Karnataka Times
Trending Stories, Viral News, Gossips & Everything in Kannada

Old Bike: ಹಳೆ ಬೈಕ್ ಇದ್ದವರಿಗೆ ಸಿಹಿಸುದ್ದಿ! ಈ ಕೆಲಸ ಮಾಡಿದ್ರೆ 14 ರೂ ಖರ್ಚಿನಲ್ಲಿ 100Km ಓಡಾಡಬಹುದು

advertisement

ಈಗ ವಾಹನಗಳಲ್ಲಿ ಪೆಟ್ರೋಲ್ ಗಿಂತ ಹೆಚ್ಚಿನ ಆಸಕ್ತಿ ಇ ವಿ ವಾಹನಗಳ ಮೇಲಿದೆ. ಆದರೆ ಹೈಬ್ರಿಡ್ ತಂತ್ರಜ್ಞಾನದ ವಾಹನಗಳು ಇನ್ನೂ ಹೆಚ್ಚು ಹೆಸರುವಾಸಿ ಆಗುತ್ತಿವೆ. ಇದರಲ್ಲಿ ಯಾವಾಗ ಬೇಕು ಅವಾಗ ಇಂಧನದ ಬದಲಾವಣೆ ಸಾಧ್ಯವಿರುತ್ತದೆ. ಹೀಗೆ ಸಾಧ್ಯವಿರುವ ಸಮಯದಲ್ಲಿ ಕಡಿಮೆ ಖರ್ಚಿನ ಎಲೆಕ್ಟ್ರಿಕ್ ಪವರ್ ಬಳಕೆಯಾಗುತ್ತಿದ್ದು ಉಳಿದ ಸಂದರ್ಭಗಳಲ್ಲಿ ಪೆಟ್ರೋಲ್ ನ ಮೂಲಕ ವಾಹನ ಚಲಾವಣೆ ಆಗುತ್ತದೆ. ಇದು ಪರಿಸರದ ದೃಷ್ಟಿಯಿಂದಲೂ ಬಹಳ ಉಪಯೋಗಕಾರಿಯಾದ ಇಂಧನದ ವ್ಯವಸ್ಥೆಯಾಗಿದೆ. ಈಗ ಹಲವು ಕಾರು ತಯಾರಕರು ಇಂತಹದೇ ಹೈಬ್ರಿಡ್ ವಾಹನಗಳನ್ನು (Hybrid Vehicles)  ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇದು ಹೆಚ್ಚಿನ ಹೆಸರನ್ನು ಗಳಿಸುತ್ತಿದೆ. ಇದೇ ರೀತಿ ಮುಂದೆ ಬರುವ ಕಾರುಗಳು ಕೂಡ ಇದೇ ತರಹದ ಇಂಧನ ಆಯ್ಕೆಗಳೊಂದಿಗೆ ಬರಲಿವೆ ಎಂದು ಹೇಳಲಾಗುತ್ತಿದೆ.

ಹೊಸ ಬೈಕು ಖರೀದಿಸಬೇಡಿ – ಇರುವ ಬೈಕನ್ನೇ ಎರಡೂ ಬಗೆಯ ಇಂಧನಕ್ಕೆ ಮಾರ್ಪಡಿಸಿ

ಆದರೆ ಹೊಸ ವಾಹನ ಖರೀದಿ ಮಾಡದೆ ನಿಮ್ಮಲ್ಲಿ ಇರುವ ಬೈಕನ್ನೇ ನೀವು ಪೆಟ್ರೋಲ್ ಮತ್ತು ಬ್ಯಾಟರಿ ಎರಡರ ಮೂಲಕವೂ ಚಲಾಯಿಸಲು ಸಾಧ್ಯ ಇದೆ ಎಂದಾದಲ್ಲಿ ನೀವು ಖಂಡಿತ ಹೊಸ ಬೈಕಿನ ಯೋಚನೆಯನ್ನು ಬಿಟ್ಟು ಇದೇ ರೀತಿಯ ಇಂಧನ ವ್ಯವಸ್ಥೆಗೆ ಬದಲಾಗಲು ಸಿದ್ದರಿದ್ದೀರಿ ಅಲ್ಲವೇ? ಈಗ ಇದೇ ರೀತಿ, ನಿಮ್ಮ ಬೈಕಿಗೆ (Old Bike) ಕಿಟ್ ಅಳವಡಿಸಿಕೊಂಡು ಪೆಟ್ರೋಲ್ ಮತ್ತು ಬ್ಯಾಟರಿ ಎರಡರ ಮೂಲಕವೂ ಬೈಕ್ ಅನ್ನು ಚಲಾಯಿಸಲು ಸಾಧ್ಯ ಇದೆ. ಈ ಕಿಟ್ ಅನ್ನು ನೀವು ಅಳವಡಿಸಿದ್ದಲ್ಲೇ ಆದಲ್ಲಿ 14 ರೂಪಾಯಿಗಳಲ್ಲಿ 100 ಕಿಲೋಮೀಟರ್ ನ ದೂರವನ್ನು ಕ್ರಮಿಸಬಹುದು. ಇದಾದ ಮೇಲೆ ನಿಮ್ಮ ದಾರಿ ಇನ್ನೂ ಮುಂದುವರಿಯುವುದೇ ಆದಲ್ಲಿ ಪೆಟ್ರೋಲ್ ನ ಸಹಾಯದಿಂದ ಪ್ರಯಾಣವನ್ನು ಮುಂದುವರಿಸಬಹುದು.

