Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹ ಲಕ್ಷ್ಮಿ ಕರೆಂಟ್ ಬಳಸುತ್ತಿದ್ದವರ ಮನೇಲಿ AC ಇದ್ದರೆ ಹೊಸ ಸೂಚನೆ, ಈ ಕೆಲಸ ಮಾಡಿ

advertisement

How to Reduce Air Conditioner Power Consumption: ಸದ್ಯದ ಮಟ್ಟಿಗೆ ಭಾರತ ದೇಶದಲ್ಲಿ ಪ್ರತಿಯೊಂದು ರಾಜ್ಯಗಳಲ್ಲಿಯೂ ಕೂಡ ಕಿತ್ತುಕೊಂಡು ಬರೋ ಹಾಗೆ ಬೇಸಿಗೆ ಕಾಲದ ಪ್ರಕೋಪ ಕಾಣಿಸುತ್ತದೆ. ಎಲ್ಲಾ ಕಡೆಗಳಲ್ಲಿ ಫ್ಯಾನ್ ಅಲ್ಲ ಎಸಿ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಅನ್ನೋ ಮಟ್ಟಿಗೆ ಸೆಕೆ ಎಲ್ಲರನ್ನ ಕಾಡುತ್ತಿದೆ. ಇನ್ನು ಈ ಸಮಯದಲ್ಲಿ ಏಸಿಯನ್ನು(AC) ಬಳಕೆ ಮಾಡುತ್ತಿದ್ದರೆ ವಿದ್ಯುತ್ ಬಿಲ್ ಕೂಡ ಹೆಚ್ಚಾಗಿ ಬರುತ್ತದೆ ಅನ್ನೋದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿರುತ್ತದೆ.

ಹೀಗಾಗಿ ಬಳಕೆ ಮಾಡದಿದ್ದರೆ ಸೆಕೆಯಿಂದ ಬಳಲಬೇಕಾಗುತ್ತದೆ ಹಾಗೂ ಬಳಕೆ ಮಾಡಿದರೆ ಹೆಚ್ಚಾಗಿರುವಂತಹ ಕರೆಂಟ್ ಬಿಲ್ ನಿಂದ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ಈ ಸಮಯದಲ್ಲಿ ಕೆಲವೊಂದು ಉಪಾಯಗಳನ್ನು ಫಾಲೋ ಮಾಡುವ ಮೂಲಕ ಕಡಿಮೆ ಕರೆಂಟ್ ಬಿಲ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ನೀವು ಗ್ರಹಲಕ್ಹ್ಮೀ(Gruha Lakshmi Yojana))  ವಿದ್ಯುತ್ ಬಳಕೆ ಮಾಡುತ್ತಿದ್ದರೂ ಕೂಡ ಕಡಿಮೆ ಯೂನಿಟ್ ಖರ್ಚಾಗಲಿದೆ.ಹೀಗಾಗಿ ವಿದ್ಯುತ್ ಇಲಾಖೆ ಗ್ರಹಲಕ್ಹ್ಮೀ ಬಳೆಕೆದಾರರಿಗೆ ಪವರ್ ಸೇವ್ ಮಾಡಲು ಕೆಲವು ಟಿಪ್ಸ್ ನೀಡಿದೆ.

How can I save my AC electricity bill?Which AC is best for power saving?
What is the bill of AC for 1 hour?
How do I set my AC to save electricity?
Image Source: Mint

1. ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಎಸಿಯನ್ನು ಆದಷ್ಟು ಕಡಿಮೆ ಟೆಂಪರೇಚರ್ನಲ್ಲಿ ಇಟ್ರೆ ರೂಮ್ನಲ್ಲಿ ಕೂಲಿಂಗ್ ಹೆಚ್ಚಾಗುತ್ತದೆ ಅನ್ನೋದಾಗಿ ಭಾವಿಸ್ತಾರೆ. ಆದರೆ ಇದು ಸಂಪೂರ್ಣವಾಗಿ ಸತ್ಯವಲ್ಲ. Bureau of Energy Efficiency ಪ್ರಕಾರ 24 ಡಿಗ್ರಿಯಲ್ಲಿ ನಿಮ್ಮ ಎಸಿಯ ಟೆಂಪರೇಚರ್ ಅನ್ನು ಸೆಟ್ ಮಾಡಿದ್ರೆ ಅದು ನಿಮ್ಮ ಕೋಣೆಯಲ್ಲಿ ಕೂಲಿಂಗ್ ಅನ್ನು ಕೂಡ ಹೆಚ್ಚಿಸುತ್ತದೆ ಹಾಗೂ ಹೆಚ್ಚಾಗಿ ಎಸಿಯ ಮೇಲೆ ಎನರ್ಜಿಯನ್ನು ಬಳಸದೆ ಕಡಿಮೆ ಕರೆಂಟ್ ಬಿಲ್ ಬರೋದಕ್ಕೆ ಕೂಡ ಕಾರಣವಾಗುತ್ತದೆ. ಆರು ಪ್ರತಿಶತ ವಿದ್ಯುತ್ ಬಳಕೆಯಲ್ಲಿ ಉಳಿತಾಯವನ್ನು ಕೂಡ ಮಾಡುತ್ತದೆ. ಹೀಗಾಗಿ 18 ಡಿಗ್ರಿಯಲ್ಲಿ ಇಡುವುದಕ್ಕಿಂತ 24 ಡಿಗ್ರಿಯಲ್ಲಿ ಇಡುವುದೇ ಒಳ್ಳೆಯದು.

