Karnataka Times
Trending Stories, Viral News, Gossips & Everything in Kannada

SBI FD Rates: ಎಫ್ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ ಬಿ ಐ ಬ್ಯಾಂಕ್!

advertisement

ಇಂದು ಹೆಚ್ಚಿನ ಜನರು ಸೇವಿಂಗ್ ಮಾಡಲು ಆಸಕ್ತಿ ವಹಿಸುತ್ತಾರೆ. ಅದರಲ್ಲೂ ಹಣ ಎಫ್ ಡಿ (FD) ಇಡಲು ಮುಂದಾದಾಗ ಯಾವ ಬ್ಯಾಂಕ್ ಸೇಫ್ ಅನ್ನೋದನ್ನು ಸಹ ಖಚಿತ ಪಡಿಸಿಕೊಳ್ಳುತ್ತಾರೆ. ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಸ್ಟೇಟ್ ಬ್ಯಾಂಕ್ ಕೂಡ ಒಂದಾಗಿದ್ದು ವಿಶೇಷ ಸವಲತ್ತುಗಳನ್ನು ನೀಡುತ್ತ ಖಾತೆದಾರರನ್ನು ಸಹ ಹೆಚ್ಚು ಮಾಡುತ್ತಿದೆ. ಅದೇ ರೀತಿ ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಸೇವೆಯನ್ನು ನೀಡುತ್ತ ಸಹ ಬಂದಿದೆ. ಡಿಜಿಟಲ್ ಪಾವತಿಗೂ ಹೆಚ್ಚಿನ ಬೆಂಬಲ ನೀಡುವ ಸ್ಟೇಟ್ ಬ್ಯಾಂಕ್ ಸುರಕ್ಷಿತ ಸಾಲ ಸೌಲಭ್ಯ ವನ್ನು ಸಹ ನೀಡುತ್ತಿದೆ.

ಬಡ್ಡಿ ದರ ಹೆಚ್ಚಿಸಿದೆ:

 

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಇದೀಗ ಸ್ಥಿರ ಠೇವಣಿಗಳ ಬಡ್ಡಿದರಗಳನ್ನು ಹೆಚ್ಚು ಮಾಡಿದ್ದು ಸ್ಟೇಟ್ ಬ್ಯಾಂಕ್ ನ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದಂತಾಗಿದೆ. ಈ ಎಸ್‌ಬಿಐ ಎಫ್‌ಡಿ ದರಗಳನ್ನು (SBI FD Rates) ಡಿಸೆಂಬರ್ 27 ರಿಂದ ಜಾರಿಗೆ ತರಲಾಗುತ್ತಿತ್ತು ಹೆಚ್ಚಿನ ಲಾಭ ನಿಮಗೆ ಸಿಗಲಿದೆ.

ಎಷ್ಟು ಬಡ್ಡಿ ಸಿಗಲಿದೆ?

advertisement

ಐದು ವರ್ಷದಿಂದ ಹತ್ತು ವರ್ಷಗಳವರೆಗೆ ಹೊರತುಪಡಿಸಿ ಎಲ್ಲಾ ಅವಧಿಗಳ ಮೇಲಿನ ದರಗಳನ್ನು ಹೆಚ್ಚು ಮಾಡಿದ್ದು SBI ದರಗಳ ಮೊತ್ತವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚು ಮಾಡಿದೆ.

ಹಿರಿಯ ನಾಗರಿಕರಿಗೆ SBI FD ದರಗಳು ಎಷ್ಟು?

 

 

ಹಿರಿಯ ನಾಗರಿಕರಿಗೂ SBI ನಲ್ಲಿ ಉತ್ತಮ ಅವಕಾಶ ಗಳಿದ್ದು ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚುವರಿಯಾಗಿ ಪಡೆಯಲು ಅವಕಾಶ ಇದೆ. ಇದೀಗ ಎಸ್ ಬಿ ಐ 180 ದಿನಗಳಿಂದ 210 ದಿನಗಳ ಅವಧಿಯ ಠೇವಣಿಗಳ ಮೇಲೆ, SBI ದರಗಳನ್ನು 50 bps ಹೆಚ್ಚು ಮಾಡಿದ್ದು ಈ FD ದರಗಳು 5.75% ಬಡ್ಡಿದರವನ್ನು ಪಡೆದು ಗ್ರಾಹಕರಿಗೆ ಲಾಭ ನೀಡುತ್ತದೆ.

ಹಿರಿಯ ನಾಗರಿಕರಿಗೆ 7 ದಿನಗಳಿಂದ 45 ದಿನಗಳವರೆಗೆ 4%,ಅದೇ ರೀತಿ 46 ದಿನಗಳಿಂದ 179 ದಿನಗಳು 5.25%, 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 6.5%, 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ 7.30% ನೀಡಲಾಗುತ್ತಿದ್ದು ,ಹಿರಿಯ ನಾಗರಿಕರ ಎಫ್​ಡಿ ಮೇಲಿನ ಬಡ್ಡಿ ದರವನ್ನು ಎಸ್​​ಬಿಐ 50 ಮೂಲಾಂಶದಷ್ಟು ಹೆಚ್ಚಳ ಮಾಡಿದೆ.

ಈ ಡಿಸೆಂಬರ್ 2023 ರಲ್ಲಿ ಅವಧಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದ ಐದನೇ ಪ್ರತಿಷ್ಠಿತ ಬ್ಯಾಂಕ್ ಎಸ್‌ಬಿಐ ಆಗಿದ್ದು ಗ್ರಾಹಕರಿಗೆ ಖುಷಿ ಸುದ್ದಿ ಯಾಗಿದೆ.

advertisement

Leave A Reply

Your email address will not be published.