Karnataka Times
Trending Stories, Viral News, Gossips & Everything in Kannada

Govt Scheme: ಎರಡೇ ವರ್ಷದಲ್ಲಿ ಮಹಿಳೆಯರನ್ನು ಶ್ರೀಮಂತರನ್ನಾಗಿ ಮಾಡಿಸುತ್ತೆ ಈ ಸರ್ಕಾರಿ ಸ್ಕೀಮ್!

advertisement

ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಮೂಲಕ ಮಹಿಳೆಯರನ್ನು ಸಬಲರನ್ನಾಗಿ ಮಾಡುವಂತಹ ಗುರಿಯನ್ನು ಸರ್ಕಾರ ಹೊಂದಿದೆ. ಇನ್ನು ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಕೈತುಂಬ ಲಾಭ ನೀಡುವಂತಹ ಯೋಜನೆಯನ್ನು ಪ್ರಾರಂಭ ಮಾಡಿದ್ದು ಇದರಿಂದ ಮಹಿಳೆಯರು ಆರ್ಥಿಕ ವಿಚಾರದಲ್ಲಿ ಸಾಕಷ್ಟು ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳಲು ಹೊರಟಿರುವಂತಹ ಯೋಜನೆ ಹೆಸರು ಮಹಿಳಾ ಸಮ್ಮಾನ್ ಸರ್ಟಿಫಿಕೇಟ್ ಯೋಜನೆ (Mahila Samman Savings Certificate Scheme).

Mahila Samman Savings Certificate Scheme:

 

Image Source: Fisdom

 

ಮಹಿಳೆಯರಿಗಾಗಿ ಪ್ರಾರಂಭ ಮಾಡಿರುವಂತಹ ಈ ಯೋಜನೆ ಅಡಿಯಲ್ಲಿ 7.5% ವಾರ್ಷಿಕ ಬಡ್ಡಿದರವನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ಕೇವಲ ನೀವು ಎರಡು ವರ್ಷಗಳ ಕಾಲ ಹೂಡಿಕೆ ಮಾಡಿದ ಸಾಕು ಮ್ಯಾಕ್ಸಿಮಮ್ 2 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದಾಗಿರುತ್ತದೆ.

ಮಹಿಳೆಯರ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸಲು ಪ್ರಾರಂಭ ಮಾಡಿರುವಂತಹ ಈ ಯೋಜನೆ ಪ್ರಾರಂಭ ಆಗಿರೋದು 2023ರಲ್ಲಿ. ಪೋಸ್ಟ್ ಆಫೀಸ್ನ (Post Office) ಅತ್ಯಂತ ಮಹತ್ವವಾಗಿರುವಂತಹ ಯೋಜನೆಗಳಲ್ಲಿ ಇದನ್ನು ಕೂಡ ಒಂದು ಎಂಬುದಾಗಿ ಪರಿಗಣಿಸಲಾಗುತ್ತದೆ.

ಯೋಜನೆಯಲ್ಲಿ ಅಪ್ಲೈ ಮಾಡುವುದು ಹೇಗೆ?

 

advertisement

Image Source: TV9 Telugu

 

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ (Mahila Samman Savings Certificate Scheme) ಅಡಿಯಲ್ಲಿ ನೀವು ಎರಡು ವರ್ಷಗಳವರೆಗೆ ಗರಿಷ್ಠ 2 ಲಕ್ಷ ರೂಪಾಯಿಗಳ ಹೂಡಿಕೆಯನ್ನು ಮಾಡಬಹುದಾಗಿದ್ದು ಬರೋಬ್ಬರಿ 7.5% ಬಡ್ಡಿದರವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಎರಡು ವರ್ಷಗಳಲ್ಲಿ ಕೇವಲ ಬಡ್ಡಿಯ ಮೂಲಕವೇ ನೀವು ಹೆಚ್ಚುವರಿ 31,125 ರೂಪಾಯಿಗಳನ್ನು ಗಳಿಸಬಹುದಾಗಿದೆ.

ಮಹಿಳೆಯರು ಈ ಯೋಜನೆ (Govt Scheme) ಅಡಿಯಲ್ಲಿ ಬ್ಯಾಂಕ್ ಅಕೌಂಟ್ ನಲ್ಲಿ ಅಥವಾ ಪೋಸ್ಟ್ ಆಫೀಸ್ (Post Office) ನಲ್ಲಿ ಖಾತೆಯನ್ನು ಪ್ರಾರಂಭ ಮಾಡಬಹುದಾಗಿದೆ. ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ (PAN Card) ಹಾಗೂ ಕೆ ವೈ ಸಿ ದಾಖಲೆಗಳನ್ನು ಇಟ್ಟುಕೊಂಡು ಚೆಕ್ ಜೊತೆಗೆ ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಹೋಗಬೇಕಾಗಿರುತ್ತದೆ.

ಟ್ಯಾಕ್ ರಿಯಾಯಿತಿ ಲಾಭ ಕೂಡ ಇದೆ:

ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಉತ್ತಮ ರಿಟರ್ನ್ ಹಾಗೂ ಬಡ್ಡಿ ದರದ ಜೊತೆಯಲ್ಲಿ ಟಿಡಿಎಸ್ ನಲ್ಲಿ ಕೂಡ ರಿಯಾಯಿತಿ ನೀಡುತ್ತದೆ. ಹಿರಿಯ ನಾಗರಿಕ ಮಹಿಳೆಯರಿಗೆ ಮಾತ್ರ ಈ ರೀತಿ ಟಿಡಿಎಸ್ ನಲ್ಲಿ ರಿಯಾಯಿತಿ ದೊರಕುತ್ತದೆ. ಅತ್ಯಂತ ಲಾಭವನ್ನು ಪಡೆದುಕೊಳ್ಳಬಹುದಾದ ಯೋಜನೆ ಇದಾಗಿದ್ದು ಮಹಿಳೆಯರು ತಮ್ಮ 10 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಗಳ ಹೆಸರಿನಲ್ಲಿ ಕೂಡ ಈ ಯೋಜನೆಯನ್ನು ಪ್ರಾರಂಭ ಮಾಡಬಹುದಾಗಿದೆ.

ಒಟ್ಟಾರೆ ಸಮಾಜದಲ್ಲಿ ಆರ್ಥಿಕ ವಿಚಾರದಲ್ಲಿ ಮಹಿಳೆಯರು ಕೂಡ ಪುರುಷರಿಗೆ ಸರಿಸಮಾನರಾಗಿ ನಿಲ್ಲಬೇಕು ಎನ್ನುವ ಕಾರಣಕ್ಕಾಗಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬರೂ ಕೂಡ ಇದರ ಲಾಭವನ್ನು ಪಡೆದುಕೊಳ್ಳಬೇಕಾಗಿರುತ್ತದೆ.

advertisement

Leave A Reply

Your email address will not be published.