Karnataka Times
Trending Stories, Viral News, Gossips & Everything in Kannada

Andre Russell: ಬಿರುಗಾಳಿಯಂತೆ ಬಂದ ಚಂಡನ್ನು ತಡೆಯಲಾಗದೆ ಪಿಚ್ ಮೇಲೆ ಬಿದ್ದ ದೈತ್ಯ ಆಟಗಾರ ಆಂಡ್ರಿ ರೆಸಲ್! ವಿಡಿಯೋ ಭಾರಿ ವೈರಲ್!

advertisement

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier league) ಪ್ರಾರಂಭವಾಗಿ ವಾರಗಳೇ ಉರುಳಿವೆ, ಆಯಾ ತಂಡಗಳು ತಮ್ಮ ಎದುರಾಳಿ ತಂಡದ ವಿರುದ್ಧ ಕಠಿಣ ಸ್ಪರ್ಧೆ ನೀಡುತ್ತಾ ಪಾಯಿಂಟ್ಸ್ ಟೇಬಲ್ ನಲ್ಲಿ ಸೆಣೆಸಾಡುತ್ತಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್ ಸೀಸನ್ ಹಬ್ಬದ ಋತುಮಾನವಿದ್ದಂತೆ ಪ್ರತಿ ಮ್ಯಾಚ್ ಗಳನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುವಂತಹ ಕ್ರಿಕೆಟ್ ವೀಕ್ಷಕರು ಆನ್ ಫೀಲ್ಡ್ ನಲ್ಲಿ ನಡೆಯುವಂತಹ ಹಣಾ-ಹಣಿಗಳಿಂದ ಜಬರ್ದಸ್ತ್ ಎಂಟರ್ಟೈನ್ಮೆಂಟ್ ಪಡೆದುಕೊಳ್ಳುತ್ತಿರುತ್ತಾರೆ. ಅದರಂತೆ 17ನೇ ಸೀಸನ್ ಐಪಿಎಲ್ ಶುರುವಾಗಿ 16ಕ್ಕೂ ಹೆಚ್ಚು ಪಂದ್ಯಗಳು ಅದ್ಭುತವಾಗಿ ಮೂಡಿಬಂದಿದೆ.

ಹೀಗಿರುವಾಗ ಏಪ್ರಿಲ್ ೩ರಂದು ವಿಶಾಖಪಟ್ಟಣದಲ್ಲಿ ನಡೆದಂತಹ ಕೊಲ್ಕತ್ತಾ ನೈಟ್ ರೈಡರ್ಸ್ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಕೆಲ ಅಪರೂಪದ ಕ್ಷಣಗಳು ಕ್ಯಾಮೆರಾದ ಕಣ್ಣಿನಲ್ಲಿ ಸೆರೆಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಭಯಾನಕ ಕೆಕೆಆರ್ ಆಟಗಾರ ಆಂಡ್ರಿ ರಸಲ್ (Andre Russell) ಅವರನ್ನು ಕಟ್ಟಿ ಹಾಕಲು ಇಶಾಂತ್ ಶರ್ಮಾ ಮಾಡಿದ ಅದ್ಭುತ ಬೌಲಿಂಗ್ ತಂತ್ರವು ಕೆಲಸ ಮಾಡಿ, ನೇರವಾಗಿ ಸ್ಟಂಪ್ಗೆ ಬಿದ್ದು ಬಿರುಗಾಳಿಯಂತೆ ಆರ್ಭಟಿಸುತ್ತಿದ್ದ ಆಂಡ್ರಿ ರಸೆಲ್ ಔಟಾಗಿದ್ದಾರೆ. ಹೀಗೆ ಬಾಲನ್ನು ತಡೆಯಲು ಪ್ರಯತ್ನ ಪಟ್ಟಂತಹ ಆಂಡ್ರಿ ರಸಲ್(Andre Russell) ಪಿಚ್ ಮೇಲೆ ಬಿದ್ದ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ಕ್ರಿಕೆಟ್ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

ದಾಖಲೆಯ ಮೇಲೆ ದಾಖಲೆ ಸೃಷ್ಟಿಸುತ್ತಿರುವ ಬಲಿಷ್ಠ ಕೆಕೆಆರ್ ತಂಡ!

