Karnataka Times
Trending Stories, Viral News, Gossips & Everything in Kannada

Gold: ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಚಿನ್ನ ಯಾವ ದೇಶದಲ್ಲಿ ಸಿಗುತ್ತೆ ಗೊತ್ತಾ?

advertisement

ಚಿನ್ನ ಅಥವಾ ಬಂಗಾರ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅದರಲ್ಲೂ ನಮ್ಮ ದೇಶದಲ್ಲಿ ಚಿನ್ನಾಭರಣಗಳ ಖರೀದಿ ವರ್ಷವಿಡಿ ನಡೆಯುತ್ತಲೇ ಇರುತ್ತದೆ. ನಮ್ಮ ಹೆಂಗಳೆಯರಿಗಂತು ಸಣ್ಣಪುಟ್ಟ ಕಾರಣಗಳು ಸಾಕು ಚಿನ್ನಾಭರಣ ಖರೀದಿ ಮಾಡಲು. ಎಷ್ಟೋ ಜನ ಉಡುಗೊರೆಯಾಗಿಯೂ ಕೂಡ ಚಿನ್ನಾಭರಣಗಳನ್ನು ನೀಡುತ್ತಾರೆ. ಇನ್ನೂ ಕೆಲವರು ಚಿನ್ನದ ಮೇಲೆ ಹೂಡಿಕೆ ಮಾಡುವುದು ಇದ್ದೇ ಇದೆ.

ಆದರೆ ಚಿನ್ನದ ಬೆಲೆ ಅಂತೂ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ ಅದೆಷ್ಟೋ ಬಾರಿ ಚಿನ್ನ ಖರೀದಿ ಮಾಡಬೇಕು ಅಂದುಕೊಂಡರು ಸಾಧ್ಯವಾಗುವುದಿಲ್ಲ. ಅದರಲ್ಲೂ ಸಾಮಾನ್ಯ ಜನರಿಗೆ ಚಿನ್ನದ ಬೆಲೆ ಜಾಸ್ತಿ ಆಗುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಅಂದಹಾಗೆ ನಮ್ಮ ದೇಶದ ಚಿನ್ನದ (Gold)  ಬೆಲೆ ಎಷ್ಟು ಎನ್ನುವುದು ನಿಮಗೂ ಗೊತ್ತು. ಆದರೆ ಜಗತ್ತಿನಲ್ಲಿ ಇನ್ನೂ ಕೆಲವು ಸ್ಥಳಗಳಲ್ಲಿ ಚಿನ್ನ ಅತ್ಯಂತ ಅಗ್ಗದ ಬೆಲೆಗೆ ಲಭ್ಯವಾಗುತ್ತೆ. ಅಷ್ಟೇ ಅಲ್ಲದೆ ಗುಣಮಟ್ಟವು ಕೂಡ ಉತ್ತಮವಾಗಿರುತ್ತದೆ. ಅಂತಹ ಸ್ಥಳದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ಸ್ಥಳದಲ್ಲಿ ಚಿನ್ನದ ಬೆಲೆ ನಿಜಕ್ಕೂ ಎಷ್ಟು ಎನ್ನುವುದು ತಿಳಿದರೆ, ಖಂಡಿತವಾಗಿಯೂ ನೀವು ಚಿನ್ನ ಖರೀದಿ ಮಾಡುವುದಕ್ಕೆ ಈ ಸ್ಥಳಕ್ಕೆ ಹೋಗುತ್ತೀರಿ!

ದುಬೈನಲ್ಲಿ ಚಿನ್ನದ ಬೆಲೆ ಎಷ್ಟು ಗೊತ್ತಾ?

ಅತ್ಯಂತ ಅಗ್ಗದ ಹಾಗೂ ಗುಣಮಟ್ಟದ ಚಿನ್ನ ಖರೀದಿ ಮಾಡಲು ನೀವು ಬಯಸಿದರೆ ಅದಕ್ಕೆ ದುಬೈ ಬೆಸ್ಟ್ ಪ್ಲೇಸ್ ಎಂದು ಹೇಳಬಹುದು. ಇತರ ದೇಶಗಳಿಗೆ ಹೋಲಿಸಿದರೆ ಅಗ್ಗದ ದರದಲ್ಲಿ ದುಬೈ ನಿಂದ ಚಿನ್ನ ಖರೀದಿ ಮಾಡಿಕೊಂಡು ಬರಬಹುದು ಆದರೆ ವಿಮಾನ ನಿಲ್ದಾಣದಲ್ಲಿ ನೀವು ಎಷ್ಟು ಚಿನ್ನ ಖರೀದಿ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಕಸ್ಟಮ್ ಶುಲ್ಕವನ್ನು ವಿಧಿಸಲಾಗುತ್ತದೆ. ದುಬೈನಲ್ಲಿ ಚಿನ್ನದ ದರ ನಮ್ಮ ದೇಶಕ್ಕೆ ಹೋಲಿಕೆ ಮಾಡಿದರೆ ಪ್ರತಿ 10 ಗ್ರಾಂಗೆ ಕೇವಲ 51,691 ರೂಪಾಯಿಗಳು. ಅಂದರೆ ಹೆಚ್ಚು ಕಡಿಮೆ ಪ್ರತಿ 10 ಗ್ರಾಂ ಗೆ ನಮ್ಮ ದೇಶಕ್ಕಿಂತ 10,000 ಗಳಷ್ಟು ದರ ಕಡಿಮೆ ಎನ್ನಬಹುದು.

