Karnataka Times
Trending Stories, Viral News, Gossips & Everything in Kannada

Election 2024: ನಿರ್ಧಾರ ಬದಲಿಸಿದ ಕೇಂದ್ರ ಎಲೆಕ್ಷನ್ ಬೆನ್ನಲ್ಲೇ ಇಂತಹವರಿಗೆ ವರ್ಷಕ್ಕೆ 3 ಸಿಲಿಂಡರ್ ಉಚಿತ

advertisement

PM Modi to launch Ujjwala Yojana 2.0 : ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡವರ್ಗದ ಜನರಿಗೆ , ಆರ್ಥಿಕವಾಗಿ ಹಿಂದುಳಿದ ವರ್ಗಕ್ಕಾಗಿ ಅನೇಕ ಯೋಜನೆ ಪರಿಚಯಿಸಿದ್ದನ್ನು ನಾವು ಕಾಣಬಹುದು. ಅದೇ ರೀತಿ ಅಂತಹ ಯೋಜನೆಯಲ್ಲಿ ಸೌದೆ ಮುಕ್ತ ಅಡುಗೆಗೆ ಪ್ರೋತ್ಸಾಹಿಸುವ ಉಜ್ವಲ್ ಯೋಜನೆ ಬಗ್ಗೆ ನಾವಿಂದು ತಿಳಿಸಲಿದ್ದು BPL ಕಾರ್ಡ್ ಹೊಂದಿರು ವವರಿಗೆ ಈ ಯೋಜನೆ ಅಡಿಯಲ್ಲಿ ವಿಶೇಷ ಪ್ರಯೋಜನ ಸಿಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಂದ್ರ ಸರಕಾರವು ತಾಂತ್ರಿಕ ಅಭಿವೃದ್ಧಿ ವಿಚಾರದಲ್ಲಿ ಬಹಳ ಮುಂಚುಣಿಯಲ್ಲಿ ಇದೆ ಎನ್ನಬಹುದು. ಅದೇ ರೀತಿ ಮನೆಯ ಅಭಿವೃದ್ಧಿ ಆಗಬೇಕೆಂದರೆ ಮನೆಯ ಹಂತದ ಪ್ರಮುಖ ಬೆಳವಣಿಗೆ ಆಗಬೇಕು ಶೌಚಾಲಯ ನಿರ್ಮಾಣ , ಮನೆ ನಿರ್ಮಾಣ ಮಾಡುವ ಜೊತೆಗೆ ಮನೆಯಲ್ಲಿ ಅಡುಗೆ ಮಾಡಲು ಸೌದೆ ಒಲೆ ಬಳಸುವ ಬದಲಾಗಿ ಗ್ಯಾಸ್ ಸಿಲಿಂಡರ್ ವಿತರಣೆ ವ್ಯವಸ್ಥೆ ಜಾರಿಗೊಳಿಸಲಾಗಿದ್ದು ಇದನ್ನು BPL ಕಾರ್ಡ್ ದಾರರಿಗೆ ಮಾತ್ರವೇ ನೀಡಲಾಗುತ್ತಿದೆ.

PM Modi to launch Ujjwala Yojana 2.0 today: All you need to know about scheme
Image Source: Public TV

advertisement

ಉದ್ದೇಶ ಏನು?
ಹಿಂದೆಲ್ಲ ಅಡುಗೆ ಮಾಡುವಾಗ ಸೌದೆ ಒಲೆ ಬಳಸಲಾಗುತ್ತಿತ್ತು ಇದು ಬಳಕೆ ಕಷ್ಟ ಮತ್ತು ಆರೋಗ್ಯಕ್ಕೆ ಕೂಡ ಹಾನಿಯಾಗುತ್ತಿತ್ತು. ಅದರ ಜೊತೆಗೆ ಸೌದೆ ಒಲೆಗಾಗಿ ಜನರು ಕಾಡಿನ ನಾಶ ಮಾಡುತ್ತಿದ್ದಾರೆ. ಈ ಅರಣ್ಯ ನಾಶ ತಡೆಯುವ ಜೊತೆಗೆ ಮಹಿಳೆಯರಿಗೆ ಅಡುಗೆ ಕೆಲಸಕ್ಕೂ ಉಪಯೋಗ ಆಗಬೇಕೆಂಬ ಕಾರಣಕ್ಕೆ ಈ ಒಂದು ಉಜ್ವಲ್ ಯೋಜನೆಯನ್ನು 2016ರಲ್ಲಿ ಪರಿಚಯಿಸಲಾಗಿದೆ.

