Karnataka Times
Trending Stories, Viral News, Gossips & Everything in Kannada

Income Tax: ಇನ್ಮುಂದೆ ಆದಾಯ ತೆರಿಗೆದಾರರು ಈ ತಪ್ಪು ಮಾಡಿದ್ದಲ್ಲಿ 25 ಲಕ್ಷ ರೂಪಾಯಿ ದಂಡ, 7 ವರ್ಷ ಜೈಲು ಶಿಕ್ಷೆ!

advertisement

ಇತ್ತೀಚಿನ ದಿನಗಳಲ್ಲಿ ತೆರಿಗೆ ವಂಚನೆ ಮತ್ತು ಕಪ್ಪುಹಣದ ವಹಿವಾಟು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆ (Income Tax Department) ಈಗಾಗಲೆ ಹಲವು ಕ್ರಮಗಳನ್ನು ಕೈಗೊಂಡಿದೆ. ಶಂಕಿತ ತೆರಿಗೆದಾರರ ಆದಾಯದ ಮೂಲಗಳ ತನಿಖೆಗೆ ತೆರಿಗೆ ಇಲಾಖೆ ಇಳಿದಿದೆ. ಆದಾಯವನ್ನು ಕಡಿಮೆ ವರದಿ ಮಾಡುವ ಮೂಲಕ ಮತ್ತು ತೆರಿಗೆ ವಿನಾಯಿತಿ ಹಕ್ಕುಗಳನ್ನು ಉತ್ಪ್ರೇಕ್ಷಿಸುವ ಮೂಲಕ ತಪ್ಪು ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸದಂತೆ ಸಂಬಳದಾರರಿಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಎಚ್ಚರಿಕೆಯನ್ನು ನೀಡಿದೆ.

ಒಂದು ವೇಳೆ ಅವರು ಹಾಗೆ ಮಾಡಿದರೆ, ಆದಾಯ ತೆರಿಗೆ ಇಲಾಖೆಯು ಅವರಿಗೆ ದಂಡವನ್ನು ವಿಧಿಸುತ್ತದೆ ಮಾತ್ರವಲ್ಲದೆ ಆದಾಯ ತೆರಿಗೆ (Income Tax) ಕಾಯ್ದೆಯಡಿ ಕಾನೂನು ಕ್ರಮವನ್ನು ಸಹ ಕೈಗೊಳ್ಳುತ್ತದೆ. ಈ ಕಾಯಿದೆಯಡಿಯಲ್ಲಿ ಶಿಕ್ಷೆಗೆ ವಿವಿಧ ನಿಬಂಧನೆಗಳಿವೆ. ಶಿಕ್ಷೆ ಅಥವಾ ದಂಡವು ಅಕ್ರಮದ ಸ್ವರೂಪವನ್ನು ಅವಲಂಬಿಸಿರುತ್ತದೆ ಮತ್ತು ತೆರಿಗೆ ವಂಚನೆ ಇದ್ದರೆ ಅದಕ್ಕೆ ಬೇರೆ ಶಿಕ್ಷೆ ಇರುತ್ತದೆ. ಹಾಗಿದ್ದರೆ ಈಗಾಗಲೇ ಜಾರಿಯಲ್ಲಿರುವ ಐಟಿ ನಿಯಮಗಳನ್ನೂ ಹಾಗೂ ನಿಬಂಧನೆಗಳನ್ನು ನೋಡುವುದಾದರೆ ಆದಾಯದ ಕುರಿತಾಗಿ ಸುಳ್ಳು ಕ್ಲೈಮ್ ಅನ್ನು ಕಳ್ಳತನ ಎಂದು ಪರಿಗಣಿಸಲಾಗುತ್ತದೆ