advertisement

ಹಾಂಗ್ ಕಾಂಗ್ ನಲ್ಲಿ ಎಷ್ಟಿದೆ ಚಿನ್ನದ ದರ?

ನೀವು ಶುದ್ಧ ಚಿನ್ನವನ್ನು ಖರೀದಿ ಮಾಡಲು ಇಷ್ಟಪಟ್ಟರೆ ಚೀನಾದ ಹಾಂಗ್ ಕಾಂಗ್ ಪ್ರಯಾಣ ಬೆಳೆಸಿ. ಇಲ್ಲಿ ಪ್ರತಿ ಗ್ರಾಂ ಶುದ್ಧ ಚಿನ್ನದ ಬೆಲೆ 5,129.70ಗಳು.

ಸ್ವಿಜರ್ಲ್ಯಾಂಡ್ ಚಿನ್ನದ ಬೆಲೆ!

ಸ್ವಿಜರ್ಲ್ಯಾಂಡ್ ನಲ್ಲಿ ಭಾರತಕ್ಕಿಂತ ಚಿನ್ನದ ಬೆಲೆ ಕಡಿಮೆ ಎನ್ನಬಹುದು. ಇಲ್ಲಿ ಪ್ರತಿ 10 ಗ್ರಾಂ ಚಿನ್ನ, 54,443 ರೂಪಾಯಿಗಳಿಗೆ ಲಭ್ಯ ಇದೆ. ಸ್ವಿಜರ್ಲ್ಯಾಂಡ್ ನಲ್ಲಿ ಚಿನ್ನಾಭರಣಗಳ ವಿಶೇಷವಾದ ವಿನ್ಯಾಸ ಹಾಗೂ ಕೆತ್ತನೆಗೆ ಹೆಸರುವಾಸಿಯಾಗಿದ್ದು ಪ್ರಪಂಚದಾದ್ಯಂತ ಸ್ವಿಜರ್ಲ್ಯಾಂಡ್ ಚಿನ್ನಾಭರಣಗಳು ಹೆಚ್ಚು ಬೇಡಿಕೆ ಹೊಂದಿವೆ.

ಥೈಲ್ಯಾಂಡ್ ನಲ್ಲಿ ಚಿನ್ನದ ಬೆಲೆ!

ಥೈಲ್ಯಾಂಡ್ ನಲ್ಲಿ ಇರುವ ಚೀನಾ ಟೌನ್, ಚಿನ್ನದ ಖರೀದಿಗೆ ಹೆಸರುವಾಸಿಯಾಗಿದೆ. ಬೆಲೆಯಲ್ಲಿ ಉತ್ತಮ ಗುಣಮಟ್ಟದ ಚಿನ್ನವನ್ನು ಖರೀದಿ ಮಾಡಬಹುದು. ಅದೇ ರೀತಿ ಕಾಂಬೋಡಿಯಾದಲ್ಲಿ ಅಗ್ಗದ ಬಲೆಗೆ ಚಿನ್ನ ಸಿಗುತ್ತದೆ. ಇಲ್ಲಿ 10 ಗ್ರಾಂ ಚಿನ್ನಕ್ಕೆ ಕೇವಲ 48,152 ರೂಪಾಯಿಗಳು.

ಈಗೆಲ್ಲಾ ದೇಶಗಳಲ್ಲಿ ಚಿನ್ನದ ಬೆಲೆ ನೋಡಿದರೆ ಭಾರತಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಲಭ್ಯವಿದೆ ಎನ್ನುವುದು ಅರ್ಥವಾಗುತ್ತದೆ. ಹಾಗಾಗಿ ಮುಂದಿನ ಬಾರಿ ನೀವೇನಾದರೂ ವಿದೇಶಕ್ಕೆ ಪ್ರಯಾಣ ಬೆಳೆಸುವುದಾದರೆ ಇಂತಹ ಜಾಗಗಳನ್ನು ಆಯ್ಕೆ ಮಾಡಿಕೊಂಡು ವಿದೇಶಿ ನಿಯಮಗಳ ಅನುಸಾರ ಸ್ವಲ್ಪ ಚಿನ್ನವನ್ನು ಖರೀದಿ ಮಾಡಿಕೊಂಡು ಬಂದರೆ ಒಳ್ಳೆಯದು ಏನು ಅಂತೀರಿ!

advertisement

Leave A Reply

Your email address will not be published.