Karnataka Times
Trending Stories, Viral News, Gossips & Everything in Kannada

Call Recording: ಬೇರೆಯವರ ಕಾಲ್ ರೆಕಾರ್ಡ್ ಮಾಡುವವರಿಗೆ ಬಂತು ಹೊಸ ಕಾನೂನು! ಕೇಂದ್ರದ ಆದೇಶ

advertisement

ಮೊಬೈಲ್ ಎನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಬಹುದಾಗಿದೆ. ಬೇರೆಯವರ ಜೊತೆಗೆ ಸಂವಹನ ನಡೆಸುವುದಕ್ಕೆ ಹಾಗೂ ಪ್ರತಿಯೊಂದು ರೀತಿಯ ಕೆಲಸಗಳಿಗಾಗಿ ಕೂಡ ಮಾತು ಎತ್ತಿದರೆ ಸಾಕು ಮೊಬೈಲ್ ಬೇಕು ಅಂತ ಜನ ಹೇಳ್ತಾರೆ. ಅಷ್ಟರಮಟ್ಟಿಗೆ ಜನ ಜೀವನವನ್ನು ಮೊಬೈಲ್ ಆವರಿಸಿಕೊಂಡುಬಿಟ್ಟಿದೆ ಎಂದು ಕೊಡಿ ತಪ್ಪಾಗಲಾರದು. ಮೊದಲೆಲ್ಲ ನಿಮಗೆಲ್ಲರಿಗೂ ತಿಳಿದಿರಬಹುದು ಮೊಬೈಲ್ ನಲ್ಲಿ ರೆಕಾರ್ಡಿಂಗ್ (Call Recording) ಆಪ್ಶನ್ ಇತ್ತು.

ಆ ಸಂದರ್ಭದಲ್ಲಿ ಅದನ್ನು ಆನ್ ಮಾಡಿದರೆ ಸಾಕು ಯಾವುದೇ ಕರೆ ಬಂದರೂ ಕೂಡ ಆಟೋಮೆಟಿಕ್ ಆಗಿ ಅದು ರೆಕಾರ್ಡಿಂಗ್ (Call Recording) ಮಾಡುತ್ತಿತ್ತು. ಆ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಗಳು ಇರಲಿಲ್ಲ ಹೀಗಾಗಿ ಪ್ರತಿಯೊಂದು ಮೊಬೈಲ್ಗಳಲ್ಲಿ ಕೂಡ ಈ ಸೌಲಭ್ಯವನ್ನು ತಮ್ಮ ಗ್ರಾಹಕರಿಗೆ ಕಂಪನಿಗಳು ನೀಡುತ್ತಿದ್ವು. ಆದರೆ ಈಗ ಇಂತಹ ಆಪ್ಷನ್ ಅನ್ನು ಪ್ರತಿಯೊಂದು ಮೊಬೈಲ್ ನಿಂದಲೂ ಕೂಡ ಹೊರ ತೆಗೆಯಲಾಗಿದೆ. ಇದರ ಹಿಂದಿನ ಕಾರಣ ಏನು ಹಾಗೂ ಒಂದು ವೇಳೆ ಈಗ ನೀವು ಇದೇ ಕೆಲಸವನ್ನು ಮಾಡಲು ಹೋದ್ರೆ ಏನಾಗುತ್ತೆ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಬೇರೆಯವರ ಅನುಮತಿ ಇಲ್ಲದೆ ಕಾಲ್ ರೆಕಾರ್ಡಿಂಗ್ ಮಾಡೋ ಹಾಗಿಲ್ಲ:

 

