Karnataka Times
Trending Stories, Viral News, Gossips & Everything in Kannada

Reliance Jio: 148 ರೂಗೆ ವಿಶೇಷ ಆಫರ್ ಕೊಟ್ಟ ಅಂಬಾನಿ! BSNL ಗೆ ನೇರ ಪೈಪೋಟಿ

advertisement

ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಾ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವಂತಹ ರಿಲಯನ್ಸ್ ಜಿಯೋ ಕಂಪನಿಯು (Reliance Jio Company) ಗ್ರಾಹಕರಿಗೆ ಅನುಕೂಲವಾಗುವ ರೀತಿ ತನ್ನ ಪೋರ್ಟ್ ಪೋಲಿಯೋದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುವುದರ ಜೊತೆಗೆ ಅತಿ ಕಡಿಮೆ ಬೆಲೆಗೆ ಅದ್ಬುತ ಎಂಟರ್ಟೈನ್ಮೆಂಟ್ (Amazing Entertainment) ನೀಡುವ ಆಪ್ಗಳ ಸಬ್ಸ್ಕ್ರಿಪ್ಷನ್ ಅನ್ನು ಒದಗಿಸುತ್ತಿದೆ. ಕೇವಲ 148 ರೂಪಾಯಿ ನೀಡಿ ಈ ಪ್ಲಾನ್ ಅನ್ನು ಖರೀದಿಸಿದರೆ ಒಂದಲ್ಲ ಎರಡಲ್ಲ 12 ಓ ಟಿ ಟಿ ಆಪ್ ಗಳ ಸಬ್ಸ್ಕ್ರಿಪ್ಷನ್ (12 OTT Apps Subscription) ಪಡೆಯಬಹುದು.

ಆಫರ್ಗಳಿಂದ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ರಿಲಯನ್ಸ್ ಜಿಯೋ:

 

Image Source: Mint

 

ಜಗತ್ತಿನಾದ್ಯಂತ ಇರುವ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವಂತಹ ರಿಲಯನ್ಸ್ ಜಿಯೋ (Reliance Jio), ಸದ್ಯ 40 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ. ರಿಲಯನ್ಸ್ ಜಿಯೋ ಕಂಪನಿಯು ಗ್ರಾಹಕರಿಗೆ ಅನುಕೂಲವಾಗುವ ರೀತಿ ವಿಶೇಷ ಪ್ಲಾನ್ ಗಳನ್ನು ಒದಗಿಸುತ್ತಿರುತ್ತಾರೆ. ಹೀಗಿರುವಾಗ ಕಂಪನಿ ಕಳೆದ ಕೆಲವು ದಿನಗಳ ಹಿಂದೆ ಪೋರ್ಟ್ ಪೋಲಿಯೋದಲ್ಲಿರುವ (Portfolio) ಪ್ಲಾನ ಗಳನ್ನು ವಿಭಿನ್ನವಾದ ವರ್ಗಗಳಲ್ಲಿ ವಿಂಗಡಿಸಿದ್ದು, ಅತ್ಯಾಕರ್ಷಕ ಎಂಟರ್ಟೈನ್ಮೆಂಟ್ ಪ್ಲಾನ್ಗಳನ್ನು ಈ ಲಿಸ್ಟಿಗೆ ಸೇರ್ಪಡಿಸಿದ್ದಾರೆ.

advertisement

12 ಓಟಿಟಿ ಆಪ್ ಗಳಿಗೆ ಉಚಿತ ಸಬ್ಸ್ಕ್ರಿಪ್ಷನ್ ಪಡೆಯಿರಿ:

 

Image Source: News24 Hindi

 

