Karnataka Times
Trending Stories, Viral News, Gossips & Everything in Kannada

March 2024: ಆಧಾರ್ ಉಚಿತ ಅಪ್ಡೇಟ್, ಎಸ್ ಬಿಐ ಅಮೃತ ಕಲಶ್ ಸೇರಿ ಹಲವು ಸೌಲಭ್ಯಗಳು ಮಾರ್ಚ್ ತಿಂಗಳಲ್ಲಿ ಅಂತ್ಯ!

advertisement

ಪ್ರಸ್ತುತ ಹಣಕಾಸು ವರ್ಷವು ಮಾ.31ಕ್ಕೆ ಅಂತ್ಯಗೊಳ್ಳುತ್ತದೆ. ಈ ಅವಧಿಯಲ್ಲಿಹಣಕಾಸು ವಿಷಯಗಳಲ್ಲಿಒಂದಷ್ಟು ಕೆಲಸಗಳನ್ನು ಮಾಡದೇ ಹೋದರೆ, ತೊಂದರೆಗೆ ಸಿಲುಕಬೇಕಾಗುತ್ತದೆ. ಉಚಿತ ಆಧಾರ್‌ಅಪ್‌ಡೇಟ್‌, ತೆರಿಗೆ ಉಳಿತಾಯಕ್ಕೆ ಅವಕಾಶ, ಎಸ್‌ಬಿಐ (SBI) ವಿಶೇಷ ಎಫ್‌ಡಿಗಳೂ ಸೇರಿದಂತೆ ಪ್ರಮುಖ ಕಾರ್ಯಗಳಿಗೆ March 2024 ನಲ್ಲಿ ಡೆಡ್‌ಲೈನ್‌ಗಳಿವೆ, ಕೆಲವು ಗಮನಾರ್ಹವಾದ ಗಡುವುಗಳನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಅದು ನಿಮ್ಮ ಹಣಕಾಸಿನ ವಿಷಯಗಳ ಮೇಲೆ ಪರಿಣಾಮ ಬೀರಬಹುದು. ತೆರಿಗೆದಾರರು ಮತ್ತು ಹೂಡಿಕೆ ದಾರರು ಅನುಸರಿಸಬೇಕಾದ ಕೆಲವು ನಿಯಮಗಳಿದ್ದು, ಅವುಗಳಿಗೆ ಗಡುವನ್ನು ನಿಗದಿ ಮಾಡಲಾಗಿದೆ.

Free Aadhaar Card Update:

 

 

ಆಧಾರ್‌ ಉಚಿತ ನವೀಕರಣ ಮೈಆಧಾರ್‌ ವೆಬ್‌ಸೈಟ್‌ನಲ್ಲಿ ನಿಮ್ಮ ಆಧಾರ್‌ಕಾರ್ಡ್‌ (Aadhaar Card) ಅನ್ನು ಉಚಿತವಾಗಿ ಅಪ್‌ಡೇಟ್‌ ಮಾಡಲು ಮಾರ್ಚ್ 14 2024 ಕೊನೆಯ ದಿನವಾಗಿದೆ. ಮಾರ್ಚ್ 14ರ ನಂತರ, ಆಧಾರ್‌ ಕಾರ್ಡ್‌ಗಾಗಿ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ದಾಖಲಾತಿಯನ್ನು ನವೀಕರಿಸಲು ನೀವು ಶುಲ್ಕವನ್ನು ಪಾವತಿಸಬೇಕು.

SBI Amrit Kalash:

ಎಸ್‌ಬಿಐ ಅಮೃತ್‌ ಕಳಶ ವಿಶೇಷ ಎಫ್‌ಡಿ ಎಸ್‌ಬಿಐ ಅಮೃತ್‌ ಕಳಶ (SBI Amrit Kalash) ವಿಶೇಷ ನಿಶ್ಚಿತ ಠೇವಣಿಯಲ್ಲಿ (FD) ಹೂಡಿಕೆ ಮಾಡಲು ಮಾರ್ಚ್ 31, 2024 ಕೊನೆಯ ದಿನವಾಗಿದೆ. ಎಸ್‌ಬಿಐ ವೆಬ್‌ಸೈಟ್‌ ಪ್ರಕಾರ, 400 ದಿನಗಳ ಅಮೃತ್‌ ಕಳಶ ಅವಧಿಗೆ 7.10% ಬಡ್ಡಿ ದರ ಲಭ್ಯ. ಹಿರಿಯ ನಾಗರಿಕರು 7.60% ಬಡ್ಡಿ ದರಕ್ಕೆ ಅರ್ಹರಾಗಿರುತ್ತಾರೆ. ಈ ಯೋಜನೆಯು ಮಾರ್ಚ್31ರ ತನಕ ಮಾನ್ಯವಾಗಿರುತ್ತದೆ.

