Karnataka Times
Trending Stories, Viral News, Gossips & Everything in Kannada

KSRTC: ಹೊಸ ಸುತ್ತೋಲೆ ಹೊರಡಿಸಿದ KSRTC! ಸಂತಸದಲ್ಲಿ ಪೋಷಕರು

advertisement

ಪರೀಕ್ಷೆ ಸಂದರ್ಭದಲ್ಲಿ SSLC ಮಕ್ಕಳು ಉಚಿತವಾಗಿ KSRTC ಬಸ್ ನಲ್ಲಿ ಪ್ರಯಾಣ ಮಾಡಬಹುದು. ಎಲ್ಲಾ SSLC ಮಕ್ಕಳಿಗೆ ಇದೀಗ ಪರೀಕ್ಷಾ ಕೇಂದ್ರಗಳಿಗೆ ತಲುಪುವುದು ಇನ್ನಷ್ಟು ಸುಲಭವಾಗಲಿದೆ. ಇದರಿಂದ SSLC ವಿದ್ಯಾರ್ಥಿಗಳಿಗೆ ಹೊಸ ರೀತಿಯಾದಂತಹ ಸೌಲಭ್ಯವನ್ನು ಕಲ್ಪಿಸಿ ಕೊಡುವಂತಹ ವ್ಯವಸ್ಥೆ ಒಂದನ್ನು ಕೆಎಸ್ಆರ್ ಟಿಸಿ ಸಿ ಮಾಡಿದೆ.

ಇದರ ಕುರಿತಾಗಿ KSRTC ಸಾರಿಗೆ ಸಂಚಾರ ವ್ಯವಸ್ಥಾಪಕರು 14-02-2024ರಂದು ಎಲ್ಲೆಡೆ ಸುತ್ತೋಲೆಯನ್ನು ಹೊರಡಿಸಿದ್ದು,  SSLC ಮಕ್ಕಳ ಪರೀಕ್ಷೆಯು 25-03-2024 ರಿಂದ ಪ್ರಾರಂಭವಾಗಲಿದ್ದು, ಅವರ ಪರೀಕ್ಷಾ ಕೇಂದ್ರಗಳು ಅವರು ಓದಿರುವಂತಹ ವಿದ್ಯಾಸಂಸ್ಥೆಯನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಇರುವುದರಿಂದ ಪರೀಕ್ಷಾ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ತಲುಪುವಂತಹ ಸೌಲಭ್ಯವನ್ನು ಕಲ್ಪಿಸಬೇಕು ಎಂಬ ಹಿತ ದೃಷ್ಟಿಯಿಂದ ಸುತ್ತೋಲೆಯನ್ನು ಹೊರಡಿಸಿದ್ದಾರೆ.

 

Image Source: Star of Mysore

 

advertisement

ಇನ್ನು ಈ ಸುತ್ತೋಲೆಯ ಅಡಿಯಲ್ಲಿ SSLC ಮಕ್ಕಳು ತಾವು ಪರೀಕ್ಷಾ ಕೇಂದ್ರಗಳಿಗೆ ಬಸ್ ಪ್ರಯಾಣದ ಮೂಲಕ ತಲುಪುವ ವೇಳೆ, ಅವರ ಗುರುತಿನ ಚೀಟಿ (Identity Card) ಮತ್ತು Hall Ticket (ಪ್ರವೇಶ ಪತ್ರ) ಅನ್ನು ತೋರಿಸುವ ಮೂಲಕ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣ ಬೆಳೆಸಬಹುದಾದಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಈ ಸೌಲಭ್ಯವು ಪ್ರಸ್ತುತ SSLC ಯ ಶೈಕ್ಷಣಿಕ ವರ್ಷವಾದ 25-03-2024 ರಿಂದ 06-04-2024ರ ವರೆಗೆ ಮಾತ್ರ ಚಾಲ್ತಿಯಲ್ಲಿ ಇರಲಿದೆ.

 

Image Source: Kerala Kaumudi

 

ಇದರ ಜೊತೆಗೆ ಪರೀಕ್ಷಾ ಕೇಂದ್ರಗಳಿಗೆ ತಲುಪುವಾಗ ಮಾತ್ರವಲ್ಲದೆ ಪರೀಕ್ಷಾ ಕೇಂದ್ರದಿಂದ ಹಿಂದಿರುಗುವಾಗ ಕೂಡ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ತೋರಿಸಿ ಉಚಿತ ಬಸ್ ಸೇವೆ (Free Bus Service) ಪಡೆದುಕೊಳ್ಳಬಹುದಾಗಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ವೇಗದೂತ ಬಸ್ ಗಳು, ನಿಗಮದ ನಗರ, ಸಾಮಾನ್ಯ ಬಸ್ ಗಳು, ಹೊರವಲಯ ಈ ರೀತಿಯಾದಂತಹ ಬಸ್ ನಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಬಹುದಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸುಗಳ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳು ಇದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದರಿ ಮಾರ್ಗಗಳಲ್ಲಿ ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳುವಂತೆ ಸಂಚಾರಿ ವ್ಯವಸ್ಥಾಪಕರು ಸೂಚಿಸಿದ್ದಾರೆ.

ಇದರ ಕುರಿತಾಗಿ ಪ್ರತಿ ಬಸ್ ನಿಲ್ದಾಣದ ವ್ಯವಸ್ಥಾಪಕರು ಎಲ್ಲ ಮಕ್ಕಳಿಗೂ ತಿಳುವಳಿಕೆ ನೀಡುವಂತೆ ಬಸ್ ನಿಲ್ದಾಣದ ಫಲಕಗಳಲ್ಲಿ ಇದರ ಕುರಿತಾದಂತಹ ಮಾಹಿತಿಯನ್ನು ಸೂಚನೆಯಾಗಿ ಪ್ರಕಟಿಸಬೇಕೆಂದು ಸೂಚನೆ ನೀಡಲಾಗಿದೆ. ಮತ್ತು ಈ ಮೇಲ್ಕಂಡ ವಿಚಾರಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಸುತ್ತೋಲೆಯನ್ನು ನೀಡಲಾಗಿದೆ.

advertisement

Leave A Reply

Your email address will not be published.