Karnataka Times
Trending Stories, Viral News, Gossips & Everything in Kannada

Post Office: ಪೋಸ್ಟ್ ಆಫೀಸ್ ನಲ್ಲಿ 3, 5 ಹಾಗೂ 10 ಲಕ್ಷ FD ಮಾಡಿದ್ರೆ ಎಷ್ಟು ರಿಟರ್ನ್ಸ್ ಗೊತ್ತಾ?

advertisement

ಪೋಸ್ಟ್ ಆಫೀಸ್ ಟ್ಯಾಕ್ಸ್ ಸೇವಿಂಗ್ ಫಿಕ್ಸ್ಡ್ ಡೆಪಾಸಿಟ್ ಯೋಜನೆ: ಯೋಜನೆಯನ್ನುವುದು ಬ್ಯಾಂಕು ಅಥವಾ ಪೋಸ್ಟ್ ಆಫೀಸ್ (Post Office) ಮೂಲಕ ನಡೆಸಲ್ಪಡುವಂತಹ ಒಂದು ಫಿಕ್ಸೆಡ್ ಡೆಪಾಸಿಟ್ ಯೋಜನೆ (Fixed Deposit Scheme) ಯಾಗಿದೆ. ಹೂಡಿಕೆದಾರರು ಇದರಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಸಾಕು ನಂತರ ಇದರಿಂದ ಬರುವಂತಹ ಬಡ್ಡಿ ಹಣವನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ. ಯಾವಾಗ ಮೆಚುರಿಟಿ ಸಮಯ ಬರುತ್ತದೆಯೋ ಆಗ ಅವರು ಹೂಡಿಕೆ ಮಾಡಿರುವಂತಹ ಅಸಲು ಹಣದ ಜೊತೆಗೆ ಬಡ್ಡಿ ಹಣವನ್ನು ಕೂಡ ಅವರು ಪಡೆದುಕೊಳ್ಳಬಹುದು. ಇದು ಬೇರೆ ಬೇರೆ ಮೆಚುರಿಟಿ ಅವಧಿಗೆ ಸಿಗಬಹುದಾದ ಯೋಜನೆಯಾಗಿದೆ.

ಉದಾಹರಣೆಗೆ ಈ ಯೋಜನೆಯಲ್ಲಿ ಒಂದು ಎರಡು ಮೂರು ಹಾಗೂ ಐದು ವರ್ಷಗಳ ಕಾಲ ಹೂಡಿಕೆ ಮಾಡುವಂತಹ ಬೇರೆ ಬೇರೆ ಆಪ್ಷನ್ ಗಳನ್ನು ನೀಡಲಾಗಿದೆ. ಇವುಗಳು ಖಾತರಿಯಾಗಿ ಆದಾಯವನ್ನು ತಂದು ಕೊಡುವಂತಹ ಯೋಜನೆ ಆಗಿದ್ದರು ಕೂಡ ಎಲ್ಲಾ ಪ್ಲಾನಿಂಗ್ ಗಳು ನಿಮಗೆ ಇನ್ಕಮ್ ಟ್ಯಾಕ್ಸ್ ಆಕ್ಟ್ 1961ರ 80 ಸಿ ಪ್ರಕಾರ 1.50 ಲಕ್ಷ ರೂಪಾಯಿಗಳ ತೆರಿಗೆ ರಿಯಾಯಿತಿಯನ್ನು ನೀಡುವುದಿಲ್ಲ. ಕೇವಲ ಐದು ವರ್ಷಗಳ ಯೋಜನೆ ಮಾತ್ರ ನಿಮಗೆ ಈ ಲಾಭವನ್ನು ಪಡೆದುಕೊಳ್ಳುವ ಅವಕಾಶ ನೀಡುತ್ತದೆ.

 

Image Source: informalnewz

 

ಇದಕ್ಕಾಗಿ ಇದನ್ನು ಟ್ಯಾಕ್ ಸೇವಿಂಗ್ ಫಿಕ್ಸ್ ಡೆಪಾಸಿಟ್ (Tax Saving Fixed Deposit) ಎಂಬುದಾಗಿ ಕರೆಯಲಾಗುತ್ತದೆ. ಐದು ವರ್ಷಗಳ ಯೋಜನೆಯ ಮೇಲೆ ನಿಮಗೆ ವಾರ್ಷಿಕ 7.5% ಬಡ್ಡಿ ದರವನ್ನು ನೀಡಲಾಗುತ್ತದೆ. ಸಾವಿರ ರೂಪಾಯಿಗಳ ಹೂಡಿಕೆಯಿಂದ ನೀವು ಈ ಯೋಜನೆಯನ್ನು ಪ್ರಾರಂಭ ಮಾಡಬಹುದಾಗಿದ್ದು ಇದಕ್ಕೆ ಯಾವುದೇ ರೀತಿಯ ಮ್ಯಾಕ್ಸಿಮಮ್ ಲಿಮಿಟ್ ಇಲ್ಲ ಎಂಬುದಾಗಿ ತಿಳಿದುಕೊಳ್ಳಬಹುದಾಗಿದೆ.

advertisement

ಸಿಂಗಲ್ ಅಕೌಂಟಿಂದ ಹಿಡಿದು ಜಂಟಿ ಖಾತೆಯವರೆಗೂ ಕೂಡ ನೀವು ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಮಗುವಿನ ಹೆಸರಿನಲ್ಲಿ ಅದರ ಪೋಷಕರು ಕೂಡ ಖಾತೆಯನ್ನು ತೆರೆಯ ಬಹುದಾಗಿದೆ. ಐದು ವರ್ಷಗಳ ಯೋಜನೆಯನ್ನು ಮತ್ತೆ ಮುಂದಿನ 18 ತಿಂಗಳಿಗೆ ವಿಸ್ತರಿಸಿಕೊಳ್ಳಬಹುದಾದಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ.

ಪೋಸ್ಟ್ ಆಫೀಸ್ ಟ್ಯಾಕ್ಸ್ ಸೇವಿಂಗ್ ಸ್ಕೀಮ್ (Post Office Tax Saving Scheme) ನಲ್ಲಿ ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ:

 

Image Source: informalnewz

 

  • ಒಂದು ವೇಳೆ ನೀವು ಈ ಯೋಜನೆ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳ ಯೋಜನೆಗೆ ಹೂಡಿಕೆ ಮಾಡಿದ್ರೆ ನೀವು ಬಡ್ಡಿಯ ರೂಪದಲ್ಲಿ 1,34,984 ರೂಪಾಯಿಗಳ ಹೆಚ್ಚುವರಿ ಹಣವನ್ನು ಪಡೆದುಕೊಳ್ಳುತ್ತೀರಿ ಅಂದರೆ ಒಟ್ಟಾರೆಯಾಗಿ 3 ಲಕ್ಷ ರೂಪಾಯಿಗಳ ಹೂಡಿಕೆಗೆ 4,34,984 ರೂಪಾಯಿಗಳ ರಿಟರ್ನ್ ಅನ್ನು ಪಡೆದುಕೊಳ್ಳುತ್ತೀರಿ.
  • 5 ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ನೀವು ಹೆಚ್ಚುವರಿ ಯಾಗಿ 2,24,974 ರೂಪಾಯಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.
  • ನೀವು ಮಾಡುವಂತಹ 10 ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ಹೆಚ್ಚುವರಿ ಆಗಿ 4,49,948 ರೂಪಾಯಿಗಳನ್ನು ನೀವು ಹೂಡಿಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.