Karnataka Times
Trending Stories, Viral News, Gossips & Everything in Kannada

Indian Railways: 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್!

advertisement

ನಮ್ಮ ಭಾರತ ದೇಶ ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ಮಟ್ಟದ ರೈಲ್ವೆ ನೆಟ್ವರ್ಕ್ ಹೊಂದಿದ್ದು ಪ್ರತಿದಿನ ಲಕ್ಷಾಂತರ ಜನರು ಇದೇ ಭಾರತೀಯ ರೈಲ್ವೆ ನೆಟ್ವರ್ಕ್ ಅನ್ನು ತಮ್ಮ ಪ್ರಯಾಣಕ್ಕೆ ಬಳಸಿಕೊಳ್ಳುತ್ತಾರೆ. ಇನ್ನು ರೈಲ್ವೆ ಪ್ರಯಾಣದ ಬಗ್ಗೆ ಮಾತನಾಡುವುದಾದರೆ ಸಾಮಾನ್ಯವಾಗಿ ಹಿರಿಯರು ಮೇಲಿರುವ ಸೀಟ್ಗಳನ್ನು ಬುಕ್ ಮಾಡಿದ್ರೂ ಕೂಡ ಕೆಳಗೆ ಇರುವಂತಹ ಬರ್ತ್ ಗಳ ಎಕ್ಸ್ಚೇಂಜ್ ಮಾಡೋದಕ್ಕೆ ಇಷ್ಟಪಡುತ್ತಾರೆ. ಆದರೆ ಮುಂದೆ ಹಿರಿಯ ನಾಗರಿಕರು ಈ ರೀತಿ ಕಷ್ಟ ಪಡುವ ಅಗತ್ಯವಿಲ್ಲ ಯಾಕೆಂದರೆ ರೈಲ್ವೆ ಇಲಾಖೆ (Indian Railways) ಕೂಡ ಹಿರಿಯ ನಾಗರಿಕರಿಗೆ ಈ ರೀತಿ ಕೆಳಗಿನ ಸೀಟ್ ಗಳನ್ನ ಕಾಯ್ದಿರಿಸಿಕೊಳ್ಳುವಂತಹ ಅವಕಾಶವನ್ನು ನೀಡುತ್ತಿದೆ.

ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ:

 

Image Source: IndiaToday

 

ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರಿಗೆ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಲೋವರ್ ಬರ್ತ್ ಟಿಕೆಟ್ (Lower Berth Ticket) ಅನು ಕಾಯ್ದಿರಿಸಿಕೊಳ್ಳುವಂತಹ ಅವಕಾಶವನ್ನು ರೈಲ್ವೆ ಇಲಾಖೆ (Indian Railways Department) ನೀಡುತ್ತಿದೆ. ಸಾಮಾನ್ಯವಾಗಿ ವೃದ್ಧರಿಗೆ ತಮ್ಮ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಕೆಳಗಿನ ಸೀಟುಗಳಲ್ಲಿಯೇ ಕುಳಿತುಕೊಳ್ಳಲು ಸರಿಯಾಗುತ್ತದೆ ಎನ್ನುವ ಕಾರಣಕ್ಕಾಗಿ ರೈಲ್ವೆ ಇಲಾಖೆ ಇದನ್ನು ಅರ್ಥ ಮಾಡಿಕೊಂಡು ಈ ವಿಶೇಷವಾದ ಆಯ್ಕೆಯ ಅವಕಾಶವನ್ನು ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆ (Indian Railways) ನೀಡಿದೆ. ಜನರಲ್ ನಲ್ಲಿ ಮಾತ್ರವಲ್ಲದೆ ರಿಸರ್ವೇಶನ್ ನಲ್ಲಿ ಕೂಡ ಹಿರಿಯ ನಾಗರಿಕರಿಗೆ ಈ ರೀತಿ ಕೆಳಗಿನ ಸೀಟ್ಗಳ ಅವಕಾಶವನ್ನು ನೀಡಲಾಗುತ್ತದೆ.

 

advertisement

Image Source: Times Now

 

ಇದೇ ರೀತಿಯಲ್ಲಿ ಫಸ್ಟ್ ಸರ್ವಿಸ್ ಪ್ರಿಫರೆನ್ಸ್ ಅನ್ನು ಕೂಡ ಇಲ್ಲಿ ನೀಡಲಾಗುತ್ತಿದ್ದು ಮೊದಲು ಆಯ್ಕೆ ಮಾಡಿದವರಿಗೆ ಕೆಳಗಿನ ಸೀಟುಗಳನ್ನು ರೈಲ್ವೆ ಇಲಾಖೆ ನೀಡುತ್ತಿದೆ. ಜನರಲ್ ಕೋಟದಲ್ಲಿ ಕೂಡ ಟಿಕೆಟ್ ಅನ್ನು ಬುಕ್ ಮಾಡಿದ್ದರೂ ಜನರು ಎಕ್ಸ್ಚೇಂಜ್ ಮಾಡಬಹುದಾಗಿದೆ ಇಲ್ಲವೇ TTE ಜೊತೆಗೆ ಮಾತನಾಡಿ ತಮಗೆ ಬೇಕಾಗುವಂತಹ ಕೆಳಗಿನ ಸೀಟುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಲಭ್ಯತೆಗೆ ಅನುಸಾರವಾಗಿ ತಿಳಿಸಲಾಗಿದೆ.

ಇನ್ನು ಇತ್ತೀಚಿಗೆ ನಗದು ರಹಿತ ಟ್ರಾನ್ಸಾಕ್ಷನ್ ಗಾಗಿ ಯುವರ್ ಸ್ ಕ್ಯಾನ್ ಕೋಡ್ ಅನ್ನು ಕೂಡ ಪರಿಚಯಿಸಿದೆ. ಮೊಬೈಲ್ನಲ್ಲಿರುವಂತಹ ಯುಪಿಐ ಮೂಲಕ ಕೂಡ ರೈಲ್ವೆ ಇಲಾಖೆಯಲ್ಲಿ ಇರುವಂತಹ ATVM ನಲ್ಲಿ ಪ್ಲಾನ್ ಮಾಡಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.

ಹಿರಿಯ ನಾಗರಿಕರಿಗೆ ಹಾಗೂ ಪ್ರತಿಯೊಂದು ವರ್ಗದ ರೈಲ್ವೆ ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ನಿಂದ ಹಿಡಿದು ಪ್ರಯಾಣದವರೆಗು ಕೂಡ ಎಲ್ಲಾ ಸುಗಮವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಸಾಕಷ್ಟು ಯೋಜನೆಗಳನ್ನು ಹಾಗೂ ನಿಯಮಗಳನ್ನು ಜಾರಿಗೆ ತರುತ್ತದೆ. ಇಷ್ಟೊಂದು ದೊಡ್ಡ ಮಟ್ಟದ ನೆಟ್ವರ್ಕ್ ಅನ್ನು ಹೊಂದಿರುವಂತಹ ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಪ್ರತಿದಿನ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವಂತಹ ಪ್ರಯತ್ನವನ್ನು ಈ ಮೂಲಕ ಮಾಡುತ್ತಿದೆ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.