Karnataka Times
Trending Stories, Viral News, Gossips & Everything in Kannada

Smriti Mandhana: RCB ಕಪ್ ಗೆಲ್ಲಲು ಕ್ಷಣಗಣನೆ! ಫೈನಲ್ ಗು ಮುನ್ನವೇ ದೊಡ್ಡ ಹೇಳಿಕೆ ಕೊಟ್ಟ ನಾಯಕಿ ಸ್ಮೃತಿ ಮಂದಾನ

advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ (Smriti Mandhana) ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಡಬ್ಲ್ಯೂ ಪಿ ಎಲ್ ಫೈನಲ್ (WPL Final)ಗೆ ಮುನ್ನ ತಮ್ಮ ತಂಡದ ಮೇಲೆ ಹೆಚ್ಚು ಒತ್ತಡ ಹೇರಲು ಬಯಸುವುದಿಲ್ಲ ಎಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪುರುಷರ ತಂಡ ಕಳೆದ 17 ವರ್ಷಗಳಲ್ಲಿ ಒಂದೇ ಒಂದು ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ ಆದರೆ ಮೂರು ಬಾರಿ ರನ್ನರ್ ಅಪ್ (2009, 2011, 2016 ) ಸ್ಥಾನಗಳಿಸಿದೆ ಆದರೆ ಮಂದಾನ ಪುರುಷರ ತಂಡದೊಂದಿಗೆ ಮಹಿಳೆಯರ ತಂಡವನ್ನು ಹೋಲಿಕೆ ಮಾಡಬೇಡಿ. ಇದು ನಮಗೆ ಎರಡನೇ ಅವಕಾಶ ನಾವು ಅತ್ಯುತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Image Source: News9Live

ಸ್ಮೃತಿ ಮಂದಾನ (Smriti Mandhana) ಹೀಗ್ಯಾಕ್ ಹೇಳಿದ್ರು ?

ಪುರುಷರ ತಂಡಕ್ಕೆ ಪ್ರಾಮುಖ್ಯತೆ ನೀಡುವಷ್ಟು ಮಹಿಳೆಯರ ತಂಡಕ್ಕೆ ನೀಡುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಆರ್‌ಸಿಬಿ (RCB) ಅಭಿಮಾನಿಗಳು ನೀಡುವ ಪ್ರೋತ್ಸಾಹವನ್ನು ನೋಡಿ ನಾವು ಸಂತೋಷ ಹೊಂದಿದ್ದೇವೆ. ಕಳೆದ ಎರಡು ಬಾರಿ ಉತ್ತಮ ಪ್ರದರ್ಶನ ನೀಡಿ ಆಡಿದ ಡೆಲ್ಲಿ ಕ್ಯಾಪಿಟಲ್ಸ್ (Delhi capitals) ವಿರುದ್ಧ ನಾವು ಅತ್ಯುತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ. ಸ್ಮೃತಿ ಮಂದಾನ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಎರಡನೇ ಸೀಸನ್ನಲ್ಲಿ ಫೈನಲ್ ತಲುಪಿದ್ದು ಪ್ರಶಸ್ತಿ ಗೆಲ್ಲುವ ಸುವರ್ಣ ಅವಕಾಶವನ್ನು ಹೊಂದಿದೆ. ಮೊದಲನೇದಾಗಿ ಇಡೀ ಬ್ರಾಂಚೆಸ್ ಒಂದಿಗೆ ಸಂಪರ್ಕ ಸಾಧಿಸಲು ಈ ವರ್ಷ ನಮಗೆ ಬಹಳ ಮುಖ್ಯವಾಗಿ ಅವಕಾಶ ದೊರೆತಿದೆ ಎಂದು ನಾನು ಭಾವಿಸುತ್ತೇನೆ ಎಂದು ಸ್ಮೃತಿ ಮಂದಾನ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 5 ರನ್ ಗಳ ಗೆಲುವಿನ ಅಂತರ ದಾಖಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಂದಾನ ಇದನ್ನು ಹೇಳಿದ್ದಾರೆ.

advertisement

Image Source: WPL

ಪುರುಷರ ತಂಡದಲ್ಲಿ ಏನಾಯಿತು ? ಹೀಗೆಕಾಯಿತು? ಎನ್ನುವ ಪ್ರಶ್ನೆ ಮೂಡಿದಾಗ ಮಾತ್ರ ಅದು ಮಹಿಳೆಯರ ತಂಡಕ್ಕೆ ಒತ್ತಡವನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಯೋಚಿಸಿ ಹೆಜ್ಜೆ ಇಡಬೇಕಿದೆ ನಮ್ಮದು ಇದು ಎರಡನೇ ಸಲದ ಪಂದ್ಯ ಆದ್ದರಿಂದ ನಾವು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಪುರುಷರ ತಂಡದೊಂದಿಗೆ ಏನಾಯಿತು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಪುರುಷರು ಕಪ್ ಗೆದ್ದಲ್ಲಿ ಸಂತೋಷ. ಒಂದುವೇಳೆ ಸೋಲು ಅನುಭವಿಸಿದರೆ ಕೂಡ ಮುಂದಿನ ಸಲ ಗೆಲ್ಲುತ್ತಾರೆ ಎಂದು ಆತ್ಮವಿಶ್ವಾಸ ನಮ್ಮಲ್ಲಿದೆ. ಡಬ್ಲ್ಯೂಪಿ ಎಲ್ (WPL) ನ ಮೊದಲ ಸೀಸನ್ ಆರ್ ಸಿ ಬಿ ಗೆ ಅಷ್ಟು ಉತ್ತಮವಾಗಿರಲಿಲ್ಲ, ನಾಲ್ಕನೇ ಸ್ಥಾನ ಗಳಿಸಿತ್ತು. ಆದರೆ ಈ ಸಲ ಅತ್ಯುತ್ತಮ ಪ್ರದರ್ಶನದಿಂದಾಗಿ ನಾವಿಂದು ಈ ಮಟ್ಟದಲ್ಲಿ ಇದ್ದೇವೆ. ಹಾಗಾಗಿ ಪುರುಷರ ತಂಡದೊಂದಿಗೆ ಹೋಲಿಸುವುದನ್ನು ಬಿಟ್ಟು ನಮ್ಮ ಪ್ರಯತ್ನ ನಾವು ಮಾಡೋಣ ಎಂದು ಹೇಳಿರುತ್ತೇನೆ ಎಂದು ಸ್ಮೃತಿ ಮಂದಾನ ಹೇಳಿದ್ದಾರೆ.

ಗೆಲುವಿನ ಆಸೆ ಹೊತ್ತಿರುವ ಡೆಲ್ಲಿ ಕೆಪಿಟಲ್ಸ್

ಡೆಲ್ಲಿ ಕೆಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ (Meg Lanning) ತಮ್ಮ ಆಟಗಾರರು ಭಾನುವಾರ ಪಂದ್ಯಾವಳಿಯಲ್ಲಿ ಅತ್ಯುತ್ತಮವಾಗಿ ಕ್ರಿಕೆಟ್ ಆಡುತ್ತಾರೆ. ಮತ್ತು ಕಳೆದ ವರ್ಷ ತಪ್ಪಿದ ಪ್ರಶಸ್ತಿಯನ್ನು ಗೆಲ್ಲುತ್ತಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಆರ್ ಸಿ ಬಿ ವಿರುದ್ಧ ಗೆಲುವು ಸಾಧಿಸುವ ಹಂಬಲವಿದೆ ಎಂದು ನುಡಿದಿದ್ದಾರೆ.

advertisement

Leave A Reply

Your email address will not be published.