Karnataka Times
Trending Stories, Viral News, Gossips & Everything in Kannada

Supreme Court: ಲಕ್ಷಾಂತರ ರೂ ಮದುವೆಗೆ ಖರ್ಚು ಮಾಡಿದರೂ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ನೀಡಬೇಕಾ? ಕೋರ್ಟ್ ಹೊಸ ತೀರ್ಪು

advertisement

Property Rights of Women in India and Maintenance: ಕಾನೂನು ಇರುವುದೇ ನಮ್ಮ ರಕ್ಷಣೆಗಾಗಿ ಎನ್ನಬಹುದು. ಅದರೊಂದಿಗೆ ಸಮಾಜದಲ್ಲಿ ಹೇಗೆ ಜೀವಿಸಬೇಕು ಎಂಬ ನೀತಿ ಬದ್ಧ ನಿಯಮಾವಳಿಗಳೇ ಕಾನೂನಾಗಿದೆ. ಆದರೆ ಕಾನೂನು ಕ್ರಮ ವ್ಯವಸ್ಥೆ ಬಗ್ಗೆ ಪರಿಪೂರ್ಣ ಮಾಹಿತಿ ಕೆಲವರಿಗೆ ಇಲ್ಲ. ಹೆಣ್ಣು ಮಕ್ಕಳಿಗೆ ಮದುವೆ ಆದ ಮೇಲೆ ಆಕೆಯ ಹೊಣೆ ಪತಿಯದ್ದಾಗಿದ್ದು ಪತಿ ವಾಸವಿದ್ದಲ್ಲಿ ಆತನ ತಂದೆಯ ಆಸ್ತಿ ಪಾಲು ಆಗುತ್ತಿದ್ದರೆ ಆಗ ಆಕೆಗೂ ಪಾಲು ನೀಡಬೇಕಾಗುತ್ತಾ ಎಂಬ ಗೊಂದಲ ಮೂಡುವುದು ಸಹಜ ಇದಕ್ಕೆ ನಾವಿಂದು ನಿಮಗೆ ಉತ್ತರಿಸಲಿದ್ದೇವೆ.

ಗಂಡನ ಆಸ್ತಿಯಲ್ಲಿ ಪತ್ನಿಗೆ ಹಕ್ಕು?
ಗಂಡನ ಆಸ್ತಿಗೆ ಹೆಂಡತಿ 50%ದಷ್ಟು ಹಕ್ಕುದಾರಳೆ ಎನ್ನಬಹುದು, ಆದರೆ ಆತನ ಯಾವ ಆಸ್ತಿಯಲ್ಲಿ ಎಂಬುದು ಮುಖ್ಯ. ಕಾನೂನಿನಲ್ಲಿ ಎರಡು ವಿಧವಾಗಿ ಇದನ್ನು ವಿವರಿಸಬಹುದು. ಹೆಂಡತಿ ಗಂಡನ ಅನುಪಸ್ಥಿತಿಯಲ್ಲಿ ಅಂದರೆ ಗಂಡ ತೀರಿ ಹೋದರೆ ಗಂಡನ ಸ್ವಯಾರ್ಜಿತ ಆಸ್ತಿಯ ಹಕ್ಕುದಾರಳಾಗಿರುತ್ತಾಳೆ. ಗಂಡ ತನ್ನ ಹೆಂಡತಿಯ ಹೆಸರಿಗೆ ಆಸ್ತಿ ಮಾಡಿಟ್ಟರೆ ಮಾಡಿ ಇಡುವಾಗಲೇ ಆಕೆಯ ಹೆಸರು ನೀಡಿದ್ದರೆ ಆಗ ಆ ಆಸ್ತಿಯ ಹಕ್ಕುದಾರಳಾಗಿರುತ್ತಾಳೆ. ವಿದೇಶದಲ್ಲಿ ನೆಲೆಸಿದ್ದರೆ ಸ್ವಲ್ಪ ಮಟ್ಟಿಗೆ ಹಕ್ಕುದಾರಳಾಗಿರುತ್ತಾಳೆ ಎನ್ನಬಹುದು. ಆದರೆ ಆತ ಬದುಕಿದ್ದು ಆತನ ಒಪ್ಪಿಗೆ ಇಲ್ಲದಿದ್ದರೆ ಗಂಡನ ಆಸ್ತಿಗೆ ಪತ್ನಿ ಹಕ್ಕುದಾರಳು ಆಗಲಾರಳು.