ಆದಾಯ ತೆರಿಗೆ ಇಲಾಖೆಯ (Income Tax Department) ಪ್ರಕಾರ, ಸಂಬಳ (Salary) ಪಡೆಯುವ ಉದ್ಯೋಗಿಯು CA ಅಥವಾ ತೆರಿಗೆ ಸಲಹೆಗಾರರ ತಪ್ಪು ಸಲಹೆಯ ಮೇರೆಗೆ ರಿಟರ್ನ್‌ನಲ್ಲಿ ತಪ್ಪು ಕ್ಲೈಮ್ ಮಾಡಿದರೆ, ಅದನ್ನು ತೆರಿಗೆ ವಂಚನೆ ಎಂದು ಪರಿಗಣಿಸಲಾಗುತ್ತದೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ CA ಅಥವಾ ತೆರಿಗೆ ಸಲಹೆಗಾರರೂ ಭಾಗಿಯಾಗಿದ್ದಾರೆ ಎಂಬುದಾಗಿ ಪ್ರಕರಣ ದಾಖಲಿಸಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತದೆ. ಅಲ್ಲದೆ, ಇಲಾಖೆಯು ತನ್ನ ಮಟ್ಟದಲ್ಲಿ ತೆರಿಗೆ ವಂಚನೆಯ ಸಂಪೂರ್ಣ ತನಿಖೆ ನಡೆಸುತ್ತದೆ. ಇದನ್ನು ಪರಿಶೀಲಿಸಲು ಇಲಾಖೆಯು ದೊಡ್ಡ ಸ್ವಯಂಚಾಲಿತ ವ್ಯವಸ್ಥೆಯನ್ನು ಹೊಂದಿದೆ. ಇದು ITR ಪ್ರಕ್ರಿಯೆಯಲ್ಲಿ ಒಳಪಡುತ್ತದೆ. ಯಾವುದೇ ಉದ್ಯೋಗಿ ಅಥವಾ ಅಧಿಕಾರಿ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

Tax ವಂಚನೆ ಕುರಿತು ವಿಜಿಲೆನ್ಸ್ ಇಲಾಖೆ ತನಿಖೆ ನಡೆಸುತ್ತದೆ:

ಸರ್ಕಾರಿ ಇಲಾಖೆಗಳು (Govt Departments) ಅಥವಾ ಸಾರ್ವಜನಿಕ ಉದ್ಯಮಗಳ ನೌಕರರು (Employees of Public Enterprises) ಸುಳ್ಳು ಮಾಹಿತಿಯನ್ನು ನೀಡಿದರೆ ಆ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ವಿಜಿಲೆನ್ಸ್ ಇಲಾಖೆಗೆ ನೀಡಲಾಗುತ್ತದೆ. ನಿಯಮಾನುಸಾರ ಕ್ರಮ ಕೈಗೊಂಡು ಇಲಾಖೆಗೆ ಮಾಹಿತಿ ನೀಡಬೇಕಿದೆ. ಒಂದು ವೇಳೆ ಸುಳ್ಳು ಮಾಹಿತಿ ಸಿಕ್ಕಿಬಿದ್ದ ಸಂದರ್ಭದಲ್ಲಿ, ಸೆಕ್ಷನ್ 270 ಎ ಅಡಿಯಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಈ ನಿಬಂಧನೆಯನ್ನು ಇತ್ತೀಚೆಗೆ ಐಟಿ ಕಾಯಿದೆಗೆ ಸೇರಿಸಲಾಗಿದೆ.

 

 

advertisement

ಅಕ್ರಮಗಳು ಸಾಬೀತಾದರೆ, ಆದಾಯದ ಮೇಲಿನ ತೆರಿಗೆಯ (Income Tax) 50% ದಂಡವನ್ನು ಸಹ ವಿಧಿಸಲಾಗುತ್ತದೆ. ಆದಾಗ್ಯೂ, ತಪ್ಪು ದಾಖಲೆಗಳನ್ನು ಸಲ್ಲಿಸುವ ಮೂಲಕ ತಪ್ಪು ಆದಾಯವನ್ನು ಘೋಷಿಸಿದರೆ ಈ ದಂಡವು 200% ಕ್ಕೆ ಹೆಚ್ಚಾಗುತ್ತದೆ. ಇದರಲ್ಲಿ ಸೆಕ್ಷನ್ 276 ಸಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಂತಹ ಪ್ರಕರಣಗಳಲ್ಲಿ, ಆರು ತಿಂಗಳಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಇದೆ. ಹಾಗೂ 25 ಲಕ್ಷ ರೂಪಾಯಿ ದಂಡ ವಿಧಿಸಹುದಾಗಿದೆ.

