Karnataka Times
Trending Stories, Viral News, Gossips & Everything in Kannada

Ration Card: ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ 3 ದಾಖಲೆ ಕಡ್ಡಾಯ! ರಾಜ್ಯ ಸರ್ಕಾರದ ಪ್ರಕಟಣೆ

advertisement

New ration card 2024: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೆ ಬಂದ ಗ್ಯಾರೆಂಟಿ ಯೋಜನೆಯ ಸಲುವಾಗಿ ಯೋಜನೆಯ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಅನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ. ಅನೇಕ ಜನರ ರೇಶನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಬಾಕಿ ಇದ್ದರೆ ಇನ್ನೂ ಅನೇಕರು ಹೊಸದಾಗಿ ರೇಷನ್ ಕಾರ್ಡ್ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಹೊಸದಾಗಿ ರೇಶನ್ ಕಾರ್ಡ್ ಪಡೆಯಲು ಅರ್ಜಿ ಹಾಕುವವರಿಗೆ ಇಲ್ಲೊಂದು ಶುಭ ಸುದ್ದಿ ಕಾದಿದೆ.

ಇಷ್ಟು ದಿನಗಳ ವರೆಗೆ ರೇಶನ್ ಕಾರ್ಡ್ ಗಾಗಿ ಅರ್ಜಿ ಹಾಕುವ ಆನ್ಲೈನ್ ಪೋರ್ಟಲ್(Online Apply) ಅನ್ನು ತಾಂತ್ರಿಕ ಕಾರಣಕ್ಕಾಗಿ ತಡೆಹಿಡಿಯಲಾಗಿತ್ತು ಆದರೆ ಈಗ ಮುಕ್ತ ಅವಕಾಶವನ್ನು ನೀಡಲಾಗುತ್ತಿದೆ. ಈಗ ಹೊಸದಾಗಿ ರೇಶನ್ ಕಾರ್ಡ್ ಗೆ ಅರ್ಜಿ ಹಾಕುವವರು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಬಹುದಾಗಿದೆ. ಅದಕ್ಕೆ ನೀವು ಯಾವ ಕ್ರಮ ಅನುಸರಿಸಬೇಕು ಎಂಬ ಪೂರ್ತಿ ಮಾಹಿತಿ ಇಲ್ಲಿದೆ.

new ration card apply
Image Source: DNA India

advertisement

ವೈದ್ಯಕೀಯ ಲಾಭ
ವೈದ್ಯಕೀಯ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೇಶನ್ ಕಾರ್ಡ್ ಹೊಂದಿದ್ದವರಿಗೆ ಅದರಲ್ಲಿಯೂ BPL ರೇಶನ್ ಕಾರ್ಡ್ ಹೊಂದಿದ್ದವರಿಗೆ ಕೆಲವು ವಿಶೇಷ ರಿಯಾಯಿತಿ ಸಿಗಲಿದೆ. ಹಾಗಾಗಿ ರೇಶನ್ ಕಾರ್ಡ್ ಯಾವಾಗ ಬರುತ್ತೆ ಎಂದು ಕಾದವರು ಇದ್ದಾರೆ. ಅಂತವರು ವೈದ್ಯಕೀಯ ಚಿಕಿತ್ಸೆ ಕಾರಣಕ್ಕೆ ಶೀಘ್ರ BPL ರೇಶನ್ ಕಾರ್ಡ್ ಪಡೆಯಬಹುದಾಗಿದೆ. ಹಳೆ ರೇಶನ್ ಕಾರ್ಡ್ ಕಳೆದುಕೊಂಡವರು, ಹೊಸದಾಗಿ ಮದುವೆ ಆದವರು, ಕುಟುಂಬದಿಂದ ಪ್ರತ್ಯೇಕ ವಾಸಿಸುವವರು, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬಹುದು.

ಈ ದಾಖಲೆಗಳು ಅಗತ್ಯ
ನಿಮ್ಮ ವಯಸ್ಸಿನ ದೃಢೀಕರಣ ಪತ್ರಗಳಾದ ಆಧಾರ್ ಕಾರ್ಡ್, ಜನನ ಸರ್ಟಿಫಿಕೇಟ್ ಬೇಕಾಗಲಿದೆ. ನಿಮ್ಮ ವಾಸಸ್ಥಳದ ದೃಢೀಕರಣ ಪತ್ರಗಳಾದ ಆಧಾರ್ ಕಾರ್ಡ್, ಮತದಾರರ ಗುರುತು ಚೀಟಿ ಹೊಂದಿರಬೇಕು. ಕುಟುಂಬದ ಫೋಟೊ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ರೇಶನ್ ಕಾರ್ಡ್ ಅನ್ನು ಹೊಸದಾಗಿ ಪಡೆಯುವವರಿಗೆ ಕೇಳಲಾಗುತ್ತದೆ.

new ration card apply
Image Source: DNA India

ಎಲ್ಲಿ ಅರ್ಜಿ ಹಾಕಬೇಕು
ನೀವು ಆನ್ಲೈನ್ ಮೂಲಕ ಅರ್ಜಿ ಹಾಕಲು ಬಯಸಿದರೆ https://ahara.kar.nic.in/ ಗೆ ಭೇಟಿ ನೀಡಿ ಅರ್ಜಿ ಹಾಕಬಹುದು ಎಪ್ರಿಲ್ 3ರಿಂದ ರೇಶನ್ ಕಾರ್ಡ್ ಹೊಸದಾಗಿ ಅರ್ಜಿ ಹಾಕುವವರಿಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ರೇಶನ್ ಕಾರ್ಡ್ ಗಾಗಿ ವೈದ್ಯಕೀಯ ಸೌಲಭ್ಯ ಪಡೆಯುವವರು ತುರ್ತು ಅರ್ಜಿ ಹಾಕಬಹುದು. ಆಫ್ಲೈನ್ ಮೂಲಕವಾದರೆ ಗ್ರಾಮ ಒನ್ , ಕರ್ನಾಟಕ ಒನ್ , ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆ ನೀಡಬೇಕು.

advertisement

Leave A Reply

Your email address will not be published.