Karnataka Times
Trending Stories, Viral News, Gossips & Everything in Kannada

KSRTC: ಉಚಿತ ಬಸ್ ಸೇರಿದಂತೆ ಎಲ್ಲಾ ಸರಕಾರಿ ಬಸ್ ಗಳಲ್ಲಿ ಸಂಚರಿಸುವ ಪುರುಷ ಮಹಿಳೆಯರಿಗೆ ಹೊಸ ರೂಲ್ಸ್! ಬೆಳ್ಳಂಬೆಳಿಗ್ಗೆ ಸರಕಾರದ ನಿರ್ಧಾರ

advertisement

2024 Indian general election: ಸರಕಾರಿ ಬಸ್ ನಲ್ಲಿ ಕಡಿಮೆ ದರ ಮತ್ತು ಉಚಿತ ಪ್ರಯಾಣ ಇರುವ ಕಾರಣ ಹಾಗೂ ಸಾಮಾನ್ಯವಾಗಿ ಖಾಸಗಿ ಬಸ್ ಗೆ ಹೋಲಿಸಿದರೆ ಇಲ್ಲಿ ದರ ಕಡಿಮೆ ಇರುವುದರಿಂದ ಜನರು ಅತೀ ಹೆಚ್ಚಾಗಿ ಇದರಲ್ಲಿ ಪ್ರಯಾಣ ಮಾಡುತ್ತಾರೆ. ಪ್ರಯಾಣ ಮಾಡುವಾಗ ದೊಡ್ಡ ದೊಡ್ಡ ಲಗೇಜ್ ಸಹ ತಮ್ಮ ಜೊತೆಗೆ ಹೊತ್ತೊಯ್ಯುವುದನ್ನು ಕಾಣಬಹುದು. ಆದರೆ ಇನ್ನು ಮುಂದೆ ಇಂತಹ ವಸ್ತುಗಳನ್ನು ಸರಕಾರಿ ಬಸ್ (Government buses )  ನಲ್ಲಿ ಕೊಂಡೊಯ್ಯಲು ಸಾಧ್ಯವಿಲ್ಲ ಈ ಸಂಬಂಧಿಸಿದಂತೆ ರಾಜ್ಯ ಸರಕಾರದಿಂದ ಜನಸಾಮಾನ್ಯರಿಗೆ ಮಹತ್ವದ ಆದೇಶ ಹೊರಡಿಸಲಾಗಿದೆ.

ಲೋಕಸಭೆ ಚುನಾವಣೆ
ದೇಶಾದ್ಯಂತ ಚುನಾವಣೆ ಕಾವು ಬೀಸುತ್ತಿದೆ. ಚುನಾವಣೆಯ ಪೂರ್ವ ಸಿದ್ಧತೆಯ ಭಾಗವಾಗಿ ಅನೇಕ ಕ್ರಮ ಪಾಲಿಸುತ್ತಿರುವುದನ್ನು ನಾವು ಕಾಣಬಹುದು. ಚುನಾವಣೆಯ ನೀತಿ ಸಂಹಿತೆ(Code of Conduct )ಇರುವ ಕಾರಣ ಅನೇಕ ಹೊಸ ಕ್ರಮ ಜಾರಿಗೆ ತರಲು ಸರಕಾರ ಚಿಂತನೆಯನ್ನು ನಡೆಸುತ್ತಿದ್ದು ಅದರ ಬೆನ್ನಲ್ಲೆ ಜನಸಾಮಾನ್ಯರಿಗೆ ನೆರವಾಗಬೇಕು ಎಂಬ ಉದ್ದೇಶಕ್ಕೆ ಹಲವಾರು ಉಪಕ್ರಮ ಸಹ ಜಾರಿಗೆ ತರಲಾಗುತ್ತಿದೆ. ಈ ನಡುವೆ ಸರಕಾರಿ ಬಸ್ ನಲ್ಲಿ ಲಗೇಜ್ ಕೊಂಡೊಯ್ಯುವವರಿಗೆ ನೀತಿ ಸಂಹಿತೆ ಜಾರಿಗೆ ತರಲು ಮುಂದಾಗಿದೆ.