ಅಜ್ಞಾತ ಮೂಲಗಳಿಂದ ಆದಾಯ ಕಂಡುಬಂದರೆ ಶಿಕ್ಷೆ:

ಕೇವಲ ಆದಾಯ ಘೋಷಣೆ ಮಾಡಿದರೆ ಸಾಲದು, ಆದಾಯದ ಮೂಲದ ಬಗ್ಗೆಯೂ ಮಾಹಿತಿ ನೀಡಬೇಕು ಎಂಬುದಾಗಿ ಇಲಾಖೆ ಹೇಳಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 271AAC ಅಡಿಯಲ್ಲಿ, ಆದಾಯ ತೆರಿಗೆ ಅಧಿಕಾರಿಯು ಈ ಪ್ರಕರಣದಲ್ಲಿ ಶೇಕಡಾ 10 ರ ದರದಲ್ಲಿ ದಂಡವನ್ನು ವಿಧಿಸಬಹುದು. ಆದಾಯದ ನಗದು ಕ್ರೆಡಿಟ್, ಬಹಿರಂಗಪಡಿಸದ ಹೂಡಿಕೆ, ಬಹಿರಂಗಪಡಿಸದ ಹಣ, ಹೂಡಿಕೆಯ ಮೊತ್ತವನ್ನು ತಪ್ಪಾಗಿ ನಿರೂಪಿಸುವುದು ಮತ್ತು ವೆಚ್ಚಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದಿದ್ದಲ್ಲಿ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ. ರಿಟರ್ನ್ ಪ್ರಕ್ರಿಯೆಯ ಸಮಯದಲ್ಲಿ ತೆರಿಗೆ ಲೆಕ್ಕಪರಿಶೋಧನೆ ಸರಿಯಾಗಿ ಮಾಹಿತಿ ನೀಡಿಲ್ಲ.ಇಲ್ಲವೇ ಪರಿಶೋಧನೆ ನಡೆಸಲಾಗಿಲ್ಲ ಎಂದು ಕಂಡುಬಂದರೆ, ನಂತರ ದಂಡವನ್ನು ಸಹ ವಿಧಿಸಲಾಗುತ್ತದೆ. ಇದು ವ್ಯಾಪಾರಿಗಳು ಅಥವಾ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಸಲ್ಲಿಸದಿರುವ ಅಥವಾ ರಿಟರ್ನ್ಸ್ ಸಲ್ಲಿಸುವಲ್ಲಿ ವಿಳಂಬ ಮಾಡುವಂತಿಲ್ಲ:

ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಸದಿದ್ದರೆ ದಂಡವನ್ನೂ ವಿಧಿಸಲಾಗುತ್ತದೆ. ಇದಕ್ಕಾಗಿ 5000 ರೂಪಾಯಿಗಳ ವರೆಗೆ ದಂಡ ವಿಧಿಸುವ ಸಾಧ್ಯತೆಗಳಿವೆ. ಒಂದು ವರ್ಷದೊಳಗೆ ಟಿಡಿಎಸ್ ರಿಟರ್ನ್ (TDS Return) ಸಲ್ಲಿಸದಿರುವುದು ಕಂಡುಬಂದರೆ, 10 ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸ ಬಹುದಾಗಿದೆ.

ಒಬ್ಬ ವ್ಯಕ್ತಿಯು ಪ್ಯಾನ್ ಕಾರ್ಡ್ (PAN Card) ಅನ್ನು ಆದಾಯ ತೆರಿಗೆ ಖಾತೆಗೆ ಲಿಂಕ್ ಮಾಡದಿದ್ದರೆ, ಅದು ಕೂಡ ಬಹು ದೊಡ್ದ ಅಪರಾಧವಾಗುತ್ತದೆ . ಪ್ಯಾನ್ ವಿವರಗಳು ತಪ್ಪಾಗಿದ್ದರೂ,ಅದು ಕೂಡ ಅಪರಾಧ ಮತ್ತು 10,000 ರೂಪಾಯಿವರೆಗೆ ದಂಡವನ್ನು ವಿಧಿಸಬಹುದು. ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ (TAN) ನಲ್ಲಿ ವ್ಯತ್ಯಾಸ ಕಂಡುಬಂದಲ್ಲಿ 10,000 ರೂಪಾಯಿ ದಂಡ  ತೆರಬೇಕಾಗುತ್ತದೆ.ಈ ಮೇಲಿನ ಯಾವುದೇ ತಪ್ಪುಗಳನ್ನು ಹೆಚ್ಚು ಗಂಭೀರವೆಂದು ಪರಿಗಣಿಸದೇ ತೆರಿಗೆ ಹಣ ಪಾವತಿಸದೇ ಹೋದರೆ ಮತ್ತು ಯಾರೊಬ್ಬರ ಅಪರಾಧ ಸಾಬೀತಾದರೆ, ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ವಿಧಿಸಲಾಗುತ್ತದೆ.

advertisement

Leave A Reply

Your email address will not be published.