Karnataka Times
Trending Stories, Viral News, Gossips & Everything in Kannada

Karnataka: ಏಪ್ರಿಲ್ 2006 ಕ್ಕೂ ಮುನ್ನ ಸರ್ಕಾರೀ ಕೆಲಸಕ್ಕೆ ಸೇರಿದವರಿಗೆ ಗುಡ್ ನ್ಯೂಸ್! ಸಿಎಂ ಘೋಷಣೆ

advertisement

Karnataka to implement old pension scheme : ರಾಜ್ಯದ ಸರಕಾರಿ ನೌಕರಿಗೆ ನೂತನ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾಪನೆಯನ್ನು ಇತ್ತೀಚೆಗಷ್ಟೇ ಚರ್ಚೆ ಯಾಗಿತ್ತು, ಈ ನಡುವೆ 2006ಕ್ಕಿಂತ ಮೊದಲು ನೇಮಕ ಆದ ಸರಕಾರಿ ನೌಕರರಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ ಒಂದನ್ನು ನೀಡಲಾಗಿದೆ‌.ಆ ಪ್ರಕಾರ ಹಳೆ ನಿಶ್ಚಿತ ಪಿಂಚಣಿ ಯೋಜನಾ ಕ್ರಮವನ್ನೇ 2006ಕ್ಕಿಂತ ಮೊದಲು ನೇಮಕ ಆದವರಿಗೆ ಮುಂದುವರಿಸಲು ಸರಕಾರ ತೀರ್ಮಾನಿಸಿದೆ. ಹಾಗಾಗಿ ಈ ಬಗ್ಗೆ ವಿಶೇಷ ಆದೇಶ ಒಂದನ್ನು ರಾಜ್ಯ ಸರಕಾರ ಹೊರಡಿಸಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶೇಷ ಆದೇಶ
ರಾಜ್ಯ ಸರಕಾರವು ಸರಕಾರಿ ನೌಕರರ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಬಿಡುಗಡೆ ಮಾಡಿದೆ. ಎಪ್ರಿಲ್ 1, 2006 ಕ್ಕೂ ಮೊದಲು ನೇಮಕಾದ ಸರಕಾರಿ ನೌಕರರು ಇನ್ನು ಮುಂದೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಲಿದೆ. ಈ ಬಗ್ಗೆ ಸರಕಾರಿ ನೌಕರರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಲಾಗುತ್ತಿದೆ. ಹಾಗೇ ಈ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲವೊಂದು ವಿಶೇಷ ಆದೇಶ ಕೂಡ ನೀಡಲಾಗಿದೆ.

Karnataka to implement old pension scheme for 13,000 govt employees who joined before April 2006
Image Source: Public TV

advertisement

ಈ ಕೆಳಗಿನ ಷರತ್ತು ಅನ್ವಯವಾಗಲಿದೆ
*2006ಕ್ಕೂ ಮೊದಲು ನೇಮಕ ಆದವರಿಗೆ ಈ ಡಿಫೈನ್ಸ್ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮಾನ್ಯತೆ ಸಿಗಲಿದೆ.
*2006 ಎಪ್ರಿಲ್ 1ರ ನಂತರ ನೇಮಕ ಆದವರು ನಿಗಧಿ ಪಡಿಸಿದಂತೆ ಮಾಹಿತಿಯನ್ನು ಜೂನ್ 30, 2024ರ ಒಳಗಾಗಿ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
*ಒಂದು ಬಾರಿ ನೀವು ಆಯ್ಕೆ ಮಾಡಿಕೊಂಡರೆ ಬಳಿಕ ಯಾವುದೇ ಕಾರಣಕ್ಕೆ ಆ ಆಯ್ಕೆ ಬದಲಾವಣೆಗೆ ಅವಕಾಶ ಇರಲಾರದು.
*ಆಯ್ಕೆ ಸರಿಯಾದ ಕ್ರಮದಲ್ಲಿ ತಿಳಿಸದೇ ಹೋದರೆ ಅಥವಾ ಸರಕಾರಿ ನೌಕರರು ನಿಗದಿತ ದಿನಾಂಕದ ಒಳಗೆ ಆಯ್ಕೆ ಬಳಸದೆ ಇದ್ದರೆ ಈಗ ಇರುವ NPS ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮುಂದುವರಿಯಲಿದ್ದಾರೆ.

ಕಾಯುವ ಅಗತ್ಯವಿಲ್ಲ
ಖಾಲಿ ಇದ್ದ ಹುದ್ದೆಗೆ ನೇಮಕವಾದ ಸರಕಾರಿ ನೌಕರರು ನಿಶ್ಚಿತ ಪಿಂಚಣಿ ಯೋಜನೆ ಅಡಿಯಲ್ಲಿ ಉಳಿಯಲು ಬಯಸಿದರೆ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ. ಅಧಿಸೂಚನೆ ಅನ್ವಯ ಆಯ್ಕೆಯಾಗಿ ಕರ್ತವ್ಯಕ್ಕೆ ನೇಮಕವಾಗಿದ್ದರೆ ಸಂಬಂಧ ಪಟ್ಟಂತೆ ಅರ್ಜಿಯನ್ನು ಸಲ್ಲಿಸಿ, ಅನ್ಯ ಇಲಾಖೆಯಲ್ಲಿ ನೇಮಕಾತಿ ಪಡೆದಿದ್ದರೆ ಡಿಫೈನ್ಸ್ ಪಿಂಚಣಿ ಯೋಜನೆಯ ಸೌಲಭ್ಯ ಪಡೆಯಲು ಜೂನ್ 30 2024ರ ಒಳಗಾಗಿ ಈ ಬಗ್ಗೆ ಅರ್ಜಿ ಸಲ್ಲಿಸಬೇಕಿದೆ.

Karnataka to implement old pension scheme for 13,000 govt employees who joined before April 2006
Image Source: Public TV

ಡಿಫೆನ್ಸ್ ಪಿಂಚಣಿ ಯೋಜನೆಗೆ ಸೇರ್ಪಡೆ ಆಗುವ ಆಯ್ಕೆ ಖಚಿತಗೊಂಡ ನಂತರವೇ ಅವರು ಹಳೆಯ ನಿಶ್ಚಿತ ಪಿಂಚಣಿಗೆ ಒಳಪಡಲಿದ್ದಾರೆ. ಈ ಯಾವ ಪ್ರಕ್ರಿಯೆ ಮಾಡದ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿ ಒಳಪಡಲಿದೆ. ಹಾಗಾಗಿ ಕೊನೆ ದಿನಾಂಕದ ವರೆಗೂ ಕಾಯದೆ ಕೂಡಲೇ ನಿಮ್ಮ ಕೆಲಸದ ಪ್ರಕ್ರಿಯೆ ಸಂಬಂಧ ಪಟ್ಟಂತೆ ಸರಕಾರಿ ನೌಕರರು ಸೂಕ್ತ ದಾಖಲೆ ಸಮೇತ ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ‌.

advertisement

Leave A Reply

Your email address will not be published.