ಎಂದಾಗ ಏಳು ಜನರು ಕೂರಬಹುದಾದ ಕಾರು ಒಂದಿದ್ದರೆ ಕುಟುಂಬದ ಎಲ್ಲ ಸದಸ್ಯರು ಸೇರಿ ಒಟ್ಟಿಗೆ ಪ್ರಯಾಣ ಮಾಡಬಹುದು. ಹೀಗಾಗಿ ಭಾರತದಲ್ಲಿ ಇಂದಿಗೂ ಕೂಡ 7 ಸೀಟರ್ ಕಾರು (7 Seater Car)ಗಳ ಸೇಲ್ಸ್ ಹೆಚ್ಚಾಗಿಯೇ ಇದೆ. ಅದೇ ರೀತಿ ಹೊಸ ಮಾಡೆಲ್ ಕಾರ್ ಗಳಿಗೆ ಡಿಮಾಂಡ್ ಕೂಡ ಚೆನ್ನಾಗಿಯೇ ಇದೆ.

ಸೆವೆನ್ ಸೀಟರ್ ಕಾರು (7 Seater Car) ಗಳಲ್ಲಿ ಎಲ್ಲಾ ಬ್ರಾಂಡುಗಳಲ್ಲಿಯೂ ಕೂಡ ಒಂದಲ್ಲ ಒಂದು ಆಯ್ಕೆ ಇದ್ದೇ ಇರುತ್ತದೆ. ರೆನಾಲ್ಟ್ ಕಂಪನಿಯು ಕೂಡ 7 ಸೀಟರ್ ಕಾರನ್ನು ಹೊಂದಿದ್ದು ಈಗ ಇದನ್ನು ನೀವು ಒಂದು ಲಕ್ಷದ ಡೌನ್ ಪೇಮೆಂಟ್ ನೊಂದಿಗೆ ಮನೆಗೆ ತೆಗೆದುಕೊಂಡು ಹೋಗಬಹುದು.

ರೆನಾಲ್ಟ್ ಟ್ರೈಬರ್ (Renault Triber) ಹೊಸ ಕಾರು ಆಕರ್ಷಕವಾದ ಡೌನ್ ಪೇಮೆಂಟ್ ಹಾಗೂ EMI ಸ್ಕೀಮ್ ಗಳೊಂದಿಗೆ ನಿಮ್ಮ ಕೈ ಸೇರಬಹುದು. ಇದು ಬಹಳ ಪ್ರಸಿದ್ಧ ಕಾರು ಕೂಡ ಹೌದು. ಇದರ ಫೀಚರ್ಸ್ ಮತ್ತು ಇದರ ಪವರ್ಫುಲ್ ಇಂಜಿನ್ ಈ ಕಾರನ್ನು ಒಂದು ಉತ್ತಮ ಆಯ್ಕೆಯನ್ನಾಗಿಸುವುದು ಸುಳ್ಳಲ್ಲ.

Renault Triber Engine:

 

Image Source: Wikipedia

 

ಹೊಸ ರೆನಾಲ್ಟ್ ಟ್ರೈಬರ್ (Renault Triber) ನ ಇಂಜಿನ್ ಹಾಗೂ ಇದರ ಕ್ಷಮತೆಯ ಬಗ್ಗೆ ಮಾತನಾಡುವುದಾದರೆ ಇದು 999 ಸಿಸಿಯ ನ್ಯಾಚುರಲಿ ಆಸ್ಪೈರ್ಡ್ ಇಂಜಿನ್ ಹಾಗೂ ಒಂದು ಲೀಟರ್ ನ ಟರ್ಬೋ ಚಾರ್ಜ್ ಪೆಟ್ರೋಲ್ ಇಂಜಿನ್ ನ ಆಯ್ಕೆಯನ್ನು ಹೊಂದಿದೆ. ಈ ಕಾರಿನಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು 5 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಕೊಡಲಾಗಿದೆ.

advertisement

Renault Triber Mileage & Features:

 

Image Source: CarWale

 

