Mahindra Scorpio: ಟೊಯೋಟಾ ಫಾರ್ಚುನರ್ ಗಿಂತ ಹೆಚ್ಚು ಬುಕ್ ಕಾಣುತ್ತಿದೆ ಈ ಬೆಂಕಿ ಕಾರು! ಯುವಕರ ಫೇವರಿಟ್
ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra) ಭಾರತದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ಹಲವಾರು ದಶಕಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದೆ. ಫೆಬ್ರವರಿ 2024 ರಲ್ಲಿ ಭಾರತದಲ್ಲಿ ಮಾರಾಟವಾದ ಮಹೀಂದ್ರಾದ ಒಟ್ಟು ವಾಹನಗಳ ವರದಿ ಇದೀಗ ಹೊರಬಿದ್ದಿದೆ. ಭಾರತದಲ್ಲಿ ಕಂಪನಿಯ ಮಾರಾಟವು ವರ್ಷದಿಂದ ವರ್ಷಕ್ಕೆ ಸುಮಾರು 40% ರಷ್ಟು ಏರಿಕೆ ಕಂಡಿದೆ, ಟೊಯೋಟಾ ಫಾರ್ಚುನರ್ಗೆ ಸೆಡ್ಡು ಹೊಡೆದು ಅತಿ ಹೆಚ್ಚು ಸೇಲ್ ಆಗಿರುವ ಮಹೀಂದ್ರಾ ಕಂಪನಿಯ ಕಾರ್ ಯಾವುದು ನೋಡೋಣ.
ಮಹೀಂದ್ರಾ ಕಂಪನಿಯ ವರದಿಯಲ್ಲೇನಿದೆ ?
ಫೆಬ್ರವರಿ 2023 ರಲ್ಲಿ 1,087 ಯೂನಿಟ್ಗಳಿಗೆ ಹೋಲಿಸಿದರೆ ಫೆಬ್ರವರಿ 2024 ರಲ್ಲಿ 2,900 ಯುನಿಟ್ಗಳು ಮಾರಾಟವಾಗುವುದರೊಂದಿಗೆ 167% ಹೆಚ್ಚಳವಾಗಿದೆ. ಅಷ್ಟಕ್ಕೂ ಈ ಕಾರ್ ಟೊಯೋಟಾ ಫಾರ್ಚುನರ್ (Toyota Fortuner) ಗೆ ಸರಿಸಮವಾದ ಕಾರ್ಯ ವೈಖರಿ ಹೊಂದಿದ್ದು ಯುವ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
Mahindra Scorpio N/Classic ಹೆಚ್ಚು ಮಾರಾಟವಾಗಿದೆ:
ಕಳೆದ ತಿಂಗಳಲ್ಲಿ ಕಂಪನಿಯ ಸ್ಕಾರ್ಪಿಯೋ ಕ್ಲಾಸಿಕ್ (Mahindra Scorpio Classic) ಮತ್ತು ಸ್ಕಾರ್ಪಿಯೋ ಎನ್ (Mahindra Scorpio N) ಹೆಚ್ಚು ಮಾರಾಟವಾಗಿದೆ. ಈ ಎರಡು ವಾಹನಗಳ ಒಟ್ಟು 15,051 ಯುನಿಟ್ಗಳು ಮಾರಾಟವಾಗಿವೆ. ಸ್ಕಾರ್ಪಿಯೊ N ನ 7-ಆಸನಗಳ ಆವೃತ್ತಿಯು ಟೊಯೋಟಾ ಫಾರ್ಚುನರ್ (Toyota Fortuner) ಗೆ ಸಮನಾಗಿರುವ ಕಾರ್ ಆಗಿದೆ.
ಒಟ್ಟು ಎಷ್ಟು ಯುನಿಟ್ಗಳು ಮಾರಾಟವಾಗಿವೆ?
ಬೊಲೆರೊದ 10,113 ಯುನಿಟ್ಗಳು, XUV700 ನ 6,546 ಯುನಿಟ್ಗಳು, 5,812 ಥಾರ್ ಘಟಕಗಳು, 4,218 ಯುನಿಟ್ಗಳು XUV300, 610 ಯುನಿಟ್ಗಳು ಒಟ್ಟು 42,401 ಯುನಿಟ್ಗಳು ಮಾರಾಟವಾಗಿವೆ.
Mahindra Scorpio N Price:
ಮಹೀಂದ್ರ ಸ್ಕಾರ್ಪಿಯೊ ಎನ್ (Mahindra Scorpio N) ಬೆಲೆ 13.60 ಲಕ್ಷದಿಂದ 24.54 ಲಕ್ಷದವರೆಗೆ ಇರುತ್ತದೆ. ಇದು 6 ಮತ್ತು 7 ಆಸನಗಳ ಸಾಮರ್ಥ್ಯದೊಂದಿಗೆ ಬರುತ್ತದೆ. RWD ಮತ್ತು 4WD ಡ್ರೈವ್ ಪ್ರಕಾರವೂ ವಾಹನದಲ್ಲಿ ಲಭ್ಯವಿರುತ್ತದೆ. ಈ ಎಸ್ಯುವಿಯಲ್ಲಿ ಕಂಪನಿಯು ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ಗಳನ್ನು ನೀಡಿದೆ.