Karnataka Times
Trending Stories, Viral News, Gossips & Everything in Kannada

Fasal Bima Yojana: ಈ ಜಿಲ್ಲೆಗೆ ಬೆಳ್ಳಂಬೆಳಿಗ್ಗೆ ಬೆಳೆ ವಿಮೆ ಹಣ ಜಮೆ! ನಿಮಗೂ ಬಂದಿರಬಹುದು ಈ ಲಿಸ್ಟ್ ಚೆಕ್ ಮಾಡಿ

advertisement

Pradhan Mantri Fasal Bima Yojana: 2023-24ರ ಮುಂಗಾರಿನ ಬೆಳೆ ವಿಮೆ ಪರಿಹಾರದ ಮೊತ್ತವನ್ನು ವಿಮಾ ಕಂಪನಿ ಬಿಡುಗಡೆ ಮಾಡಿ ರೈತರ ಖಾತೆಗೆ ವರ್ಗಾವಣೆ ಮಾಡಿದೆ. ಮಳೆ ಇಲ್ಲದೆ ತೀರಾ ಬರಗಾಲದಿಂದ ಬೇಸತ್ತು ಹೋಗಿರುವಂತಹ ರೈತರಿಗೆ ಹಾಗೂ ಬಂಡವಾಳ ಹಾಕಿದ ಹಣವು ವಾಪಸ್ ಬರದೆ ಅರ್ಥಿಕವಾಗಿ ಕಂಗೆಟ್ಟು ಹೋಗಿರುವಂತಹ ರಾಜ್ಯದ ರೈತರಿಗೆ ಸಹಾಯ ಮಾಡುವ ಸಲುವಾಗಿ ವಿಮಾ ಕಂಪನಿಗಳು 2023-24ನೇ ಸಾಲಿನ ವಿಮೆ ಹಣ(insurance amount)ವನ್ನು ರೈತರ ಖಾತೆಗೆ ಹಾಕಿದ್ದಾರೆ.

ಯಾವ ಕೃಷಿ ಬೆಳೆಗೆ ರೈತರೂ ಹೆಚ್ಚಿನ ವಿಮೆ ಪಡೆಯಲಿದ್ದಾರೆ?

ಹಲವು ತಿಂಗಳಿಂದ ಹನಿ ಮಳೆಯೂ ಆಗದೆ ಒಣಗಿರುವಂತಹ ಮೆಕ್ಕೆಜೋಳ, ಹೈಬ್ರಿಡ್ ಜೋಳ, ಶೇಂಗಾ, ಸಜ್ಜೆ, ನವಣೆ, ಹತ್ತಿ ಹಾಗೂ ಇತ್ಯಾದಿ ಬೆಳೆಗಳನ್ನು ಬೆಳೆದು ಒಂದು ರೂಪಾಯಿ ಆದಾಯ ದೊರಕದೆ ಅರ್ಥಿಕವಾಗಿ ತತ್ತರಿಸಿ ಹೋಗಿರುವಂತಹ ರೈತರ ಹಣಕಾಸಿನ ಪರಿಸ್ಥಿತಿಯನ್ನು(farmers financial status) ಸುಧಾರಿಸುವ ಸಲುವಾಗಿ ವಿಮೆ ಕಂಪನಿಗಳು ಬೆಳೆ ಮೇಲಿನ ವಿಮೆ ಹಣವನ್ನು ಬಿಡುಗಡೆ ಮಾಡಿದ್ದಾರೆ.

Pradhan Mantri Fasal Bima Yojana
Image Source: News18

ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ

ಮೂಲಗಳ ಮಾಹಿತಿಯ ಪ್ರಕಾರ ಚಿತ್ರದುರ್ಗ ಹಾಗೂ ದಾವಣಗೆರೆಯ ಕೆಲ ತಾಲೂಕಿನ ರೈತರ ಖಾತೆಗಳಿಗೆ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಬೆಳೆ ಮಸೂದೆ ಪ್ರಮಾಣದ ಆಧಾರದಲ್ಲಿರುವ ಮಾರ್ಗಸೂಚಿಯ ಅನ್ವಯ ಇತರೆ ಜಿಲ್ಲೆಗಳಲ್ಲಿಯೂ ಬೆಳೆ ವಿಮೆ ಅರ್ಜಿ ವಿಲೇವಾರಿ(disposition of insurance application)ಯನ್ನು ಇಲಾಖೆ ಮತ್ತು ವಿಮಾ ಕಂಪನಿ(insurance company)ಗಳಿಂದ ಮಾಡಲಾಗುತ್ತಿದೆ.

advertisement

ಮೊಬೈಲ್ನಲ್ಲಿಯೇ ವಿಮೆ ಹಣ ದೊರಕಿದೆಯೇ ಎಂಬುದನ್ನು ಚೆಕ್ ಮಾಡಿ ?

