Karnataka Times
Trending Stories, Viral News, Gossips & Everything in Kannada

Nirmala Sitharaman: SBI, ICICI, HDFC ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ!

advertisement

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಪಟ್ಟಂತೆ ಗ್ರಾಹಕರಿಗೆ ಅನುಕೂಲವಾಗುವ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದನ್ನ ಪಾಲಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಹಾಗಾಗಿ ಇದರಿಂದ ಗ್ರಾಹಕರಿಗೆ ವಿಶೇಷ ಸೌಲಭ್ಯ ಸಿಗಲಿದೆ ಎನ್ನಬಹುದು.

ಬ್ಯಾಂಕಿಂಗ್ ವ್ಯವಸ್ಥೆ ಸರಳಗೊಳಿಸಲು ನಿರ್ಧಾರ!

ಬ್ಯಾಂಕ್ನಿಂದ ಸಾಲ (Loan) ಪಡೆಯಲು ಸಾಕಷ್ಟು ಬಾರಿ ಕಷ್ಟಪಡಬೇಕಾಗುತ್ತದೆ. ಬ್ಯಾಂಕ್ ನಿಂದ ಬ್ಯಾಂಕ್ ಗೆ ಅಲೆದು ತಿರುಗಾಡಿ ಸಾಲ ಪಡೆದುಕೊಳ್ಳಬೇಕಾಗುತ್ತದೆ. ಎಷ್ಟೋ ಬಾರಿ ಅಷ್ಟು ಕಷ್ಟಪಟ್ಟರೂ ಕೂಡ ಸಾಲ ಸಿಗದೇ ಹೋಗಬಹುದು. ಇದಕ್ಕೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲವು ನಿಯಮಗಳನ್ನ ಇದುವರೆಗೆ ಸರಳಗೊಳಿಸದಿರುವುದೇ ಮುಖ್ಯ ಕಾರಣ. ಈಗ ಈ ಸಮಸ್ಯೆಯನ್ನು ಗಮನಿಸಿರುವ ಕೇಂದ್ರ ಸರ್ಕಾರ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಳಗೊಳಿಸಲು ಮುಂದಾಗಿದೆ. ಇದರಿಂದಾಗಿ ಗ್ರಾಹಕರು ಬ್ಯಾಂಕ್ ಜೊತೆಗೆ ಇನ್ನಷ್ಟು ಸಂಪರ್ಕ ಸಾಧಿಸಲು ಸುಲಭವಾಗುತ್ತದೆ.

advertisement

ಗ್ರಾಹಕ ಸ್ನೇಹಿಯಾಗಲಿದೆ ಬ್ಯಾಂಕಿಂಗ್ ವ್ಯವಸ್ಥೆ!

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಹೊರಡಿಸಿರುವ ಆದೇಶದ ಪ್ರಕಾರ ಇನ್ನು ಮುಂದೆ ಬ್ಯಾಂಕಿಂಗ್ ವ್ಯವಸ್ಥೆ ಗ್ರಾಹಕ ಸ್ನೇಹಿ ಆಗಲಿದೆ. ಬ್ಯಾಂಕುಗಳು ಗ್ರಾಹಕರಿಗೆ ನೀಡಬೇಕಾದ ಸೌಲಭ್ಯದ ಬಗ್ಗೆ ಗಮನವಹಿಸಬೇಕು ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ. ಇದರ ಜೊತೆಗೆ ಸಾಲ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಬೇಕು ಹಾಗೂ ಸಾಲ ಪಡೆದುಕೊಳ್ಳಲು ಇರುವ ಮಾನದಂಡ ಸರಿಯಾಗಬೇಕು ಎಂದು ಸಚಿವೆ ತಿಳಿಸಿದ್ದಾರೆ.

ಸದ್ಯ ಐಸಿಐಸಿಐ (ICICI), ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಎಚ್ ಡಿ ಎಫ್ ಸಿ (HDFC) ಎಂತಹ ದೇಶದ ದೊಡ್ಡ ಬ್ಯಾಂಕ್ಗಳಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತರಲು ಹಣಕಾಸು ಸಚಿವೆ ಬ್ಯಾಂಕ್ಗಳಿಗೆ ತಿಳಿಸಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆ ಇನ್ನೂ ಹೆಚ್ಚು ಗ್ರಾಹಕ ಸ್ನೇಹಿಯಾಗುವ ಅಗತ್ಯ ಇದೆ ಹಾಗಾಗಿ ಬ್ಯಾಂಕ್ ಗ್ರಾಹಕರ ಬಗ್ಗೆ ಕಾಳಜಿ ವಹಿಸಬೇಕು ಸಾಲ ನೀಡುವ ಪ್ರಕ್ರಿಯೆ ಸುಲಭಗೊಳಿಸಬೇಕು ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಜನರಿಗೆ ಬ್ಯಾಂಕಿಂಗ್ ಕ್ಷೇತ್ರ ಹತ್ತಿರವಾದರೆ ಗ್ರಾಹಕರು ಬ್ಯಾಂಕ್ ಅನ್ನು ಹೆಚ್ಚು ನಂಬುತ್ತಾರೆ. ಮತ್ತು ಬ್ಯಾಂಕ್ ನೊಂದಿಗೆ ಉತ್ತಮ ಸಂಪರ್ಕ ಹೊಂದಿರುತ್ತಾರೆ ಎಂದು ಸಚಿವೆ ನುಡಿದರು.

advertisement

Leave A Reply

Your email address will not be published.