Karnataka Times
Trending Stories, Viral News, Gossips & Everything in Kannada

HSRP ನಂಬರ್ ಪ್ಲೇಟ್ ಮಾತ್ರವಲ್ಲ ಕಾರಿನಲ್ಲಿ ಈ ದಾಖಲೆ ಇರಲೇಬೇಕು ಹೊಸ ರೂಲ್ಸ್!

advertisement

HSRP ನಂಬರ್ ಪ್ಲೇಟ್ ಗಳು ಯಾವ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ ಎನ್ನುವುದನ್ನ ನೀವೆಲ್ಲರೂ ತಿಳಿದುಕೊಂಡಿದ್ದೀರಿ. 2019 ರ ಒಳಗೆ ರಿಜಿಸ್ಟರ್ ಆಗಿರುವ ಅಥವಾ ಖರೀದಿ ಮಾಡಿರುವಂತಹ ವಾಹನಗಳ ಮೇಲೆ HSRP Number Plate ಇರಲೇ ಬೇಕಾಗಿದೆ.

ಇದರ ಜೊತೆಗೆ ಕಲರ್ ಕೋಡೆಡ್ ಸ್ಟಿಕರ್ ಕೂಡ ಅವಶ್ಯಕವಾಗಿದೆ. ಆದರೆ ಇವೆಲ್ಲದರ ಜೊತೆಗೆ ಮತ್ತೊಂದು ದಾಖಲಿ ಕೂಡ ಈಗ ಕಾರಿನಲ್ಲೇ ಇರಲೇಬೇಕು ಅನ್ನೋದಾಗಿ ತಿಳಿದು ಬಂದಿದ್ದು ಅದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲು ಹೊರಟಿದ್ದೇವೆ.

ಕಾರಲ್ಲಿ ಈ ದಾಖಲೆ ಇರಲೇಬೇಕು:

ಹೌದು ನಾವ್ ಮಾತಾಡ್ತಿರೋದು PUC Certificate ಬಗ್ಗೆ. ಇದು ನಿಮ್ಮ ವಾಹನದ ಹೊಗೆ ಚೆಕ್ ಮಾಡಿಸಿರುವಂತಹ ಸರ್ಟಿಫಿಕೇಟ್ ಆಗಿರುತ್ತದೆ. ನಿಮ್ಮ ವಾಹನದಿಂದ ಪರಿಸರದಲ್ಲಿ ಯಾವುದೇ ರೀತಿಯ ಮಾಲಿನಿ ಆಗೋದಿಲ್ಲ ಅಂತ ಲಿಖಿತ ರೂಪದಲ್ಲಿ ಹೇಳುವಂತಹ ಪತ್ರ ಇದಾಗಿದೆ. ಇದನ್ನ ಮಾಡಿಸುವುದಕ್ಕೆ ನಿಮಗೆ ಕೇವಲ ಐವತ್ತರಿಂದ ನೂರು ರೂಪಾಯಿಗಳ ಖರ್ಚಾಗಬಹುದಾಗಿದೆ ಅಷ್ಟೇ.

 

Image Source: Paytm

 

advertisement

ಇನ್ನು ಇದನ್ನು ಆಗಾಗ ನವೀಕರಣ ಮಾಡಬೇಕಾಗಿರುತ್ತದೆ. ಇನ್ನು ನೀವು ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರಲ್ಲಿ ಸಿಕ್ಕಿ ಬಿದ್ರೆ ನಿಮ್ಮ ಬಳಿ PUC Certificate ಇಲ್ಲದೆ ಹೋದಲ್ಲಿ ದೊಡ್ಡ ಮೊತ್ತದ ಫೈನ್ ಕಟ್ಟಬಹುದು ಕೆಲವೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗಿ ಬರುತ್ತದೆ.

PUC Certificate ಇಲ್ದೆ ಇದ್ರೆ ಫೈನ್ ಹಾಗೂ ಜೈಲ್:

 

Image Source: India TV Hindi

 

ಮೋಟಾರ್ ವೆಹಿಕಲ್ ಆಕ್ಟ್ 1993ರ 190(2)ರ ಪ್ರಕಾರ ಒಂದು ವೇಳೆ ನಿಮ್ಮ ಬಳಿ PUC Certificate ಇಲ್ಲದೆ ಹೋದಲ್ಲಿ ಅಥವಾ ಅದನ್ನ ನವೀಕರಣ ಮಾಡಿಸಿಕೊಳ್ಳದೆ ಹೋದಲ್ಲಿ ಆರು ತಿಂಗಳ ಜೈಲ್ ಅಥವಾ ಹತ್ತು ಸಾವಿರ ರೂಪಾಯಿಗಳ ದಂಡವನ್ನು ನೀಡಬೇಕಾದಂತಹ ಪರಿಸ್ಥಿತಿ ಬರುತ್ತದೆ. ಕೆಲವೊಂದು ಪರಿಸ್ಥಿತಿಗಳಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಮೂರು ತಿಂಗಳವರೆಗೆ ರದ್ದಾಗುವ ಸಾಧ್ಯತೆ ಇರುತ್ತದೆ.

PUC Certificate ಅನ್ನು ಎಲ್ಲಿ ಮಾಡಬೇಕು ಅನ್ನೋದಾಗಿ ನಿಮ್ಮಲ್ಲಿ ಅನುಮಾನ ಇದ್ದರೆ ಅದಕ್ಕೆ ನೀವು ಗೊಂದಲ ಪಡಬೇಕಾದ ಅಗತ್ಯವಿಲ್ಲ ನೇರವಾಗಿ ನಿಮ್ಮ ಹತ್ತಿರದ ಪೆಟ್ರೋಲ್ ಪಂಪ್ (Petrol Pump) ಗೆ ಹೋದರೆ ಅಲ್ಲಿಯೇ PUC Certificate ಮಾಡುವಂತಹ ಕೇಂದ್ರ ಇರುತ್ತದೆ.

ಇಲ್ಲಿ ಹೋಗಿ ನೀವು ಸುಲಭ ರೂಪದಲ್ಲಿ ಪ್ರದುಷಣ ಪ್ರಮಾಣ ಪತ್ರ ಅಂದ್ರೆ PUC Certificate ಅನ್ನು ಮಾಡಿಸಿಕೊಳ್ಳಬಹುದಾಗಿದ್ದು ಇದಕ್ಕೆ ಹೆಚ್ಚಿನ ಹಣ ಕೂಡ ಖರ್ಚಾಗುವುದಿಲ್ಲ. ಇದನ್ನು ಮಾಡಿಸಿಕೊಳ್ಳುವುದಕ್ಕೆ ಹೆಚ್ಚು ಸಮಯ ಕೂಡ ಆಗುವುದಿಲ್ಲ ಹೆಚ್ಚು ಹಣ ಕೂಡ ಖರ್ಚಾಗುವುದಿಲ್ಲ ಆದರೆ ಇದನ್ನು ಮಾಡಿಸಿಕೊಳ್ಳದೆ ಹೋದಲ್ಲಿ ಸಾಕಷ್ಟು ಸಮಸ್ಯೆಗಳನ್ನು ನೀವು ಅನುಭವಿಸಬೇಕಾಗುತ್ತದೆ.

advertisement

Leave A Reply

Your email address will not be published.