ಮೂರು ಉಚಿತ ಸಿಲಿಂಡರ್
ಸೌದೆ ಒಲೆ ಬಳಸಿ ಅನೇಕ ಬಡವರ್ಗದ ಮಹಿಳೆಯರಿಗೆ ಅಡುಗೆ ಮಾಡಲು‌ ಸಮಸ್ಯೆ ಉಂಟಾಗುತ್ತಿತ್ತು ಹಾಗಾಗಿ ಉಜ್ವಲ್ ಯೋಜನೆಯ ಮೂಲಕ ಸಿಲಿಂಡರ್ ವಿತರಣೆ ಮಾಡಲಾಯಿತು. ಇದೀಗ ಪ್ರತಿವರ್ಷ ಮೂರು ಸಿಲಿಂಡರ್ ನೀಡುವ ಮೂಲಕ ಬಡ ವರ್ಗದ ಜನತೆಗೆ ನೆರವಾಗುತ್ತಿದೆ. ಮೊದಲಿಗೆ ಎಲ್ಲರಿಗೂ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯಾದರೆ ಬಳಿಕ ಅದನ್ನು BPL ಕಾರ್ಡ್ ದಾರರಿಗೆ ಮಾತ್ರ ಎಂದು ತಿಳಿಸಲಾಯಿತು. ಹೀಗಾಗಿ ಅನೇಕ ಆರ್ಥಿಕವಾಗಿ ಹಿಂದುಳಿದ ಬಡವರ್ಗದವರು ಇದರ ಪ್ರಯೋಜನ ಪಡೆಯುತ್ತಿದ್ದು ಇನ್ನಷ್ಟು ಈ ಯೋಜನೆ ಜನರಿಗೆ ವಿಸ್ತರಿಸಬೇಕು ಎಂಬುದು ಕೇಂದ್ರ ಸರಕಾರದ ನಿಲುವಾಗಿದೆ.

PM Modi to launch Ujjwala Yojana 2.0 today: All you need to know about scheme
Image Source: Public TV

ಅರ್ಜಿ ಸಲ್ಲಿಸಿ
ಉಜ್ವಲ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ನೀವು ಕೂಡ ಆನ್ಲೈನ್ ಮೂಲಕ ಅರ್ಜಿಯನ್ನು ಹಾಕಬಹುದು ಅದಕ್ಕಾಗಿ www.pmuy.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಆಧಾರ್ ಕಾರ್ಡ್,ರೇಷನ್ ಕಾರ್ಡ್,ವಿಳಾಸ ಪ್ರಮಾಣ ಪತ್ರ,ಬ್ಯಾಂಕ್ ಪುಸ್ತಕ ಇತ್ಯಾದಿ ಅಗತ್ಯ ದಾಖಲೆ ಬೇಕು.ಈ ಎಲ್ಲ ದಾಖಲೆ ಹೊಂದಿದ್ದು ಅದನ್ನು ಪರಿಶೀಲನೆ ಮಾಡಿ BPL ಕಾರ್ಡ್ ಹೊಂದಿದ್ದವರಿಗೆ ಮಾತ್ರವೇ ಉಜ್ವಲ್ ಯೋಜನೆ ನೀಡಲಾಗುವುದು.

advertisement

Leave A Reply

Your email address will not be published.