advertisement

2. ಯಾವತ್ತು ನೀವು ಎಸಿ ಖರೀದಿ ಮಾಡುವ ಸಂದರ್ಭದಲ್ಲಿ ಐದು ಸ್ಟಾರ್ ರೇಟಿಂಗ್ ಹೊಂದಿರುವಂತಹ ಎಸಿಯನ್ನು ಖರೀದಿ ಮಾಡುವುದು ಒಳ್ಳೆಯದು. ಯಾಕೆಂದ್ರೆ ಇವುಗಳನ್ನು ಖರೀದಿಸುವಾಗ ನಿಮಗೆ ಹೆಚ್ಚಿನ ಬೆಲೆಯನ್ನು ನೀಡಬೇಕಾಗಿ ಬರಬಹುದು ಆದರೆ ಇವುಗಳ ಬಳಕೆಯಲ್ಲಿ ನೀವು ಹೆಚ್ಚಿನ ಕರೆಂಟ್ ಬಿಲ್ ಅನುಪಾವತಿಸಬೇಕಾದ ಅಗತ್ಯ ಇರುವುದಿಲ್ಲ ಯಾಕೆಂದರೆ ಇವುಗಳು ಕಡಿಮೆ ವಿದ್ಯುತ್ ನಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ.

How can I save my AC electricity bill?Which AC is best for power saving?
What is the bill of AC for 1 hour?
How do I set my AC to save electricity?
Image Source: Mint

3. ಒಂದು ವೇಳೆ ನಿಮ್ಮ ಎಸಿಯಲ್ಲಿ ಟೈಮರ್ ಸೌಲಭ್ಯ ಇದ್ದರೆ ಅವುಗಳಲ್ಲಿ ನೀವು ಯಾವಾಗ ಆನ್ ಹಾಗೂ ಆಫ್ ಮಾಡಬೇಕು ಎನ್ನುವಂತಹ ಟೈಮರ್ ಸೆಟ್ ಮಾಡಿದ್ರೆ ಇನ್ನಷ್ಟು ಲಾಭದಾಯಕವಾಗಿ ಪರಿಣಮಿಸಲಿದೆ. ಯಾಕೆಂದ್ರೆ ಈ ಉಪಾಯವನ್ನು ಬಳಸಿಕೊಳ್ಳುವ ಮೂಲಕ ನೀವು ಎನರ್ಜಿ ದಕ್ಷತೆಯನ್ನ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಇದು ನೀವು ಮಲಗುವ ಸಂದರ್ಭದಲ್ಲಿ ಮಾತ್ರ ಆನ್ ಆಗಿ ಹಾಗೂ ಉಳಿದ ಸಂದರ್ಭಗಳಲ್ಲಿ ಆಫ್ ಆಗುವುದಕ್ಕೆ ಬಳಸಿಕೊಳ್ಳಬಹುದಾಗಿದೆ. ಇದು ದೀರ್ಘಕಾಲಿಕವಾಗಿ ನಿಮಗೆ ವಿದ್ಯುತ್ ಬಿಲ್ ಕಡಿಮೆ ಬರೋದಕ್ಕೆ ಸಹಾಯಕವಾಗಲಿದೆ.

4. ಎಸಿಯನ್ನು ಆನ್ ಮಾಡಿರುವ ಸಂದರ್ಭದಲ್ಲಿ ಪ್ರಮುಖವಾಗಿ ಮನೆಯ ಕಿಟಕಿ ಅಥವಾ ಬಾಗಿಲುಗಳನ್ನು ಮುಚ್ಚಬೇಕಾಗಿರುತ್ತದೆ ಇದರಿಂದಾಗಿ ಇದರ ಪರಿಣಾಮ ಇನ್ನಷ್ಟು ಹೆಚ್ಚಾಗಿ ಸಕಾರಾತ್ಮಕವಾಗಿ ನಿಮಗೆ ದೊರಕುತ್ತದೆ. ಇದರಿಂದಾಗಿ ಎಸಿ ಮೇಲೆ ಹೆಚ್ಚಿನ ಒತ್ತಡ ಕೂಡ ಬೀರುವುದಿಲ್ಲ. ಇವಿಷ್ಟು ಉಪಾಯಗಳನ್ನು ನೀವು ಎಸಿಯನ್ನು ಬಳಕೆ ಮಾಡುವ ಸಂದರ್ಭದಲ್ಲಿ ಪಾಲಿಸಿದ್ರೆ ಖಂಡಿತವಾಗಿ ವಿದ್ಯುತ್ ಬಿಲ್ ನಲ್ಲಿ ನೀವು ಸಾಕಷ್ಟು ಉಳಿತಾಯ ಮಾಡಬಹುದಾಗಿದೆ.

advertisement

Leave A Reply

Your email address will not be published.