Karnataka Times
Trending Stories, Viral News, Gossips & Everything in Kannada

KSRTC: KSRTC ಬಸ್ ಹತ್ತುವ ಮಹಿಳೆಯರಿಗೆ ಹೊಸ ಸೂಚನೆ! ರಾಜ್ಯ ಸರ್ಕಾರದ ಆದೇಶ

advertisement

ಸರಕಾರಿ ಬಸ್ ನಲ್ಲಿ ಗ್ಯಾರೆಂಟಿ ಯೋಜನೆಯಾದ ಶಕ್ತಿ ಯೋಜನೆ (Shakti Yojane) ಜಾರಿಗೆ ಬಂದ ಬಳಿಕ ಉಚಿತವಾಗಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಕ್ರಮ ಈಗಾಗಲೇ ಚಾಲ್ತಿಯಲ್ಲಿ ಇದೆ‌. ಈ ನಡುವೆ KSRTC ಬಸ್ ಓಡಿಸುವ ವಾಹನ ಚಾಲಕರಿಗಾಗಿ ಹೊಸ ನಿಯಮ ಜಾರಿಗೆ ತರಲು ಸರಕಾರ ತೀರ್ಮಾನ ಕೈಗೊಂಡಿದ್ದು, ಈ ಒಂದು ಕ್ರಮ ಅನೇಕ ಸಾರ್ವಜನಿಕರಿಗೆ ಬಹಳ ಅನುಕೂಲ ಆಗಲಿದೆ.

ನೂತನ ಕ್ರಮ

ಮದ್ಯಪಾನ ಆರೋಗ್ಯ ಹಾನಿಕಾರಕ ಎಂದು ತಿಳಿದಿದ್ದರೂ ಕುಡಿಯುವವರ ಸಂಖ್ಯೆ ಕಡಿಮೆ ಆಗಲಿಲ್ಲ. ಮದ್ಯಪಾನ ಮಾಡುವವರು ಚೆನ್ನಾಗಿ ಕುಡಿದು ವಾಹನ ಚಲಾಯಿಸುವ ಪ್ರಮಾಣ ಇತ್ತೀಚೆಗೆ ಅಧಿಕವಾಗಿದ್ದು ಇದನ್ನು‌ ಹತೋಟಿಗೆ ತರಲು ಸರಕಾರ ತೀರ್ಮಾನ ಕೈಗೊಳ್ಳಲು ಮುಂದಾಗುತ್ತಿದೆ. ಕುಡಿದು ವಾಹನ ಚಲಾಯಿಸುವುದು ತಪ್ಪು ಎಂದು ತಿಳಿದಿದ್ದರೂ, ಹಾಗೇ ವಾಹನ ಚಲಾವಣೆ ಮಾಡುವವರು ಅಪಘಾತವನ್ನು ಮಾಡುವುದು ಸಹ ಇದೆ. ಹಾಗಾಗಿ ಪೊಲೀಸರು ಕುಡಿದು ವಾಹನ ಚಲಾವಣೆ ಮಾಡುವವರನ್ನು ಗಮನಿಸಿ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎನ್ನಲಾಗಿದೆ.

Image Source: The Hans India

KSRTC ಬಸ್ ಗೂ ನಿಯಮ:

advertisement

ಸರಕಾರಿ ಬಸ್ ನ ಚಾಲಕರಿಗೆ ಈಗ ಹೊಸ ನಿಯಮ ಜಾರಿಗೆ ತರಲು ಸರಕಾರ ಮುಂದಾಗಿದೆ. ಕರ್ತವ್ಯದ ವೇಳೆಯಲ್ಲಿ KSRTC ಸಿಬ್ಬಂದಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ತಿಳಿದುಬಂದಿದ್ದು ಇದರಿಂದಾಗಿ ಅಪಘಾತ ನಡೆಯುತ್ತಿದೆ. ಹಾಗಾಗಿ ಈ ಅಪಘಾತ ತಡೆಯುವ ಸಲುವಾಗಿ KSRTC ಸಿಬ್ಬಂದಿಯೂ ಕುಡಿದು ವಾಹನ ಚಲಾಯಿಸಬಾರದು. ಹಾಗಾಗಿ ಅಂತವರನ್ನು ಪರಿಶೀಲನೆ ಮಾಡಲು ಮುಂದಾಗಲಾಗಿದ್ದು, ಚಾಲಕರ ಉಸಿರಾಟ ತಪಾಸಣೆ ನಡೆಸುವಂತೆ ಸರಕಾರ ಸೂಚನೆ ನೀಡಿದೆ.

ಸಭೆಯಲ್ಲಿ ಘೋಷಣೆ:

ಅಪಘಾತ ಪ್ರಕರಣದ ವಿಶ್ಲೇಷಣಾ ಸಭೆಯಲ್ಲಿ KSRTC ವ್ಯವಸ್ಥಾಪಕ ನಿರ್ದೇಶಕರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. KSRTC ವಾಹನ ಚಾಲಕರು ಕುಡಿತದ ದಾಸರಾಗಿದ್ದರೆ ಅವರು ಕುಡಿದು ವಾಹನ ಚಲಾಯಿಸಿದರೆ ಅದನ್ನು ಪತ್ತೆ ಹಚ್ಚುವ ಸಲುವಾಗಿ ಪರಿಶೀಲನಾ ತಂಡ ನಿರ್ಮಾಣ ಆಗಲಿದೆ. ಆಯಾ ಘಟಕ ಮತ್ತು ವಸತಿ ಸ್ಥಳದಲ್ಲಿ ಈ ರೀತಿಯಾಗಿ ಉಸಿರಾಟ ಪರಿಶೀಲನೆ ಮಾಡಲಾಗುವುದು. ಕುಡಿದು ವಾಹನ ಚಲಾಯಿಸಿದರೆ ಶಿಸ್ತಿನ ಕ್ರಮ ಹಾಗೂ ಕುಡಿಯದೇ ಇದ್ದರೆ ಚಾಲನೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ.

Image Source: Aanavandi

ಮಹಿಳೆಯರಿಗೆ ಅಧಿಕಾರ:

ರಾತ್ರಿ ಅಥವಾ ಹಗಲಿನ ವೇಳೆಯಲ್ಲಿ KSRTC ಸಿಬ್ಬಂದಿ ವಾಹನ ಚಾಲಕ ಕುಡಿದು ವಾಹನ ಚಲಾಯಿಸುವುದು ಕಂಡು ಬಂದರೆ ಈ ಸಂದರ್ಭದಲ್ಲಿ ದೂರು ನೀಡುವ ಸಂಪೂರ್ಣ ಅಧಿಕಾರ ಸರಕಾರ ನೀಡಿದೆ. ವಾಹನ ಅಪಘಾತ ತಡೆಯುವ ಜೊತೆಗೆ ಸರಕಾರಿ ಸ್ವತ್ತು ಆದ ಬಸ್ ಅನ್ನು ಉಳಿಸುವುದು ನಮ್ಮ ಕರ್ತವ್ಯ ಕೂಡ ಆಗಿದ್ದು ಅಪಘಾತ ನಡೆಯುವ ಮುನ್ನ ಕುಡಿಯುವ ಚಾಲಕರ ವಿರುದ್ಧ ಸಾರಿಗೆ ಇಲಾಖೆಗೆ ದೂರು ಸಲ್ಲಿಸುವ ಅಧಿಕಾರ ಮಹಿಳೆಯರಿಗೆ ನೀಡಲಾಗಿದೆ.

advertisement

Leave A Reply

Your email address will not be published.