Karnataka Times
Trending Stories, Viral News, Gossips & Everything in Kannada

Loan: 5 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ! ಕೂಡಲೇ ಈ ಕೆಲಸ ಮಾಡಿ

advertisement

ಸಾಮಾನ್ಯವಾಗಿ ಕೃಷಿ ಸಾಲ (Agriculture Loan) ಪಡೆಯಬೇಕಾದರೆ ಅದರಲ್ಲಿಯೂ ಪ್ರಮುಖವಾಗಿ ಕೃಷಿಯ ಮೇಲೆ ಹೂಡಿಕೆ ಮಾಡುವಂತಹ ಸಂದರ್ಭದಲ್ಲಿ ಮತ್ತು ಹೊಸದಾಗಿ ಕೃಷಿಯನ್ನು ಪ್ರಾರಂಭ ಮಾಡುವ ಸಂದರ್ಭದಲ್ಲಿ ನಮಗೆ ಬೇಕಾದಂತಹ ಹಣದ ಮೊತ್ತವು ನಮ್ಮ ಬಳಿ ಇರದೇ ಇದ್ದಾಗ ಅಂತಹ ಸಮಯದಲ್ಲಿ ಬೇರೆಯವರಿಂದ ಸಾಲ ಪಡೆಯುವ ಬದಲು ನಾವು ಬ್ಯಾಂಕ್ ನ ಮೂಲಕ ಮತ್ತು ಸರ್ಕಾರಿ ಯೋಜನೆಗಳ ಮೂಲಕ ಕೃಷಿ ಸಾಲವನ್ನು ಪಡೆಯಬಹುದು.

ಹೊಸದಾಗಿ ಕೃಷಿ ಸಾಲ (Loan) ಪಡೆಯಬೇಕಾದರೆ ಯಾವೆಲ್ಲಾ ಡಾಕ್ಯುಮೆಂಟ್ಸ್ ಗಳ ಅಗತ್ಯ ಇದೆ:

ಇನ್ನು ಹೊಸದಾಗಿ ಕೃಷಿಯ ಮೇಲೆ ಸಾಲ ಪಡೆಯಬೇಕಾದರೆ, ಹಲವಾರು ದಾಖಲೆಗಳ ಅಗತ್ಯ ಇರುತ್ತದೆ. ಇನ್ನು ಅಂತಹ ದಾಖಲೆಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲಿಗೆ ಕೃಷಿ ಸಾಲ ಪಡೆಯುವ ಯಾವುದೇ ವ್ಯಕ್ತಿಯ ಜಮೀನಿನ ಆರ್ ಟಿ ಸಿ (RTC)ಅಥವಾ ಜಮೀನಿನ ಪಹಣಿ (Pahani) ಯನ್ನು ಹೊಂದಿರಬೇಕಾಗುತ್ತದೆ. ಮತ್ತು ಪ್ರಸ್ತುತ ವರ್ಷದ ಜಮೀನಿನ ಕಂದಾಯದ ರಶೀದಿ ಇರುವುದು ಕಡ್ಡಾಯ.

advertisement

ಇನ್ನು ಈಗಾಗಲೇ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದೀರಾ ಮತ್ತು ಯಾವೆಲ್ಲ ಸಾಲಗಳು ಮತ್ತು ಬ್ಯಾಂಕ್ ಲೋನ್ ಗಳು ಜಮೀನಿನ ಮೇಲೆ ಇದೆ ಎಂಬುದನ್ನು ತಿಳಿದುಕೊಳ್ಳಲು ಜಮೀನಿನ ಕೊಟೇಶನ್ (MR) ನೀಡುವುದು ಕೂಡ ಕಡ್ಡಾಯ. ಜಮೀನಿನ ಸರ್ವೆ ನಂಬರ್ ಪಡೆಯುವ ಉದ್ದೇಶ ಅಂದರೆ ಜಮೀನಿನ ಅಕ್ಕಪಕ್ಕ ರಸ್ತೆ ಅಥವಾ ಬೇರೆಯವರ ಜಮೀನು ಮತ್ತು ನಿಮ್ಮ ಜಮೀನಿನ ಪಕ್ಕ ಇರುವಂತಹ ಜಮೀನು ಯಾರದು? ಇವೆ ಮೊದಲಾದಂತಹ ದಾಖಲೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಈ ಜಮೀನಿನ ಸರ್ವೆ ನಂಬರನ್ನು ತೆಗೆದುಕೊಳ್ಳಲಾಗುತ್ತದೆ.

Image Source: NewsClick

ಈ ಎಲ್ಲಾ ದಾಖಲಾತಿಗಳ ಜೊತೆಗೆ ಸಾಲ ಪಡೆಯುತ್ತಿರುವಂತವರ ಜಮೀನಿನ ಕುರಿತಾದಂತಹ ವಂಶವೃಕ್ಷ  ಅಂದರೆ, ಯಾರಿಂದ ನಮಗೆ ಜಮೀನು ದೊರಕಿದೆ ಮತ್ತು ಇದು ನಮ್ಮ ಪೂರ್ವಜರ ಆಸ್ತಿಯೇ ಎಂಬುದನ್ನು ಕುರಿತು ತಿಳಿದುಕೊಳ್ಳಲು ವಂಶವೃಕ್ಷದ ಮಾಹಿತಿಯನ್ನು ನೀಡುವುದು ಕಡ್ಡಾಯ. ಈ ಎಲ್ಲ ದಾಖಲಾತಿಗಳನ್ನು ಕೊಡುವುದರ ಜೊತೆಗೆ ಇದನ್ನು ನಾವು ಹತ್ತಿರದ ಬ್ಯಾಂಕ್ಗಳಿಗೆ ತೆಗೆದುಕೊಂಡು ಹೋಗಿ ಕೊಟ್ಟ ನಂತರ ಅವರು ಅದನ್ನು ವೆರಿಫಿಕೇಶನ್ ಮಾಡುತ್ತಾರೆ.

ವೆರಿಫಿಕೇಶನ್ ಮಾಡಲು ಮತ್ತು ಅದಕ್ಕೆ ಸಂಬಂಧಪಟ್ಟಂತಹ ದಾಖಲಾತಿಗಳು ಸರಿಯಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ತಿಳಿದುಕೊಂಡು ಅಗ್ರಿಮೆಂಟ್ ಮಾಡಲು ಬ್ಯಾಂಕ್ ನಲ್ಲಿ ಅವರದ್ದೇ ಆದ ಪ್ರೊಸೀಜರ್ ಇರುತ್ತದೆ. ಅದರ ಜೊತೆಗೆ ಬ್ಯಾಂಕ್ ಸಿಬ್ಬಂದಿಗಳು ಲಾಯರ್ ನನ್ನು ಭೇಟಿ ಮಾಡಿ ಈ ಎಲ್ಲ ದಾಖಲಾತಿಗಳ ಕುರಿತು ವೆರಿಫಿಕೇಶನ್ ಜೊತೆಗೆ ಅಗ್ರಿಮೆಂಟ್ ಮಾಡಿಸುತ್ತಾರೆ. ಇದಾದ ನಂತರ ಹೊಸದಾಗಿ ಸಾಲ ಪಡೆಯಬೇಕೆಂದು ಇರುವವರು ಬ್ಯಾಂಕ್ ನ ಮೂಲಕ ಕೃಷಿ ಸಾಲವನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.