ಈ ಕಾರು ನಿಮ್ಮ ಕುಟುಂಬಕ್ಕೆ ಎಂದಾಗ ಇದು ಎಷ್ಟು ಸೇಫ್ ಆಗಿದೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸ್ವಾಭಾವಿಕ. ಈ ಕಾರಿಗೆ ಸೇಫ್ಟಿ ರಾಂಕಿಂಗ್ ನಲ್ಲಿ ನಾಲ್ಕು ಸ್ಟಾರ್ ಗಳು ಸಿಕ್ಕಿರುವುದರಿಂದ ಯಾವುದೇ ಚಿಂತೆ ಇಲ್ಲದೆ ನೀವು ಈ ಕಾರನ್ನು ಡ್ರೈವ್ ಮಾಡಬಹುದು. ಇನ್ನು ಮೈಲೇಜ್ ನ ಬಗ್ಗೆ ಮಾತನಾಡುವುದಾದರೆ ಈ ಕಾರಿನಲ್ಲಿ 18.2 ಕಿಲೋಮಿಟರ್ ಪ್ರತಿ ಲೀಟರ್ ನ ಮೈಲೇಜ್ ಸಿಗಲಿದೆ. ಹೈವೇಯಲ್ಲಿ ಓಡಿಸುವುದಾದರೆ 20 km ಪ್ರತಿ ಲೀಟರ್ ನ ಮೈಲೇಜ್ ಕೂಡ ನಿಮಗೆ ಸಿಗಬಹುದು. 14 ಇಂಚಿನ ಸ್ಟೀಲ್ ವಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಎಲ್ಇಡಿ ಟೇಲ್ ಲೈಟ್ ಈ ಕಾರನ್ನು ಸುಂದರಗೊಳಿಸುತ್ತದೆ.

Renault Triber Variants and Prices:

 

Image Source: CarWale

 

ರೆನಾಲ್ಟ್ ಟ್ರೈಬರ್ (Renault Triber) ನ ಹೊಸ ಕಾರ್ ನಲ್ಲಿ ಹಲವಾರು ವೇರಿಯಂಟ್ ಗಳು ನಿಮಗೆ ಕಾಣಲು ಸಿಗುತ್ತವೆ. ಬೇಸ್ ವೇರಿಯಂಟ್ 6.3 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಅದೇ ರೀತಿ ಇದರ ಟಾಪ್ ಎಂಡ್ ವೇರಿಯಂಟ್ ನ ಎಕ್ಸ್ ಶೋರೂಮ್ ಬೆಲೆ 8.97 ಲಕ್ಷ ರೂಪಾಯಿಗಳು ಆಗಿದೆ. ಟಾಪ್ ಎಂಡ್ ಕಾರ್ ನಲ್ಲಿ ಪಾರ್ಕಿಂಗ್ ಸೆನ್ಸರ್ಸ್, ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋ, ಪವರ್ ವೈಪರ್, ಆಡಿಯೋ ಸಿಸ್ಟಮ್ ನಂತಹ ಆಯ್ಕೆಗಳು ನಿಮಗೆ ಸಿಗಲಿವೆ.

ಇದರ ಟಾಪ್ ಎಂಡ್ ವೇರಿಯಂಟ್ ನಲ್ಲಿ ಉತ್ತಮ ಫೀಚರ್ಸ್ ಇರುವುದರಿಂದ ಇದು ಖಂಡಿತ ಉತ್ತಮ ಆಯ್ಕೆಯಾಗಿದೆ. ಆದರೆ 8.97 ಲಕ್ಷವನ್ನು ಹೊಂದಿಸುವುದು ಕಷ್ಟ ಎಂದಾದರೆ ಕೇವಲ ಒಂದು ಲಕ್ಷ ರೂಪಾಯಿಗಳನ್ನು ಡೌನ್ ಪೇಮೆಂಟ್ ರೂಪದಲ್ಲಿ ನೀಡಿ, ಪ್ರತಿ ತಿಂಗಳು 12,799 ರೂಪಾಯಿಗಳನ್ನು ಕಟ್ಟುವ ಮುಖಾಂತರ ಕಾರನ್ನು ನಿಮ್ಮದಾಗಿಸಬಹುದು.

advertisement

Leave A Reply

Your email address will not be published.