SBI WeCare Scheme:

 

 

ಹಿರಿಯ ನಾಗರಿಕರ ಎಫ್‌ಡಿ ಎಸ್‌ಬಿಐ ವೀಕೇರ್‌ ಸ್ಕೀಮ್‌ (SBI WeCare Scheme) ನಲ್ಲಿ ಹಿರಿಯ ನಾಗರಿಕರಿಗೆ ಬಡ್ಡಿ ದರವು 7.50% ಆಗಿದೆ. ಹೂಡಿಕೆ ಮಾಡಲು ಮಾರ್ಚ್ 31, 2024 ಕೊನೆಯ ದಿನವಾಗಿದೆ.

advertisement

SBI Home Loan Interest Discount:

 

 

ಗೃಹ ಸಾಲ (Home Loan) ದ ಬಡ್ಡಿದರ ರಿಯಾಯಿತಿ SBI Home Loan ಗಳ ವಿಶೇಷ ಅಭಿಯಾನದ ರಿಯಾಯಿತಿಯು ಮಾರ್ಚ್ 31, 2024 ರವರೆಗೆ ಮಾನ್ಯವಾಗಿರುತ್ತದೆ. ಫ್ಲೆಕ್ಸಿಪೇ, NRI, ಸಂಬಳರಹಿತ ವ್ಯಕ್ತಿಗಳೂ ಸೇರಿದಂತೆ ಎಲ್ಲಾಗೃಹ ಸಾಲಗಳಿಗೆ ರಿಯಾಯಿತಿ ಮಾನ್ಯವಾಗಿರುತ್ತದೆ. CIBIL Score ಗೆ ಅನುಗುಣವಾಗಿ ಗೃಹ ಸಾಲದ ಮೇಲಿನ ಬಡ್ಡಿ ದರವು ಬದಲಾಗುತ್ತದೆ. ಸಿಬಿಲ್‌ ಸ್ಕೋರ್‌ 750ಕ್ಕೂ ಅಧಿಕವಿದ್ದರೇ, ಗೃಹಸಾಲಕ್ಕೆ ಬಡ್ಡಿದರ ಶೇ. 9.15ರಷ್ಟು ಇದ್ದದ್ದು ಶೇ.8.60ಕ್ಕೆ ಇಳಿಸಲಾಗುತ್ತದೆ. ಕ್ರೆಡಿಟ್‌ ಸ್ಕೋರ್‌ 700ರಿಂದ 749ರ ನಡುವೆ ಇದ್ದರೆ ಬಡ್ಡಿದರ ಶೇ. 9.35ರ ಬದಲಿಗೆ ಶೇ.8.70 ಅನ್ವಯವಾಗುತ್ತದೆ.

Paytm Payment Bank:

 

 

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಗಡುವು ಪೇಟಿಎಂ ಪೇಮೆಂಟ್‌ ಬ್ಯಾಂಕ್‌ (Paytm Payment Bank) ನ ಕೆಲವು ವ್ಯವಹಾರಗಳಿಗೆ ಸಂಬಂಧಿಸಿದ ನಿಷೇಧವನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ (RBI) ಮಾ.15ರ ತನಕ ವಿಸ್ತರಿಸಿದೆ. ಹೊಸ ಠೇವಣಿ ಅಥವಾ ಟಾಪ್‌ಅಪ್‌ಗಳನ್ನು ಸ್ವೀಕರಿಸದಂತೆ RBI ನಿರ್ಬಂಧಿಸಿದೆ. ಮಾರ್ಚ್ 15ರ ನಂತರ, ಆರ್‌ಬಿಐ ಪತ್ರಿಕಾ ಪ್ರಕಟಣೆಯ ಪ್ರಕಾರ, ಕ್ಯಾಶ್‌ಬ್ಯಾಕ್‌ ಮತ್ತು ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಹೆಚ್ಚಿನ ಠೇವಣಿಗಳು, ಕ್ರೆಡಿಟ್‌ ವಹಿವಾಟುಗಳು ಅಥವಾ ಟಾಪ್‌-ಅಪ್‌ಗಳಿಗೆ ಅವಕಾಶ ಇರುವುದಿಲ್ಲ.

IDBI Bank Special FD Festival:

ಐಡಿಬಿಐ ಬ್ಯಾಂಕ್‌ ವಿಶೇಷ ಎಫ್‌ಡಿ ಉತ್ಸವ IDBI Bank ವಿಶೇಷ ಎಫ್‌ಡಿ (FD) ಉತ್ಸವವನ್ನು ನಡೆಸುತ್ತಿದೆ. 300 ದಿನಗಳು, 375 ದಿನಗಳು ಮತ್ತು 444 ದಿನಗಳ ವಿಶೇಷ ಅವಧಿಯ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ನೀಡುತ್ತದೆ. ಕ್ರಮವಾಗಿ 7.05, 7.10 ಮತ್ತು 7.25% ಬಡ್ಡಿದರಗಳನ್ನು ಗ್ರಾಹಕರು ಪಡೆಯಬಹುದು. ಇದಕ್ಕೆ ಕೊನೆಯ ದಿನಾಂಕ ಕೂಡ ಮಾರ್ಚ್ 31 ಆಗಿರುತ್ತದೆ.

Credit Calculation:

ಕ್ರೆಡಿಟ್‌ ಕಾರ್ಡ್‌ ಲೆಕ್ಕಾಚಾರದ ನಿಯಮ ಕ್ರೆಡಿಟ್‌ ಕಾರ್ಡ್‌ (Credit Card) ಬಿಲ್‌ನಲ್ಲಿಕನಿಷ್ಠ ಮೊತ್ತವನ್ನು ಲೆಕ್ಕಾಚಾರ ಮಾಡುವ ವಿಧಾನವು SBI Credit Card ನಲ್ಲಿ ಬದಲಾಗುತ್ತದೆ. ಅದಕ್ಕೆ ಕೊನೆಯ ದಿನಾಂಕ ಮಾರ್ಚ್ 15 ಆಗಿರುತ್ತದೆ.

advertisement

Leave A Reply

Your email address will not be published.