Karnataka Times
Trending Stories, Viral News, Gossips & Everything in Kannada

Farmers Loan: ಯಾವುದೇ ಬ್ಯಾಂಕಿನಲ್ಲಿ ಎಷ್ಟೇ ಸಾಲ ಬಾಕಿ ಇರಿಸಿಕೊಂಡ ರೈತರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ!

advertisement

Loan Waiver In Karnataka: ಲೋಕಸಭಾ ಚುನಾವಣೆ ಭಾರತ ದೇಶದಲ್ಲಿ ಈಗಾಗಲೇ ಅನೌನ್ಸ್ ಆಗಿದ್ದು ಪ್ರತಿಯೊಬ್ಬರು ಕೂಡ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ( Lok Sabha elections 2024)  ಯಾರು ಗೆದ್ದು ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದುಕೊಳ್ಳುತ್ತಾರೆ ಎಂಬುದಾಗಿ ಕಾತರರಾಗಿ ಕಾಯುತ್ತಿದ್ದಾರೆ. ಇನ್ನು ಈ ಬಾರಿಯ ಲೋಕಸಭಾ ಚುನಾವಣೆ ಭಾರತ ದೇಶದಲ್ಲಿ ಬೇರೆ ಬೇರೆ ಹಂತಗಳಲ್ಲಿ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ನರೇಂದ್ರ ಮೋದಿ ಅವರ ಬಿಜೆಪಿ ನೇತೃತ್ವದಲ್ಲಿ NDA ಮಿತ್ರ ಪಕ್ಷಗಳು ರಾಹುಲ್ ಗಾಂಧಿ ಅವರ ಕಾಂಗ್ರೆಸ್ ನೇತೃತ್ವದ ಪಕ್ಷಗಳ ಜೊತೆಗೆ ಈ ಬಾರಿಯ ಚುನಾವಣೆಯನ್ನು ಸೆಣೆಸಾಡಲು ಸಿದ್ದರಾಗಿದ್ದಾರೆ. ಈಗಾಗಲೇ ಎರಡು ಕಡೆಯಿಂದ ಅಭ್ಯರ್ಥಿಗಳ ಘೋಷಣೆ ಕೂಡ ಆಗಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

ಮಂಡ್ಯದಲ್ಲಿ ಭರ್ಜರಿ ಗ್ಯಾರಂಟಿ ಘೋಷಣೆ ಮಾಡಿದ ರಾಹುಲ್ ಗಾಂಧಿ!

ಈಗಾಗಲೇ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಯಾವ ರೀತಿಯಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ಗೆದ್ದು ಬಂದಿದೆ ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಇನ್ನು ಈಗ ಕೇಂದ್ರ ಸರ್ಕಾರದ ಗದ್ದುಗೆಯನ್ನು ಪಡೆದುಕೊಳ್ಳಲು ಲೋಕಸಭಾ ಚುನಾವಣೆಯ ಮುಂಚಿತವಾಗಿ ರಾಹುಲ್ ಗಾಂಧಿ ರವರು ಸಾಕಷ್ಟು ಯೋಜನೆ ಹಾಗೂ ಗ್ಯಾರಂಟಿಗಳನ್ನು ತಮ್ಮ ಮ್ಯಾನಿಫೆಸ್ಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಅವುಗಳಲ್ಲಿ ಈಗ ಮಂಡ್ಯ(Mandya)  ಲೋಕಸಭಾ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಹೇಳಿರುವಂತಹ ಹೊಸ ಗ್ಯಾರಂಟಿ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

 Rahul Gandhi Promises Loan Waiver In Karnataka
Image Source: ThePrint

advertisement

ಈ ಬಾರಿ ಪ್ರಮುಖವಾಗಿ ರಾಹುಲ್ ಗಾಂಧಿ ಅವರು ರೈತರ ಗಮನವನ್ನು ಸೆಳೆಯುವುದಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿ ತರುವ ನಿಟ್ಟಿನಲ್ಲಿ ಪ್ಲಾನಿಂಗ್ ನಡೆಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದ್ರೆ ಈ ಬಾರಿ ಮಂಡ್ಯದಲ್ಲಿ ಕೂಡ ಅವರು ಸಾಲ ಮನ್ನಾ ಯೋಜನೆಯ ಬಗ್ಗೆ ದೊಡ್ಡ ಘೋಷಣೆಯನ್ನು ಮಾಡಿದ್ದು ಇದು ಎಲ್ಲಾ ಕಡೆ ಹರಿದಾಡುವುದಕ್ಕೆ ಹೆಚ್ಚು ಸಮಯವನ್ನು ಕೂಡ ತೆಗೆದುಕೊಂಡಿಲ್ಲ ಅಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರಿಯಾದ ರೀತಿಯಲ್ಲಿ ಮಳೆ ಬೆಳೆಯಾಗುತ್ತಿಲ್ಲ. ಇನ್ನು ಮಳೆ ಬೆಳೆಯಾಗುತ್ತದೆ ಎನ್ನುವುದಾಗಿ ನಂಬಿಕೊಂಡು ರೈತರು ಬ್ಯಾಂಕುಗಳಲ್ಲಿ ಲೋನ್ ಪಡೆದುಕೊಂಡಿರುತ್ತಾರೆ ಸರಿಯಾದ ಸಮಯಕ್ಕೆ ಕಟ್ಟೋದಕ್ಕೆ ಕೂಡ ಆಗೋದಿಲ್ಲ.

ಇದನ್ನು ಮನಗೊಂಡಿರುವಂತಹ ರಾಹುಲ್ ಗಾಂಧಿ(Rahul Gandhi)ರವರು ರೈತರು ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿದರೂ ಕೂಡ ಅದನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎನ್ನುವಂತಹ ಘೋಷಣೆಯನ್ನು ಮಾಡುವ ಮೂಲಕ ಚುನಾವಣೆಗೂ ಮುಂಚೆ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿಸಿದ್ದಾರೆ. ಪ್ರತಿಯೊಬ್ಬರು ಕೂಡ ಅದರಲ್ಲೂ ವಿಶೇಷವಾಗಿ ರೈತ ವರ್ಗದ ಜನರು ಕಾಂಗ್ರೆಸ್ನ ಈ ಗ್ಯಾರೆಂಟಿಯಿಂದಾಗಿ ಆಶ್ಚರ್ಯ ಚಕಿತರಾಗಿದ್ದಾರೆ ಹಾಗೂ ಸಂತೋಷವಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

 Rahul Gandhi Promises Loan Waiver In Karnataka
Image Source: ThePrint

advertisement

Leave A Reply

Your email address will not be published.