Karnataka Times
Trending Stories, Viral News, Gossips & Everything in Kannada

Fixed Deposit: ಈ 9 ಕಾರಣದಿಂದಾಗಿ ಬ್ಯಾಂಕ್ ನಲ್ಲಿ ಯಾವತ್ತೂ FD ಇಡಬಾರದಂತೆ! ರೂಲ್ಸ್ ಇಲ್ಲಿದೆ

advertisement

ಹಣವನ್ನು ದೀರ್ಘಕಾಲಿಕ ಹೂಡಿಕೆ ಮಾಡುವುದರಲ್ಲಿ ಫಿಕ್ಸ್ಡ್ ಡೆಪಾಸಿಟ್ (Fixed Deposit) ಒಂದು ಅತ್ಯಂತ ಜನಪ್ರಿಯವಾಗಿರುವಂತಹ ಯೋಜನೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಕಲಿಯುಗದಲ್ಲಿ ಎಲ್ಲಾನು ಒಳ್ಳೆಯದೇ ಆಗುತ್ತೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ಕೂಡ ಕೆಲವೊಂದು ಸಮಸ್ಯೆಗಳಿರುತ್ತವೆ. ಹಾಗಿದ್ರೆ ಫಿಕ್ಸೆಡ್ ಡೆಪಾಸಿಟ್(Fixed Deposit) ರಿಸ್ಕ್ ಆಗೋದಿಕ್ಕೆ ಇರುವಂತಹ ಒಂಬತ್ತು ಕಾರಣಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ.

ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುವುದರ ಹೊಂದಿರುವ ಕೆಲವೊಂದು ನಷ್ಟಗಳು:

 

Image Source: Mint

 

1. ಸ್ಟಾಕ್ ಹಾಗೂ ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ ಬರುವಂತಹ ರಿಟರ್ನ್ ಗಿಂತ ಫಿಕ್ಸೆಡ್ ಡೆಪಾಸಿಟ್ (Fixed Deposit) ಸ್ವಲ್ಪಮಟ್ಟಿಗೆ ಕಡಿಮೆಯಾಗಿರುತ್ತದೆ ಹಾಗೂ ಅದರಲ್ಲಿ ಯಾವುದೇ ಹೆಚ್ಚಳ ಕಂಡು ಬರೋದಿಲ್ಲ ಫಿಕ್ಸ್ ಆಗಿರುತ್ತದೆ. ಬೇರೆ ಹೂಡಿಕೆ ಗಳಿಗಿಂತ ಬಡ್ಡಿ ಕೂಡ ಕಡಿಮೆ ಆಗಿರುತ್ತದೆ ಅನ್ನೋದು ಇದರ ಪ್ರಮುಖ ಕಾರಣವಾಗಿದೆ.

2. ನೀವು ಪ್ರಾರಂಭದಲ್ಲಿ ಹೂಡಿಕೆ ಮಾಡುವಾಗ ಎಷ್ಟು ಬಡ್ಡಿಗೆ ಫಿಕ್ಸೆಡ್ ಡೆಪಾಸಿಟ್ ಪ್ರಾರಂಭ ಮಾಡಿರುತ್ತಿರೋ ಕೊನೆಯವರೆಗೂ ಕೂಡ ಅದೇ ಬಡ್ಡಿಯಲ್ಲಿ ನಿಮಗೆ ಹಣ ಸಿಗುತ್ತದೆ ಅನ್ನೋದೇ ಮತ್ತೊಂದು ನಷ್ಟದ ವಿಚಾರವಾಗಿದೆ.

3. ಮತ್ತೊಂದು ಪ್ರಮುಖವಾಗಿರುವಂತಹ ನಷ್ಟದ ವಿಚಾರ ಏನೆಂದರೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಹೂಡಿಕೆಯಲ್ಲಿ ನೀವು ಎಷ್ಟು ವರ್ಷಕ್ಕೆ ಅದನ್ನು ಹೂಡಿಕೆ ಮಾಡಿರುತ್ತಿರೋ ಅದರ ನಡುವೆ ಅದನ್ನು ಅರ್ಜೆನ್ಸಿಯಲ್ಲಿ ಕೂಡ ತೆಗೆದುಕೊಳ್ಳುವ ಹಾಗಿಲ್ಲ ಅನ್ನೋದೇ ನಿಯಮವಾಗಿದೆ. ಕೆಲವೊಮ್ಮೆ ಹಾಳ ಬೇಕಾಗಿರುವ ಸಂದರ್ಭದಲ್ಲಿ ಕೂಡ ಅವುಗಳನ್ನು ತೆಗೆದುಕೊಳ್ಳಲು ನೀವು ಸಾಕಷ್ಟು ಕಷ್ಟ ಪಡಬೇಕಾಗಿರುತ್ತದೆ.

advertisement

4. ಇನ್ನು ನೀವು ಫಿಕ್ಸೆಡ್ ಡೆಪಾಸಿಟ್ ಮೇಲೆ ಹೂಡಿಕೆ ಮಾಡಿರುವಂತಹ ಹಣದಲ್ಲಿ ಬರುವಂತಹ ಬಡ್ಡಿಯ ಮೇಲೆ ಟಿಡಿಎಸ್ ಟ್ಯಾಕ್ಸ್ ಅನ್ನು ಕಟ್ಟಬೇಕಾಗುತ್ತೆ. ಅಂದ್ರೆ ಆದಾಯದ ಮೇಲೆ ಕೂಡ ನೀವು ಹಣವನ್ನು ಕಳೆದುಕೊಳ್ಳುತ್ತೀರಿ.

