Karnataka Times
Trending Stories, Viral News, Gossips & Everything in Kannada

Tata Car: ಕಡಿಮೆ ಬೆಲೆಯ ಟಾಟಾದ ಈ ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ! ಇನೋವಾ ಎರ್ಟಿಗಾ ಇನ್ಮೇಲೆ ಲೆಕ್ಕಕ್ಕಿಲ್ಲ

advertisement

ಭಾರತದಲ್ಲಿ 7 ಸೀಟರ್ ಕಾರು (7 Seater Car) ಗಳ ಬೇಡಿಕೆ ಹೆಚ್ಚಾಗಿದೆ. ಭಾರತ ಒಂದು ಕೂಡು ಕುಟುಂಬ ಇರುವ ದೇಶ ಆದ್ದರಿಂದ ಇಲ್ಲಿ ಕುಟುಂಬದ ಎಲ್ಲರೂ ಸೇರಿ ಪ್ರಯಾಣಿಸಬಹುದಾದ ಕಾರುಗಳ ಬೇಡಿಕೆ ಮೊದಲಿನಿಂದಲೂ ಹೆಚ್ಚಾಗಿಯೇ ಇತ್ತು. ಈ ಸೆಗ್ಮೆಂಟನ್ನು ಮೊದಲಿನಿಂದಲೂ ಲೀಡ್ ಮಾಡುತ್ತಿರುವ ಕಾರುಗಳೆಂದರೆ ಇನ್ನೋವಾ (Innova) ಹಾಗೂ ಅರ್ಟಿಗಾ (Ertiga). ಬೇರೆ ಕಂಪನಿಗಳ ಏಳು ಸೀಟರ್ ಕಾರ್ ಗಳು ಕೂಡ ಮಾರುಕಟ್ಟೆಯಲ್ಲಿ ಇದ್ದರೂ, ಈ ಎರಡು ಕಾರುಗಳೇ ಅತ್ಯಂತ ಹೆಚ್ಚಿನ ಸೇಲ್ಸ್ ಕಾಣುತ್ತಿತ್ತು. ಆದರೆ ಈಗ ಈ ಕಾರುಗಳಿಗೆ ಒಂದು ದೊಡ್ಡ ಕಾಂಪಿಟೇಶನ್ ಎದುರಾಗಲಿದೆ.

ಇನ್ನೋವಾ ಹಾಗೂ ಅರ್ಟಿಗಾ ಕಾರುಗಳಿಗೆ ಪೈಪೋಟಿ ನೀಡುವ ಕಾರು ಯಾವುದು ಎಂದು ನೀವು ಊಹೆ ಮಾಡುತ್ತಿದ್ದಲ್ಲಿ ಅದಕ್ಕೆ ಉತ್ತರ ಇಲ್ಲಿದೆ. ಟಾಟಾ ಸುಮೋ (Tata Sumo) ಹೊಸ ಏಳು ಸೀಟರ್ ಕಾರ್ ಆಗಿ ಮಾರ್ಪಾಡುಕೊಂಡು ನಿಮ್ಮ ಮುಂದೆ ಸದ್ಯದಲ್ಲೇ ಲಾಂಚ್ ಆಗಲಿದೆ ಎಂದು ವರದಿಗಳು ಹೇಳುತ್ತಿವೆ. ಈ ಸುದ್ದಿ ನಿಜವಾದಲ್ಲಿ 7 ಸೀಟರ್ ಕಾರ್ (7 Seater Car) ಗಳ ಮಾರುಕಟ್ಟೆಗೆ ದೊಡ್ಡ ಎಂಟ್ರಿ ಆಗಲಿದೆ.

ಈಗಾಗಲೇ ಟಾಟಾ ಟಿಯಾಗೋ (Tata Tiago), ನೆಕ್ಸಾನ್ (Tata Nexon) ಮತ್ತು ಹಾರಿಯರ್ (Tata Harrier)  ಮುಂತಾದ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಪಡೆಯುತ್ತಿದೆ. ಡಿಸೈನ್ ಮತ್ತು ಪರ್ಫಾರ್ಮೆನ್ಸ್ ಎರಡೂ ವಿಷಯಗಳಲ್ಲಿ ಟಾಟಾ ಮೊದಲಿಗಿಂತ ಉತ್ತಮವಾಗಿದೆ. ಈಗ ಅದೇ ರೀತಿಯಲ್ಲಿ ತನ್ನ ಹಳೆಯ ಕಾಲದ ಪ್ರಖ್ಯಾತ ಮಾಡೆಲ್ ಆಗಿದ್ದ ಸುಮೋ (Tata Sumo) ಅನ್ನು ಬದಲಾವಣೆ ಮಾಡಿ ಏಳು ಸೀಟರ್ ಕಾರ್ ಆಗಿ ಲಾಂಚ್ ಮಾಡುವ ಸಿದ್ಧತೆ ನಡೆಸುತ್ತಿದೆ.

