Karnataka Times
Trending Stories, Viral News, Gossips & Everything in Kannada

 Lok Sabha elections 2024: ಗುತ್ತಿಗೆ ಆಧಾರದಲ್ಲಿ ಕೆಲಸಕ್ಕಿದ್ದ ಎಲ್ಲರಿಗು ಭರ್ಜರಿ ಗುಡ್ ನ್ಯೂಸ್! ಸರ್ಕಾರದ ಹೊಸ ಹೇಳಿಕೆ

advertisement

Lok Sabha elections 2024: ಈ ಬಾರಿಯ ಲೋಕಸಭಾ ಚುನಾವಣೆ ಸಾಕಷ್ಟು ರೋಚಕತೆಯಿಂದ ಕೂಡಿದೆ ಎಂದು ಹೇಳಬಹುದು. ಯಾಕೆಂದ್ರೆ ಎರಡು ಕಡೆಗಳಲ್ಲಿ ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ಇಬ್ರು ಕೂಡ ತಮ್ಮ ಪ್ರಣಾಳಿಕೆಯಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ಹಾಗೂ ಗ್ಯಾರಂಟಿಗಳನ್ನು ನೀಡುತ್ತೇವೆ ಎನ್ನುವುದಾಗಿ ಹೇಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕಳೆದ ಸಾಕಷ್ಟು ವರ್ಷಗಳಿಂದ ಪ್ರಧಾನಮಂತ್ರಿ ಆಗಬೇಕು ಎನ್ನುವಂತಹ ಉಮೇದುಗಾರಿಕೆಯಲ್ಲಿ ಇರುವಂತಹ ರಾಹುಲ್ ಗಾಂಧಿ ಅವರ ಈ ಬಾರಿಯ ಚುನಾವಣೆ ಪ್ರಚಾರದ ಬಗ್ಗೆ ಪ್ರತಿಯೊಂದು ಕಡೆಗಳಲ್ಲಿ ಚರ್ಚೆಗಳು ನಡೆಯುತ್ತಿವೆ.

ಕೆಲವೊಮ್ಮೆ ತಮ್ಮ ಮಾತುಗಳ ಮೂಲಕ ಠೀಕೆಗೆ ಒಳಗಾಗುವಂತಹ ರಾಹುಲ್ ಗಾಂಧಿಯವರು(Rahul Gandhi)  ಈ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ವಿಭಿನ್ನವಾದ ಅಪ್ರೋಚ್ ಜೊತೆಗೆ ಲೋಕಸಭಾ ಚುನಾವಣೆಯನ್ನು ಎದುರಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ ನಡೆದಿರುವಂತಹ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ(Congress Guarantees)  ಯೋಜನೆಗಳನ್ನು ಜನರಿಗೆ ನೀಡುತ್ತೇವೆ ಎನ್ನುವಂತಹ ಭರವಸೆಯ ಜೊತೆಗೆ ಆಶ್ಚರ್ಯಕರ ರೀತಿಯಲ್ಲಿ ಗೆದ್ದು ನಿಂತಿರುವುದು ನಿಮ್ಮ ಕಣ್ಣ ಮುಂದೆ ಇದೆ. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿಯವರು ಈ ಬಾರಿಯ ಲೋಕಸಭಾ ಚುನಾವಣೆಗೂ ಕೂಡ ಇದೇ ಮಂತ್ರವನ್ನು ಅನುಸರಿಸುವ ರೀತಿಯಲ್ಲಿ ಕಂಡು ಬರುತ್ತಿದೆ.

Congress MP Rahul Gandhi addressed a public meeting in Mandya
Image Source: Hindustan Times

advertisement

ಇನ್ಮುಂದೆ ಗುತ್ತಿಗೆ ಕೆಲಸ ಇಲ್ಲ ಪರ್ಮನೆಂಟ್ ಕೆಲಸ

ಸಾಕಷ್ಟು ಕಡೆಗಳಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು ಪದವಿಯನ್ನು ಪಡೆದುಕೊಂಡಿರುವಂತಹ ಯುವಜನತೆ ಕೂಡ ಕೆಲವೊಂದು ಕಡೆಗಳಲ್ಲಿ ಇಂತಿಷ್ಟು ದಿನಗಳ ಅಥವಾ ತಿಂಗಳು ಅಥವಾ ವರ್ಷಗಳ ಕಾಲ ಮಾತ್ರ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡುತ್ತಿದ್ದಾರೆ. ಅಂದರೆ ಆ ಕಾಂಟ್ರಾಕ್ಟ್ ಇರುವವರೆಗೂ ಮಾತ್ರ ಅವರಿಗೆ ಕೆಲಸದ ಭರವಸೆ ಇರುತ್ತದೆ ಎಂಬುದನ್ನು ಈ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.

ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಅವರು ಇತ್ತೀಚಿಗಷ್ಟೇ ಪ್ರಚಾರ ಮಾಡುವ ಸಂದರ್ಭದಲ್ಲಿ ಇನ್ಮುಂದೆ ಗುತ್ತಿಗೆ ಕೆಲಸ ಇರೋದಿಲ್ಲ ಅವರಿಗೆ ಪರ್ಮನೆಂಟ್ ಕೆಲಸವನ್ನು ನೀಡುತ್ತೇವೆ ಅನ್ನೋದಾಗಿ ಪ್ರಣಾಳಿಕೆಯಲ್ಲಿ ಹೇಳುವ ಮೂಲಕ ಯುವಜನತೆಯಲ್ಲಿ ಸೆನ್ಸೇಶನ್ ಸೃಷ್ಟಿ ಮಾಡೋದಕ್ಕೆ ಕಾರಣವಾಗಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಹೇಳಿಕೆಗಳು ಹಾಗೂ ಯೋಜನೆಗಳು ಬಾಯಿ ಮಾತಿನಲ್ಲಿ ಬರುತ್ತವೆ ಆದರೆ ಅವುಗಳು ನಿಜಕ್ಕೂ ಕಾರ್ಯರೂಪಕ್ಕೆ ಬರ್ತಾ ಅನ್ನೋದನ್ನ ಚುನಾವಣೆಯ ನಂತರವಷ್ಟೇ ನಾವು ಕಾದು ನೋಡಬೇಕಾಗಿದೆ. ಆದರೆ ಸದ್ಯಕ್ಕಂತೂ ಭಾರತದಲ್ಲಿ ಯುವ ಜನತೆಗೆ ಕೆಲಸದ ಅವಶ್ಯಕತೆ ಸಾಕಷ್ಟು ಇದೆ ಯಾಕೆಂದರೆ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.

Congress MP Rahul Gandhi addressed a public meeting in Mandya
Image Source: Hindustan Times

advertisement

Leave A Reply

Your email address will not be published.