5. ಹಣದುಬ್ಬರದ ದರದ ಸಂದರ್ಭದಲ್ಲಿ ಅದರ ನಿರೀಕ್ಷಿತ ದೊರಕಿಂತ ಫಿಕ್ಸಿಡ್ ಡೆಪಾಸಿಟ್ (Fixed Deposit) ನ ಬಡ್ಡಿದರ ಕಡಿಮೆ ಆಗಿರುತ್ತದೆ. ಇದು ಕೂಡ ಫಿಕ್ಸೆಡ್ ಡೆಪಾಸಿಟ್ ಹುಡುಕಿದರೂ ಕಂಡುಬರುವಂತಹ ನಷ್ಟದ ಅಂಶಗಳಲ್ಲಿ ಒಂದಾಗಿದೆ.

 

Image Source: Mint

 

6. ಬೇರೆ ಹೂಡಿಕೆಗಳ ರೀತಿಯಲ್ಲಿ ಬೇಕಾದ ತಕ್ಷಣ ಈ ಯೋಜನೆಯ ಮಾರಾಟ ಮಾಡುವ ಹಾಗಿಲ್ಲ. ಫಿಕ್ಸೆಡ್ ಡೆಪಾಸಿಟ್ ನ ಲಾಕ್ ಇನ್ ಪಿರಿಯಡ್ ಸಂದರ್ಭದ ವರೆಗೆ ನೀವು ಹಣವನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಕಾಯಬೇಕಾಗಿರುತ್ತದೆ. ಹೀಗಾಗಿ ಇದರ ಲಿಕ್ವಿಡಿಟಿ ಕೂಡ ಕಡಿಮೆ ಆಗಿರುತ್ತದೆ.

7. ನೀವು ಮಾಡಿರುವಂತಹ ಇನ್ವೆಸ್ಟ್ಮೆಂಟ್ ಮೇಲೆ ಹೆಚ್ಚಿನ ಹಣವನ್ನು ನೀವು ಪಡೆದುಕೊಳ್ಳಲು ಸಾಧ್ಯವಿಲ್ಲ ಕೇವಲ ಬಡ್ಡಿ ದರದ ರೂಪದಲ್ಲಿ ಮಾತ್ರ ಪಡೆದುಕೊಳ್ಳುತ್ತೀರಿ. ನಿಮ್ಮ ಬಂಡವಾಳ ಇದ್ದ ಹಾಗೆ ಇರುತ್ತದೆ ಅದು ಹೆಚ್ಚಾಗುವುದಿಲ್ಲ.

8. ಹೂಡಿಕೆ ಮಾಡಿದ್ರೆ ಮಾತ್ರ ಹೆಚ್ಚಿನ ಲಾಭ ಸಿಗುತ್ತದೆ ಆದರೆ ಕೆಲವೊಮ್ಮೆ ಬ್ಯಾಂಕ್ ಮುಳಗಿ ಹೋಗುವ ಸಾಧ್ಯತೆ ಇರುತ್ತದೆ ಆ ಸಂದರ್ಭದಲ್ಲಿ ನಿಮ್ಮ ದೊಡ್ಡ ಮಟ್ಟದ ಫಿಕ್ಸೆಡ್ ಡೆಪೋಸಿಟ್ ಹೂಡಿಕೆ ನಿಮ್ಮ ಕೈ ತಪ್ಪಿ ಹೋಗುವ ಸಾಧ್ಯತೆ ಕೂಡ ಇರುತ್ತದೆ.

9. ಒಂದು ವೇಳೆ ನೀವು ಅವಧಿಗಿಂತ ಮುಂಚೆ ಹಣವನ್ನು ಪಡೆದುಕೊಳ್ಳುವಂತಹ ಪ್ರಯತ್ನವನ್ನು ಮಾಡಿದ್ರೆ ನಿಮ್ಮ ಹೂಡಿಕೆಯ ಹಣದ ಒಂದರಿಂದ ಮೂರು ಪ್ರತಿಶತ ಹಣವನ್ನು ಪೆನಾಲ್ಟಿ ರೂಪದಲ್ಲಿ ಕಟ್ಟಬೇಕಾಗುತ್ತದೆ. ನಿಮ್ಮ ಹಣವನ್ನು ನೀವು ಪಡೆದುಕೊಳ್ಳುವುದಕ್ಕೆ ಇಲ್ಲಿ ಪೆನಾಲ್ಟಿ ಕೂಡ ಕಟ್ಟಬೇಕಾಗುತ್ತದೆ.

advertisement

Leave A Reply

Your email address will not be published.