Karnataka Times
Trending Stories, Viral News, Gossips & Everything in Kannada

ಈ ರೀತಿಯಾಗಿ ಮದುವೆಯಾಗುವವರಿಗೆ 50 ಸಾವಿರ ರೂ ಹಣ ಗ್ಯಾರಂಟಿ! ಸರ್ಕಾರದ ಹೊಸ ಸ್ಕೀಮ್

advertisement

INCENTIVE FOR THE SIMPLE MARRIAGE: ಮದುವೆ ಎರಡು ಜೀವಗಳನ್ನು ಬೆಸೆಯುವ ಬಂಧನವಾಗಿದ್ದರು ಇದೇ ಮದುವೆಗಾಗಿ ಸಾಲ ಸೂಲ ಮಾಡುವವರ ಪ್ರಮಾಣ ಈಗ ಅಧಿಕವಾಗಿದೆ. ಕೈಯಲ್ಲಿ ಶಕ್ತಿ ಇಲ್ಲದಿದ್ದರೂ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮದುವೆಯಾಗುವ ಅನೇಕ ವರ್ಗವನ್ನು ನಾವು ಕಾಣಬಹುದು. ಹೀಗೆ ಸಾಲ ಮಾಡಿದವರೇ ಕಡೆಗೆ ಸಾಲ ತೀರಿಸಲಾಗದರೆ ಪರದಾಡುತ್ತಾರೆ. ಆದರೆ ನೀವು ಸರಳವಾಗಿ ವಿವಾಹವಾಗಲು ಬಯಸಿದರೆ ಸರಕಾರ ನಿಮಗೆ ಆರ್ಥಿಕ ನೆರವು ನೀಡಲಿದ್ದು ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ಎಷ್ಟು ಮೊತ್ತ ಸಿಗಲಿದೆ?
ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ವಿವಾಹವಾಗುವ ಅಥವಾ ಈಗಾಗಲೇ ಆದ ದಂಪತಿಗೆ 50,000 ರೂಪಾಯಿ ಮೊತ್ತವನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತಿದೆ. ಹಾಗೆಂದು ಅರ್ಜಿ ಸಲ್ಲಿಸಿದವರಿಗೆಲ್ಲ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಇದಕ್ಕೆ ಏನೆಲ್ಲ ಅರ್ಹತೆ ಬೇಕೆಂದು ಈ ಕೆಳಗಿನಂತೆ ತಿಳಿಸಲಾಗಿದೆ.

Image Source: Public TV

advertisement

ಅರ್ಹತೆ ಏನು
*ಸರಳವಾಗಿ ವಿವಾಹವಾಗಲು ಬಯಸುವವರು ಮತ್ತು ಈಗಾಗಲೇ ವಿವಾಹವಾಗಿದ್ದು ಒಂದು ವರ್ಷ ಪೂರ್ಣ ಆಗಿಲ್ಲ ಎನ್ನುವವರು ಈ ಯೋಜನೆಗೆ ಅರ್ಹತೆ ಪಡೆಯಲಿದ್ದಾರೆ.
*ಎರಡನೇ ಮದುವೆಗೆ ಈ ಪ್ರೋತ್ಸಾಹಧನ ಸಿಗಲಾರದು. ಸರಳ ವಿವಾಹವಾಗುವವರಿಗಾಗಿಯೇ ಈ ಪ್ರೋತ್ಸಾಹ ಧನ ನೀಡುವ ಕಾರಣ ಬಡವರ್ಗದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಈ ಮೊತ್ತ ನೆರವು ನೀಡಲಿದೆ.
*ಎರಡು ಲಕ್ಷದ ಆದಾಯ ಮೀರಿರಬಾರದು.
*ಪರಿಶಿಷ್ಟ ಜಾತಿಗೆ ಸೇರಿದವರಿಗೆ ಮಾತ್ರ ಈ ಅನುದಾನ ನೀಡಲಾಗುತ್ತದೆ.
*ಕರ್ನಾಟಕದ ನಿವಾಸಿಯಾಗಿರಬೇಕು.
*ಅಂತರ್ಜಾತಿ ವಿವಾಹ ಆಗುವವರಿಗೆ ಈ ಯೋಜನೆ ಅರ್ಹತೆ ಇರಲಾರದು

Image Source: Public TV

ಏನೆಲ್ಲ ಮಾಹಿತಿ ಬೇಕು?
*ಪತಿ ಹಾಗೂ ಪತ್ನಿಯ ಆಧಾರ್ ಕಾರ್ಡ್ ಬೇಕು.
*ಪತಿ ಹಾಗೂ ಪತ್ನಿಯ ಜಾತಿ ಪ್ರಮಾಣ ಪತ್ರ
*ಪತಿ ಹಾಗೂ ಪತ್ನಿಯ ಆದಾಯ ಪ್ರಮಾಣ ಪತ್ರ ಅಗತ್ಯವಾಗಿದೆ.
*ಮದುವೆಯ ಸರ್ಟಿಫಿಕೇಟ್ ಬೇಕು.
*ಫೋಟೊ ಬೇಕು.
*ನೋಂದಾಯಿತ ಸಂಘ ಸಂಸ್ಥೆಗಳಿಂದ ಸಾಮೂಹಿಕ ವಿವಾಹ ಆಗಿದ್ದರೆ ಸಾಮೂಹಿಕ ವಿವಾಹ ನೋಂದಣಿ ಪ್ರಮಾಣ ಪತ್ರ ಬೇಕಾಗಲಿದೆ.
*ಗಂಡ ಹೆಂಡತಿಯ ಜಂಟಿ ಅಕೌಂಟ್ ಪಾಸ್ ಬುಕ್ ಅಗತ್ಯ.

ಎಷ್ಟು ಸಮಯ ಬೇಕಾಗಲಿದೆ?
ಇದಕ್ಕೆ ಸಮಾಜ ಕಲ್ಯಾಣ ಇಲಾಖೆಯ https://swdservices.karnataka.gov.in ಈ ವೆಬ್ಸೈಟ್ ಮೂಲಕ ಅರ್ಜಿ ಹಾಕಬಹುದು, ಇಲ್ಲವಾದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ದಾಖಲೆಗಳ ಸಮೇತ ಅರ್ಜಿ ಭರ್ತಿ ಮಾಡಿ ನೀಡಬೇಕು. ಆಗ 3ರಿಂದ 6 ತಿಂಗಳ ತನಕ ಪರಿಶೀಲನೆ ಮಾಡಿ ಆ ಬಳಿಕ ದಂಪತಿಯ ಜಂಟಿ ಖಾತೆಗೆ ಹಣ ಜಮೆ ಮಾಡಲಾಗುವುದು.

advertisement

Leave A Reply

Your email address will not be published.