Image Source: Hindustan

 

advertisement

ಇತ್ತೀಚಿನ ದಿನಗಳಲ್ಲಿ ನೀವು ಸರಿಯಾಗಿ ಗಮನಿಸಿರಬಹುದು ಯಾರದ್ದೇ ಕಾಲ್ ರೆಕಾರ್ಡಿಂಗ್ (Call Recording) ಮಾಡಬೇಕಾದರೂ ಕೂಡ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡುವಂತಹ ನೋಟಿಫಿಕೇಶನ್ ವಾಯ್ಸ್ ನೋಟ್ ರೂಪದಲ್ಲಿ ಕಾಲ್ ಮಾಡುವಾಗ ಬರುತ್ತದೆ. ಇದರಿಂದಾಗಿ ಎದುರಿನವರಿಗೆ ನೀವು ಕಾಲ್ ರೆಕಾರ್ಡಿಂಗ್ ಮಾಡುತ್ತಿದ್ದೀರಿ ಎಂಬುದಾಗಿ ತಿಳಿದು ಬರುತ್ತದೆ.

ಇನ್ನು ಭಾರತದ ಕಾನೂನು ನಿಯಮಗಳ ಪ್ರಕಾರ ಅದರಲ್ಲೂ ವಿಶೇಷವಾಗಿ ನಾವು ಮಾತನಾಡಲು ಹೊರಟಿರೋದು IT Act 72 ಪ್ರಕಾರ ಯಾವುದೇ ಕಾರಣಕ್ಕೂ ಎದುರುಗಡೆ ಇರುವರ ಅನುಮತಿ ಇಲ್ಲದೆ ಅವರ ಕಾಲ್ ರೆಕಾರ್ಡಿಂಗ್ (Call Recording) ಮಾಡಿ ಅದನ್ನು ಸಾಕ್ಷಿಯ ರೂಪದಲ್ಲಿ ಬಳಸುವ ಹಾಗಿಲ್ಲ ಎನ್ನುವುದಾಗಿ ತಿಳಿದು ಬಂದಿದೆ. ಒಂದು ವೇಳೆ ನಿಮ್ಮ ಕಾಲ್ ರೆಕಾರ್ಡಿಂಗ್ ಅನ್ನು ಎದುರುಗಡೆ ಇರುವವರು ನಿಮ್ಮ ಅನುಮತಿ ಇಲ್ಲದೆ ಮಾಡಿದ್ರೆ ಆ ಸಂದರ್ಭದಲ್ಲಿ ನೀವು ಅವರ ವಿರುದ್ಧ ಈ ಮೇಲೆ ಹೇಳಿರುವಂತಹ ಕಾನೂನು ನಿಯಮಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದಾಗಿದೆ.

 

Image Source: Mint

 

ಇದರ ಮೂಲಕ ಅವರು 2 ಲಕ್ಷ ರೂಪಾಯಿಗಳು ದಂಡವನ್ನು ಕಟ್ಟುವುದು ಮಾತ್ರವಲ್ಲದೆ ಎರಡು ವರ್ಷಗಳ ಶಿಕ್ಷೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಇನ್ಮುಂದೆ ಯಾರದೇ ಆಗಲಿ ನೀವು ಕಾಲ್ ರೆಕಾರ್ಡ್ (Call Record) ಮಾಡೋದಕ್ಕಿಂತ ಮುಂಚೆ ಅವರ ಪರ್ಮಿಷನ್ ಅನ್ನು ಪಡೆದುಕೊಳ್ಳಬೇಕಾಗಿರುತ್ತದೆ ಹಾಗೂ ಒಂದು ವೇಳೆ ಅವರ ಅನುಮತಿ ಪಡೆಯದೆ ನೀವು ಕಾಲ್ ರೆಕಾರ್ಡಿಂಗ್ ಮಾಡಿದ್ದಲ್ಲಿ ಈ ಮೇಲೆ ಹೇಳಿರುವಂತಹ ನಿಯಮಗಳ ಪ್ರಕಾರ ನಿಮ್ಮ ವಿರುದ್ಧ ಅವರು ಪ್ರಕರಣವನ್ನು ದಾಖಲಿಸಿ ಬಹುದಾಗಿದೆ.

advertisement

Leave A Reply

Your email address will not be published.