Karnataka Times
Trending Stories, Viral News, Gossips & Everything in Kannada

ರೈತರಿಗೆ ಸಿಹಿಸುದ್ದಿ ಕೂಡಲೇ ಈ ದಾಖಲೆ ಕೊಟ್ಟು ಆರ್ಥಿಕ ಸಹಾಯ ಪಡೆಯಿರಿ! ಇಲ್ಲಿದೆ ಡೈರೆಕ್ಟ್ ಲಿಂಕ್

advertisement

ರೈತರು ಈ ದೇಶದ ಮುಖ್ಯ ಭಾಗವಾಗಿದ್ದು ರೈತರ ಅಭಿವೃದ್ಧಿ ಸಹ ಬಹಳ ಮುಖ್ಯವಾಗುತ್ತದೆ.ಸರಕಾರ ರೈತರ ಅಭಿವೃದ್ಧಿ ಗಾಗಿ ಹಲವು ಯೋಜನೆಗಳನ್ನು ರೂಪಿಸುವ ಮೂಲಕ ರೈತರನ್ನು ಬೆಂಬಲಿಸುತ್ತಲೆ ಬಂದಿದೆ.ಈ ಭಾರಿ ಮಳೆ ಇಲ್ಲದೆ ಬೆಳೆ ಹಾನಿ ಸಂಭವಿಸಿದ ಹಿನ್ನಲೆ ಯಲ್ಲಿ ಈಗಾಗಲೇ ಸರಕಾರ ಬರ ಪರಿಹಾರ ಮೊತ್ತ (Drought Relief Amount) ವನ್ನು ನಿಗದಿ ಪಡಿಸಿದೆ.‌

ಹಾಗಾಗಿ ಕೃಷಿಯೇತರ ಚಟುವಟಿಕೆ ಯಲ್ಲಿ ರೈತರಿಗಾಗಿ ಹಲವು ಯೋಜನೆ ರೂಪಿಸಿದ್ದರೂ ರೈತರಿಗೆ ಕೆಲವೊಂದು ಯೋಜನೆಯ ಬಗ್ಗೆ ಅರಿವು ಇರುವುದಿಲ್ಲ. ಇದರಿಂದಾಗಿಯೇ ಕೆಲವು ರೈತರು ಸರಕಾರ ನೀಡುವ ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ‌. ಹಾಗಾಗಿ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಈ ಯೋಜನೆಯ ಬಗ್ಗೆ ನೀವು ತಿಳಿಯಲೇ ಬೇಕು.

ಕೃಷಿ ವಿಕಾಸ್ ಯೋಜನೆ?

 

Image Source: India Map

 

ಕೃಷಿ ವಿಕಾಸ್ ಯೋಜನೆಯ (Krishi Vikas Yojana) ಮೂಲಕ ವಿವಿಧ ಕೃಷಿ ಚಟುವಟಿಕೆಗಳನ್ನು ಮಾಡಲು ರೈತರಿಗೆ ಆರ್ಥಿಕ ಸಹಾಯಧನವನ್ನು ಒದಗಿಸಲಾಗುತ್ತದೆ. ಈಗಾಗಲೇ ಈ ಯೋಜನೆಯ ಸೌಲಭ್ಯ ವನ್ನು ಬಹಳಷ್ಟು ರೈತರು ಪಡೆದುಕೊಂಡಿದ್ದಾರೆ.ಶೇ. 50 ರಷ್ಟು ಸಹಾಯಧನ ಈ ಯೋಜನೆಯಡಿ ಸಿಗಲಿದೆ. ಗ್ರಾಮೀಣ ಯುವಕರು, ರೈತರನ್ನು ಗುರಿಯಾಗಿಸಿಕೊಂಡು, ಆಧುನಿಕ ಕೃಷಿ ಪದ್ದತಿಯನ್ನು ಬಳಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಈ ಯೋಜನೆ ಸಹಾಯಕವಾಗಲಿದೆ.

ಸಬ್ಸಿಡಿ ಸಿಗಲಿದೆ:

 

advertisement

Image Source: iStock

 

ಕೃಷಿಯೇತರ ಚಟುವಟಿಕೆಗಳಿಗೆ ಈ ಯೋಜನೆಯಡಿ ಸಬ್ಸಿಡಿ ಸಿಗಲಿದೆ. ನೀರು ಸಂರಕ್ಷಣೆ ‌ ಹೊಂಡಗಳ ನಿರ್ಮಾಣಕ್ಕೆ ‌ 75000 ರೂಪಾಯಿ ವೆಚ್ಚವಾದರೆ ಒಟ್ಟು 37,500 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಅದೇ ರೀತಿ ಬದುಗಳ ನಿರ್ಮಾಣಕ್ಕೆ 4000 ರೂಪಾಯಿ ಆದರೆ 2000 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಕೃಷಿ ವೆಚ್ಚಗಳಿಗೆ ಒಟ್ಟು ವೆಚ್ಚದ ಶೇ. 25 ರಷ್ಟು ಸಹಾಯಧನ ಸಿಗಲಿದೆ. ಹೀಗೆ ತೋಟಗಾರಿಕೆ ಹಾಗೂ ಪಶು ಸಂಗೋಪನೆಗಳ ಸಮಗ್ರ ಕೃಷಿ ಪದ್ಧತಿಗೂ ಸಬ್ಸಿಡಿ ಮೊತ್ತ ನೀಡಲಿದೆ.

ಈ ದಾಖಲೆಗಳು ಬೇಕು

ಈ ಯೋಜನೆಯ ಸೌಲಭ್ಯ ಪಡೆಯಲು ಕೆಲವೊಂದು ದಾಖಲೆಗಳು ಕೂಡ ಅಗತ್ಯವಾಗಿ ಬೇಕು.

  • Aadhaar Card
  • Address Certificate
  • Income certificate
  • Ration card
  • Age Certificate
  • Mobile no
  • Photo
  • Bank Account

ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ರೈತರು http://rkvystartups.nic.in. ಈ ಲಿಂಕ್ ಮೂಲಕ ಅರ್ಜಿ ಯನ್ನು ಹಾಕಬಹುದಾಗಿದೆ.

advertisement

Leave A Reply

Your email address will not be published.