Property Rights of Women in India and Maintenance
Image Source: Business Today

advertisement

ಕಾರಣ ಇದೆ?
ಮದುವೆಯಾದ ಕೂಡಲೆ ಪತಿಯಾದವನ ಎಲ್ಲ ಒಳಿತು ಕೆಡುಕಿಗೂ ಪತ್ನಿ ಸಮಭಾಗ ಪಡೆಯುತ್ತಾಳೆ ಎಂಬುದೆಲ್ಲ ನಮ್ಮ ನಂಬಿಕೆಗೆ ಬಿಟ್ಟ ವಿಚಾರ ಆಗಿದೆ. ಆದರೆ ಕಾನೂನಿನಲ್ಲಿ ಪತಿಯ ಆಸ್ತಿ ಹಕ್ಕನ್ನು ಪತ್ನಿಗೆ ನೀಡದೇ ಇರಲು ಕೂಡ ಸೂಕ್ತ ಕಾರಣ ಇದೆ. ತಮ್ಮ ಆಸ್ತಿಯಲ್ಲಿ ಹೆಂಡತಿಗೆ ಪಾಲು ನೀಡಿದರೆ ಅವರ ನಡುವೆ ಏನಾದರೂ ವೈಮನಸ್ಸು ಬಂದರೆ ಆಗ ಆಕೆ ಏನು ಮಾಡಿದರೂ ತನ್ನ ಆಸ್ತಿ ತನ್ನ ಹೆಸರಿಗೆ ಬಂದಾಯ್ತು ಎಂದು ಅದನ್ನು ವಾಪಾಸ್ಸು ನೀಡದಿರಬಹುದು. ಹಾಗಾಗಿ ಮೊದಲೇ ಆಸ್ತಿ ಹಕ್ಕು ನೀಡುವುದು ದಂಪತಿಯ ನಡುವೆ ವೈಮನಸ್ಸು ಮೂಡುವ ಸಾಧ್ಯತೆ ಅಧಿಕ ಇದೆ. ಹಾಗಾಗಿ ಇಂತಹ ಹಕ್ಕು ನೀಡಲು ಕಾನೂನು ಸಹ ನಿಯಮ ವಿಧಿಸುವುದನ್ನು ನಾವು ಕಾಣಬಹುದಾಗಿದೆ.

ಈ ಹಕ್ಕು ಇದೆ
ಮಕ್ಕಳಿಗೆ ತಂದೆಯ ಸ್ವಯಂ ಆಸ್ತಿಯಲ್ಲಿ ಹಕ್ಕಿದೆ. ಆದರೆ ತಂದೆ ಮರಣ ಹೊಂದಿದ್ದ ಪಕ್ಷದಲ್ಲಿ ಅವರು ವಿಲ್ ಮಾಡಿಟ್ಟರೆ ಆ ಪ್ರಕಾರವೇ ಆಸ್ತಿ ಹಂಚಲಾಗುವುದು. ಒಂದು ವೇಳೆ ವಿಲ್ ಇಲ್ಲದಿದ್ದರೆ ಅಂತಹ ಆಸ್ತಿ ಸಮನಾಗಿ ಹಂಚಲಾಗುತ್ತದೆ. ಹಾಗೆಂದು ಬದುಕಿದ್ದಾಗಲೇ ತಂದೆಯ ಅನುಮತಿಯ ಆಧಾರದ ಮೇಲೆ ಪಾಲು ಪಡೆಯಬಹುದು. ಪಿತ್ರಾರ್ಜಿತ ಆಗಿದ್ದರೆ ತಂದೆ ಪರವಾಗಿ ನೀಡುವಂತೆ ಸಹ ಕೇಳಬಹುದು ಇದಕ್ಕೆ ಕೂಡ ಪ್ರತ್ಯೇಕ ನಿಯಮಗಳಿವೆ.

Property Rights of Women in India and Maintenance
Image Source: Business Today

ಹೆಣ್ಣು ಮಗಳಿಗೆ ಲಕ್ಷಾಂತರ ಕೊಟ್ಟು ಮದುವೆ ಮಾಡಿಯೂ ಆಸ್ತಿ ನೀಡಬೇಕಾ?
ಖಂಡಿತಾ ನೀಡಬೇಕು. ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಋಣವಾಗಲಿದೆ. ಹಾಗಾಗಿ ಅದರ ಕಾರಣಕ್ಕೆ ನೀವು ಹೆಣ್ಣು ಮಕ್ಕಳಿಗೆ ಆಸ್ತಿ ನೀಡಲು ಸಾಧ್ಯ ವಿಲ್ಲ ಎಂದು ಹೇಳುವಂತಿಲ್ಲ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳಿಗೆ ಸಮಾನ ಹಕ್ಕು ಇರಲಿದೆ ಎಂದು ಹೇಳಬಹುದು. ಹಾಗಾಗಿ ನೀವು ಮದುವೆ ಖರ್ಚನ್ನು ತೋರಿಸಿ ಆಸ್ತಿ ಪಾಲು ನೀಡೋಲ್ಲ ಎಂದು ಹೇಳಬಹುದು.

advertisement

Leave A Reply

Your email address will not be published.