ಈ ಬಾರಿನಲ್ಲಿ ಸಿಕ್ಕಾಪಟ್ಟೆ ಬಲಿಷ್ಠವಾಗಿರುವಂತಹ KKR ತಂಡವು ತಮ್ಮ ಪ್ರಬಲ ಆಟಗಾರಿಕೆಯಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಬ್ಯಾಟ್ಸ್‌ಮನ್ ಗಳು ರನ್ಗಳ ಸುರಿಮಳೆ ಸುರಿಸಿ ಬರೋಬ್ಬರಿ 272 ರನ್ ಗಳನ್ನು ಕಲೆ ಹಾಕಿತ್ತು. ಈ ಮೂಲಕ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವಂತಹ ಎರಡನೇ ತಂಡ ಎಂಬ ದಾಖಲೆ ಸೃಷ್ಟಿ ಮಾಡಿರುವಂತಹ ಕೆಕೆಆರ್ ಇಂದಿಗೂ ತಮ್ಮ ಅಬ್ಬರವನ್ನು ನಿಲ್ಲಿಸದೆ ಈ ಬಾರಿಯ ಐಪಿಎಲ್ ನಲ್ಲಿ ಆಡಿರುವಂತಹ ಎಲ್ಲ ಪಂದ್ಯದಲ್ಲಿಯೂ ಗೆದ್ದು ಬಿಗಿದಿದೆ.

advertisement

ಕೆಕೆಆರ್ ಪರ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದಂತಹ ಫಿಲಪ್ ಸ್ಟಾಲ್, ಕೇವಲ 12 ಎಸೆತಗಳಲ್ಲಿ ಬರೋಬ್ಬರಿ 18 ರನ್ಗಳನ್ನು ಗಳಿಸಿ 4 ಬೌಂಡರಿಯನ್ನು ಬಾರಿಸಿದರು. ಅವರಿಗೆ ಸಾತ್ ನೀಡಿದ ಸುನಿಲ್ ನರೈನ್ 39 ಎಸೆತಗಳಲ್ಲಿ ಬರೋಬ್ಬರಿ 85 ರನ್ಗಳನ್ನು ಕಲೆ ಹಾಕುವ ಮೂಲಕ 217.95 ಸ್ಟ್ರೈಕ್ ರೇಟ್ ಗಳಿಸಿಕೊಂಡರು.

ದೈತ್ಯ ಆಂಡ್ರಿ ರಸೆಲ್ (Andre Russell) ಅವರನ್ನು ಔಟ್ ಮಾಡಿದ ಇಶಾಂತ್ ಶರ್ಮಾ!

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಂತಹ ಆಂಡ್ರಿ ರಿಸಲ್ (Andre Russell) 4 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸುತ್ತಾ ಕೇವಲ 19 ಬಾಲ್ಗಳಲ್ಲಿ 41 ರನ್ಗಳನ್ನು ಗಳಿಸುತ್ತಾ ಅಬ್ಬರಿಸುತ್ತಿರುವಾಗ ಹೈದ್ರಾಬಾದ್ ತಂಡದ ಬೌಲರ್ ಇಶಾಂತ್ ಶರ್ಮಾ (Ishant Sharma) ತನ್ನ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ನೇರವಾಗಿ ಸ್ಟಂಪ್ಗಳಿಗೆ ಬಾಲನ್ನು ಬೀಸಿ ಆಂಡ್ರಿ ರಸೆಲ್ರವರ ಅಬ್ಬರವನ್ನು ನಿಲ್ಲಿಸಿದ್ದಾರೆ. ಕೊನೆಯ ಓವರ್ ನಲ್ಲಿ ಇನ್ನಷ್ಟು ದುಬಾರಿಯಾಗುತ್ತಿದ್ದ ಆಂಡ್ರಿ ರೆಸಲ್ ಅವರನ್ನು ಪೆವಿಲಿಯನ್ಗೆ ಕಳಿಸಿದ ನಂತರ ಎದುರಾಳಿ ತಂಡ ಸಂತೋಷದಿಂದ ಜಿಗಿದಿದ್ದಾರೆ.

advertisement

Leave A Reply

Your email address will not be published.