Karnataka Times
Trending Stories, Viral News, Gossips & Everything in Kannada

RBI: ಈ ಬ್ಯಾಂಕಿನಲ್ಲಿ ಎಷ್ಟೇ ಹಣ ಇಟ್ಟಿದ್ದರೂ ತಗೆಯುವಂತಿಲ್ಲ! ಬೆಳ್ಳಂಬೆಳಿಗ್ಗೆ ರಿಸರ್ವ್ ಬ್ಯಾಂಕ್ ಘೋಷಣೆ, ನಿರ್ಬಂಧ ಹೇರಿಕೆ

advertisement

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಮಗೆಲ್ಲರಿಗೂ ತಿಳಿದಿರಬಹುದು ಭಾರತದ ಪ್ರತಿಯೊಂದು ಆರ್ಥಿಕ ಚಟುವಟಿಕೆ ಹಾಗೂ ನಿಯಮಗಳನ್ನು ರೂಪಿಸುವ ಹಾಗೂ ನಿಯಂತ್ರಣ ಮಾಡುವಂತಹ ಕೇಂದ್ರ ಸಂಸ್ಥೆ ಆಗಿದೆ. ಇನ್ನು ಯಾವುದೇ ಬ್ಯಾಂಕ್ ಅಥವಾ ಫೈನಾನ್ಸಿಯಲ್ ಕಂಪನಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೆ ಲಿಂಕ್ ಆಗಿದ್ದಲ್ಲಿ ಸರಿಯಾದ ರೀತಿಯಲ್ಲಿ ನಿಯಮವನ್ನು ಪಾಲಿಸದೆ ಹೋದಲ್ಲಿ ಆ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ನಿರ್ಬಂಧವನ್ನು ಹೇರುವ ಅಥವಾ ಮುಚ್ಚುವ ಕೆಲಸವನ್ನು ಮಾಡುತ್ತದೆ. ಅದೇ ರೀತಿಯಲ್ಲಿ ಈಗ ಒಂದು ಬ್ಯಾಂಕಿನ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧವನ್ನು ಹೇಳಿದ್ದು, ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಈ ಬ್ಯಾಂಕಿನ ಮೇಲೆ ನಿರ್ಬಂಧವನ್ನು ಹೇಳಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ!

ಮಹಾರಾಷ್ಟ್ರದಲ್ಲಿ ಇರುವಂತಹ Konark urban cooperative Bank ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧವನ್ನು ಹೇಳುವಂತಹ ಕೆಲಸವನ್ನು ಮಾಡಿದೆ. ಬ್ಯಾಂಕಿನ ಕಳಪೆ ಆರ್ಥಿಕ ಸ್ಥಿತಿಯನ್ನು ಗಮನಿಸಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕ್ನಿಂದ ಹಣವನ್ನು ಪಡೆದುಕೊಳ್ಳುವಂತಹ ಸೌಲಭ್ಯವನ್ನು ಸ್ಥಗಿತಗೊಳಿಸಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಸಂದರ್ಭದಲ್ಲಿ ಈ ಬ್ಯಾಂಕಿನ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಿರುವಂತಹ ಗ್ರಾಹಕರ ಪರಿಸ್ಥಿತಿ ಏನು ಎಂಬುದಾಗಿ ನೀವು ಕೇಳಬಹುದು.

advertisement

DICGC ಪ್ರಕಾರ ಹೆಚ್ಚೆಂದರೆ ಈ ಬ್ಯಾಂಕಿನಲ್ಲಿ ಹೂಡಿಕೆ ಮಾಡಿರುವಂತಹ 5 ಲಕ್ಷಗಳ ವರೆಗೆ ಹಣವನ್ನು ಮರುಕಳಿಸಿ ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ನೀಡಲಾಗುತ್ತದೆ. ಕೋನಾರ್ಕ್ ಅರ್ಬನ್ ಕೋವಾಪರೇಟಿವ್ ಬ್ಯಾಂಕ್ ನಲ್ಲಿ ಕಾನೂನು ನಿಯಮ 1949ರ ಆಕ್ಟ್ 35a ಪ್ರಕಾರ ಏಪ್ರಿಲ್ 23 ರಿಂದಲೇ ಈ ನಿರ್ಬಂಧವನ್ನು ಜಾರಿಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಈ ಬ್ಯಾಂಕಿನಲ್ಲಿ ಯಾವುದೇ ಹೊಸ ಲೋನ್ ಅನ್ನು ಮಂಜೂರು ಮಾಡುವುದು ಅಥವಾ ನವೀಕರಣ ಮಾಡುವಂತಹ ಕೆಲಸವನ್ನು ಮಾಡುವ ಹಾಗಿರುವುದಿಲ್ಲ. ಯಾವುದೇ ರೀತಿಯ ಲೇವಾದೇವಿಗಳನ್ನು ಹಾಗೂ ಹೂಡಿಕೆಗಳನ್ನು ಕೂಡ ಈ ಬ್ಯಾಂಕಿನಲ್ಲಿ ಮಾಡುವ ಹಾಗಿರುವುದಿಲ್ಲ. ನಿಮ್ಮ ಸಂಪತ್ತಿನ ವಿಲೇವಾರಿಯನ್ನು ಕೂಡ ಇಲ್ಲಿ ಮಾಡುವ ಹಾಗಿಲ್ಲ. ಬ್ಯಾಂಕಿನಲ್ಲಿರುವಂತಹ ಸೇವಿಂಗ್ ಕರೆಂಟ್ ಹಾಗೂ ಯಾವುದೇ ರೀತಿಯ ಅಕೌಂಟ್ ಗಳಲ್ಲಿ ಇರುವಂತಹ ಹಣವನ್ನು ತೆಗೆದುಕೊಳ್ಳುವ ಹಾಗೆ ಇಲ್ಲ ಎಂಬುದಾಗಿ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಇದರ ಅರ್ಥ ಬ್ಯಾಂಕಿನ ಲೈಸೆನ್ಸ್ ಅನ್ನು ರದ್ದುಗೊಳಿಸುವುದು ಅಲ್ಲ ಬದಲಾಗಿ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಸರಿಯಾಗುವವರೆಗೂ ಕೂಡ ಈ ರೀತಿಯ ಕಟ್ಟುನಿಟ್ಟಿನ ಕ್ರಮವನ್ನು ಕೈ ತೆಗೆದುಕೊಳ್ಳಬೇಕಾಗಿರುತ್ತದೆ ಎಂಬುದಾಗಿ ಹೇಳಿಕೊಂಡಿದೆ.

advertisement

Leave A Reply

Your email address will not be published.