Image Source: RushLane

advertisement

ಕರಿಷ್ಮಾ ಗ್ಲೋಬಲ್ ವೆಂಚರ್ಸ್ ನ ಕಿಟ್

ಕರಿಷ್ಮಾ ಗ್ಲೋಬಲ್ ವೆಂಚರ್ಸ್ (Karishma Global Vetures) ಎಂಬ ಕಂಪನಿ ಈ ರೀತಿಯ ಹೈಬ್ರಿಡ್ ಕಿಟ್ ಅಳವಡಿಸುವ ಕೆಲಸಗಳನ್ನು ಆರಂಭಿಸಿದೆ. ನಿಮ್ಮ ಬೈಕಿನ ಇಂಜಿನ್ ಅನ್ನು ಯಾವುದೇ ರೀತಿಯಲ್ಲಿ ಬದಲಾವಣೆ ಮಾಡದೆ ಅದೇ ಬೈಕಿಗೆ ಬ್ಯಾಟರಿ ಕಿಟ್ ಅನ್ನು ಅಳವಡಿಸಿದಾಗ ನಿಮ್ಮ ಬೈಕ್ ಎರಡೂ ಇಂಧನ ವ್ಯವಸ್ಥೆಗಳ ಮೂಲಕ ಚಲಿಸಲು ಆರಂಭವಾಗುತ್ತದೆ. ಒಂದು ಬಾರಿ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದ್ದಲ್ಲಿ 100 ಕಿಲೋಮೀಟರ್ ತನಕ ನಿಮ್ಮ ಬೈಕು ಬ್ಯಾಟರಿಯ ಪವರ್ ಮೇಲೆ ಓಡುತ್ತದೆ. ಅಂದರೆ 14 ರೂಪಾಯಿಗಳ ಖರ್ಚಷ್ಟೇ ನೀವು ಮಾಡಬೇಕಾಗುತ್ತದೆ.

Image Source: IndiaMart

ಲಾಜಿಸ್ಟಿಕ್ ಮೇಳ 2024 ರಲ್ಲಿ ಮಾತನಾಡಿದ ಕರಿಷ್ಮಾ ಗ್ಲೋಬಲ್ ವೆಂಚರ್ನ ಎಂ.ಡಿ ಉತ್ತಮ್ ಸಿಂಘಾಲ್ ಇಲ್ಲಿಯವರೆಗೆ ಬೈಕುಗಳಲ್ಲಿ ಪೆಟ್ರೋಲ್ ಅಥವಾ ಇ ವಿ ಎಂಬ ಆಯ್ಕೆ ಇತ್ತು, ಪೆಟ್ರೋಲ್ ಹಾಗೂ ಇ ವಿ ಎಂಬುದಾಗಿ ನಿಮ್ಮ ಬೈಕ್  (Old Bike)ಅನ್ನು ಮಾರ್ಪಡಿಸಲಿದೆ ಎಂದಿದ್ದಾರೆ. ಇದು ಪ್ರತಿದಿನ ಅತ್ಯಂತ ಕಡಿಮೆ ದೂರವನ್ನು ಕ್ರಮಿಸುವ ಪ್ರಯಾಣಿಕರಿಗೆ ಸಹಾಯ ನೀಡುವ ಜೊತೆಗೆ ಒಂದೊಮ್ಮೆ ದೂರದ ಪ್ರಯಾಣ ಅದೇ ಬೈಕಿನಲ್ಲಿ ಮಾಡಬೇಕು ಎನ್ನುವ ಸಂದರ್ಭ ಬಂದಾಗಲೂ ಅದೇ ಬೈಕ್ ಅನ್ನು ಪೆಟ್ರೋಲ್ ಮೂಲಕ ಚಲಾಯಿಸಿ ನಿಮಗೆ ತಲುಪಬೇಕಾದ ಜಾಗವನ್ನು ತಲುಪಬಹುದಾಗಿದೆ.

advertisement

Leave A Reply

Your email address will not be published.