ರಿಲಯನ್ಸ್ ಜಿಯೋ (Reliance Jio) ಕಂಪನಿಯ ಗ್ರಾಹಕರಿಗೆ 148 ರೂಪಾಯಿಗಳ ಅತ್ಯಂತ ಕಡಿಮೆ ಬೆಲೆಯ ಪ್ಲಾನ್ ಅನ್ನು ನೀಡಿದ್ದು, ಈ ಪ್ಲಾನ್ನ ಅಡಿಯಲ್ಲಿ ವಿಶೇಷ ಎಂಟರ್ಟೈನ್ಮೆಂಟ್ ಅಪ್ಲಿಕೇಶನ್ಗಳ ಸಬ್ಸ್ಕ್ರಿಪ್ಷನ್ ದೊರುಕುತ್ತದೆ. ಹೌದು ಸ್ನೇಹಿತರೆ ಈ ಪ್ರಿಪೇಡ್ ಪ್ಲಾನಿನಲ್ಲಿ ಉಚಿತವಾಗಿ LIV, Zee 5, ಜಿಯೋ ಸಿನಿಮಾ ಪ್ರೀಮಿಯಂ, ಲಯನ್ ಗೇಟ್ ಪ್ಲೇ, ಡಿಸ್ಕವರಿ ಪ್ಲಸ್, ಸನ್ ನೆಕ್ಸ್ಟ್, ಕಾಂಚ್ಚ ಲಂಕಾ, ಪ್ಲಾನೆಟ್ ಮರಾಠಿ,ಚೌಪಲ್, ಡಾಕ್ಯೂಬೆ, EPIC On, Hoichoi ಹಾಗೂ ಜಿಯೋ ಸಿನಿಮಾ ಪ್ರೀಮಿಯಂ (Jio Cinema Premium) ನಂತಹ 12 ಓ ಟಿ ಟಿ ಅಪ್ಲಿಕೇಶನ್ ಗಳ ಉಚಿತ ಸಬ್ಸ್ಕ್ರಿಪ್ಷನ್ ದೊರಕಲಿದೆ.

148ರ ಪ್ಲಾನ್ ನಲ್ಲಿ ಇಂಟರ್ನೆಟ್ ಕೂಡ ಲಭ್ಯ:

12 ಓಟಿಪಿ ಅಪ್ಲಿಕೇಶನ್ಗಳ ಉಚಿತ ಸಬ್ಸ್ಕ್ರಿಪ್ಷನ್ ಅನ್ನು ಗ್ರಾಹಕರಿಗೆ ಈ 148ರ ಪ್ಲಾನ್ನಲ್ಲಿ ಒದಗಿಸುವುದರ ಜೊತೆಗೆ 12 GB ಇಂಟರ್ನೆಟ್ ಸೌಲಭ್ಯ (Internet Facility)ವನ್ನು ನೀಡುತ್ತಿದೆ. 28 ದಿನಗಳ ಕಾಲ ವ್ಯಾಲಿಡಿಟಿಯನ್ನು ಹೊಂದಿರುವ ಈ ಅತ್ಯಾಕರ್ಷಕ ಪ್ಲಾನ್ ನಲ್ಲಿ SMS ಅಥವಾ ಕಾಲಿಂಗ್ (SMS or calling) ಸೌಲಭ್ಯವನ್ನು ಜಿಯೋ ನೀಡುತ್ತಿಲ್ಲ. ನೀವೇನಾದರೂ ಅತಿ ಕಡಿಮೆ ಬೆಲೆಗೆ ಹೆಚ್ಚಿನ ಓಟಿಟಿ ಅಪ್ಲಿಕೇಶನ್ಗಳ ಸಬ್ಸ್ಕ್ರಿಪ್ಷನ್ ಪಡೆಯಲು ಯೋಚಿಸುತ್ತಿದ್ದರೆ 148 ರೂಪಾಯಿಯ ಈ ಪ್ಲಾನ್ ನಿಮ್ಮ ಅತ್ಯುತ್ತಮ ಆಯ್ಕೆಯಾಗಿರಲಿದೆ.

advertisement

Leave A Reply

Your email address will not be published.