ವಿಮೆ ಹಣ ಜಮೆಯಾಗಿರುವುದರ ಮಾಹಿತಿ ತಿಳಿಯಲು ರೈತರು ಯಾವುದೇ ಮಾಹಿತಿ ಕೇಂದ್ರ ಅಥವಾ ಇನ್ನಿತರ ಶಾಖೆಗಳಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದೆಯೆಂದು ಚೆಕ್ ಮಾಡಿಕೊಳ್ಳಬಹುದು. ರಾಜ್ಯ ಸರ್ಕಾರದ ಬೆಳೆ ವಿಮೆ ಸಂರಕ್ಷಣಾ ಎಂಬ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ಖಾತೆಗೆ ಹಣ ಜಮೆಯಾಗಿದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.

ವಿಮೆ ಜಮೆ ಆಗಿರುವುದರ ಮಾಹಿತಿ ತಿಳಿಯಲು ಈ ಪ್ರಕ್ರಿಯೆಯನ್ನು ಅನುಸರಿಸಿ

•ಮೊದಲಿಗೆ 2023-24ರ ವರ್ಷವನ್ನು ಆಯ್ದುಕೊಳ್ಳಬೇಕು ಅನಂತರ, ಋತು ಆಯ್ಕೆ ಪಟ್ಟಿಯಲ್ಲಿ ಮುಂಗರನ್ನು ಆಯ್ಕೆ ಮಾಡಿಕೊಳ್ಳಿ.
•ಮೇಲಿನ ದಾಖಲಾತಿಗಳನ್ನು ಸರಿಯಾಗಿ ನಮೂದಿಸಿದ ನಂತರ ಫಾರ್ಮರ್ಸ್ ಕಾಲಂ(farmers column) ನಲ್ಲಿ ಕಾಣುವ ಕ್ರಾಪ್ ಇನ್ಶೂರೆನ್ಸ್ ಡೀಟೇಲ್ಸ್ ಇನ್ ಸರ್ವೇ ನಂಬರ್(insurance details in survey number) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

Pradhan Mantri Fasal Bima Yojana
Image Source: News18

•ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಹಾಗೂ ಜಮೀನಿನ ಸರ್ವೆ ನಂಬರನ್ನು ನಮೂದಿಸಿದರೆ ಪುಟ ಒಂದು ತೆರೆದು ಹಿಸ್ಸಾ ನಂಬರ್ ಲಭ್ಯವಾಗುತ್ತದೆ.
•ಅದರ ಜೊತೆಗೆ ಸರ್ವೆ ನಂಬರ್, ಬೆಳೆ ವಿಮೆ ಹಾಗೂ ಅರ್ಜಿ ನಂಬರ್ ದೊರುಕುತ್ತದೆ, ಒಂದೆಡೆ ಇದೆಲ್ಲವನ್ನು ಬರೆದುಕೊಂಡು ಅದೇ ಪೇಜ್ನ ಮೇಲ್ಭಾಗದ ಹೋಂ ಬಟನ್ ಮೇಲೆ ಕ್ಲಿಕ್ ಮಾಡಿ ಫಾರ್ಮರ್ಸ್ ಕಾಲಮ್‌ನಲ್ಲಿ ಚೆಕ್ ಸ್ಟೇಟಸ್(check status) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

•ಆಗ ಪುಟ ಒಂದು ತೆರೆಯುವುದು, ಅದರಲ್ಲಿ ನೀವು ಬರೆದುಕೊಂಡಂತಹ ಅರ್ಜಿ ನಂಬರ್ ಮತ್ತು ಕ್ಯಾಪ್ಚಾ ಕೋಡನ್ನು ನಮೂದಿಸಿ ಸರ್ಚ್ ಬಟನ್ ಅನ್ನು ಕ್ಲಿಕ್ ಮಾಡಿ. * ಕೆಳಭಾಗದಲ್ಲಿ ಬೆಳೆಯ ವಿವರ ಹಾಗೂ ಮಧ್ಯಂತರ ಬೆಳೆ ವಿಮೆ ಜಮಾ ಆಗಿರುವುದರ ಮಾಹಿತಿ ಲಭ್ಯವಾಗುತ್ತದೆ. ಅದರ ಮುಖಾಂತರ ನಿಮ್ಮ ಬ್ಯಾಂಕ್ ವಿವರಗಳ ಜೊತೆಗೆ ಯಾವ ದಿನಾಂಕದಲ್ಲಿ ಎಷ್ಟು ವಿಮೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂಬುದನ್ನು ತಿಳಿಯಬಹುದು.

advertisement

Leave A Reply

Your email address will not be published.