Tata Sumo Modern Touch:

 

Image Source: The Social Khabar

 

advertisement

ಟಾಟಾ ಸುಮೋ (Tata Sumo) ಇಂದಿನ ಕಾಲದ ಅಗತ್ಯಗಳಿಗೆ ತಕ್ಕಂತೆ ಮಾಡರ್ನ್ ಟಚ್ ನೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ. ಆಂಡ್ರಾಯ್ ಆಟೋ, ಆಪಲ್ ಕಾರ್ ಪ್ಲೇ ಯಂತಹ ಇಂದಿನ ಕಾಲಕ್ಕೆ ಅಗತ್ಯವೇ ಎನ್ನಬಹುದಾದ ಫೀಚರ್ಸ್ ಗಳೊಂದಿಗೆ ಅಡಾಸ್ ಸಿಸ್ಟಮ್ ಕೂಡ ಸುಮೋ ದಲ್ಲಿ ಬರಬಹುದು ಎನ್ನಲಾಗಿದೆ. ಎಲ್ ಇ ಡಿ ಹೆಡ್ ಲ್ಯಾಂಪ್ ಗಳು, ಎಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಆಟೋಮೆಟಿಕ್ ಹೈವೇ ಅಸಿಸ್ಟ್ ಮುಂತಾದ ಆಧುನಿಕ ಸೇಫ್ಟಿ ಪಿಚರ್ಸ್ ಇರಲಿದೆ.

Tata Sumo Design:

 

Image Source: Delhi Breakings

 

ಟಾಟಾ ಸುಮೋದಲ್ಲಿ ಡಿ ಆರ್ ಎಲ್ ಗಳು ಹಾಗೂ ಆಲ್ – ಎಲ್ ಇ ಡಿ ಸೆಟಪ್ ಲೈಟಿಂಗ್ ಕಾಣಬಹುದು. ದೊಡ್ಡದಾದ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೂಡ ಕಾರಿನಲ್ಲಿ ಇರಲಿದೆ. ಟಾಟಾ ಮೋಟರ್ಸ್ ತನ್ನ ಇತ್ತೀಚಿನ ಹಾರಿಯರ್ ಹಾಗೂ ನೆಕ್ಸಾನ್ ನಲ್ಲಿ ಮಾಡಿದ ಬದಲಾವಣೆಗಳನ್ನು ನೋಡಿದಾಗ ಸುಮೋ ಕೂಡ ತುಂಬಾ ಆಕರ್ಷಕವಾಗಿ ಕಾಣಲಿದೆ ಎನ್ನುವುದಂತು ನಿಜ.

New Tata Sumo Engine & Price:

ಟಾಟಾ ಸುಮೋದಲ್ಲಿ 2 ಲೀಟರ್ ಎಂಜಿನ್ ಇರಲಿದೆ ಎಂದು ಹೇಳಲಾಗಿದೆ. ಇದು 176 ಬಿ ಎಚ್ ಪಿ ಪವರ್ ಹಾಗೂ 350 ನ್ಯೂಟನ್ ಮೀಟರ್ ಗಳ ಟಾರ್ಕ್ ಉತ್ಪಾದಿಸಲಿದೆ. ಇಲ್ಲಿಯತನಕ ಟಾಟಾ ಸುಮೋದ ಬೆಲೆಗಳ ಬಗ್ಗೆ ಯಾವುದೇ ಅಧಿಕೃತ ಯಾವುದೇ ಮಾಹಿತಿ ಲಭ್ಯವಿಲ್ಲದೆ ಇದ್ದರೂ, 11 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಗಳ ಮೂಲಕ ಕಾರನ್ನು ಲಾಂಚ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

advertisement

Leave A Reply

Your email address will not be published.