Code of Conduct election rules karnataka
Image Source: DNA India

advertisement

ಯಾವ ವಸ್ತುವನ್ನು ಕೊಂಡೊಯ್ಯಬಾರದು
ಇನ್ನೇನು ಸ್ವಲ್ಪ ದಿನದಲ್ಲಿ ಲೋಕಸಭೆ ಚುನಾವಣೆ ಇರುವ ಕಾರಣ ಬೆಲೆ ಬಾಳುವ ವಸ್ತು ಹಾಗೂ ದುಬಾರಿ ಮೊತ್ತವನ್ನು ಸಾರಿಗೆ ಬಸ್ ನಲ್ಲಿ ಕೊಂಡೊಯ್ಯಲು ನಿರ್ಬಂಧ ವಿಧಿಸಲಾಗುತ್ತದೆ. 2024 ರ ಲೋಕಸಭೆ ಚುನಾವಣೆ ಹಿನ್ನೆಲೆ ಈ ನಿಯಮ ಜಾರಿಗೆ ತರಲು ರಾಜ್ಯ ಸರಕಾರ ಚಿಂತನೆ ನಡೆಸಿದ್ದು ಈಗಾಗಲೇ ಮುಖ್ಯ ಪ್ರದೇಶಗಳಲ್ಲಿ ಪೊಲೀಸರ ಬಿಗು ಕಾವಲು ಪಡೆ ಸಹ ಸಿದ್ಧವಾಗುತ್ತಿದೆ. ನಗದು, ಚಿನ್ನ , ಬೆಳ್ಳಿ ಆಭರಣ ಕೊಂಡೊಯ್ಯಬಾರದು. ಅದರ ನಡುವೆ ರಾಜಕೀಯ ಪಕ್ಷಗಳ ಬ್ರೋಶರ್ ಹಾಗೂ ಬ್ಯಾನರ್ ಕೊಂಡೊಯ್ಯಬಾರದು. ರಾಜಕೀಯ ಪ್ರಚಾರ ಸಾಮಾಗ್ರಿಗಳನ್ನು ಸಾರಿಗೆ ಬಸ್ ನಲ್ಲಿ ಕೊಂಡೊಯ್ಯಬಾರದು ಎನ್ನಲಾಗಿದೆ.

ksrtc new rules
Image Source: DNA India

ಅಧಿಕೃತ ಮಾಹಿತಿ
ಸರಕಾರದಿಂದ ಈ ಬಗ್ಗೆ ಅಧಿಕೃತ ಸುತ್ತೊಲೆ ಹೊರಡಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡಿ ಸರಕು ಸಾಗಿಸುವುದು ಅಪರಾಧವಾಗಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಇರುವ ಕಾರಣ ಸಾರಿಗೆ ಇಲಾಖೆ ನಾಲ್ಕು ನಿಗಮಕ್ಕೂ ಹೊಸ ನಿಯಮಗಳ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗಿದೆ. ಹಾಗಾಗಿ ಬಸ್ ಚಾಲಕರು ಹಾಗೂ ನಿರ್ವಾಹಕರು ಈ ಬಗ್ಗೆ ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಎಂದು ಸರಕಾರ ತನ್ನ ಸುತ್ತೊಲೆ ಮೂಲಕ ಮಾಹಿತಿ ನೀಡಿದೆ.

ಒಟ್ಟಾರೆಯಾಗಿ ಈಗಾಗಲೇ ನೀತಿ ಸಂಹಿತೆ ಕೂಡ ಜಾರಿಯಾಗಿದ್ದು ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಲಗೇಜ್ ಕೊಂಡೊಯ್ಯಲು ಮತ್ತು ಸ್ವೀಕಾರ ಮಾಡುವ ಬಗ್ಗೆ ಖಚಿತ ಮಾಹಿತಿ ಅಗತ್ಯವಾಗಿದೆ. ಸುರಕ್ಷತಾ ದೃಷ್ಟಿಯಿಂದ ಲಗೇಜ್ ಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುವುದು ಅತ್ಯವಶ್ಯಕವಾಗಿವೆ.

advertisement

Leave A Reply

Your email address will not be published.