Karnataka Times
Trending Stories, Viral News, Gossips & Everything in Kannada

Bullet Train: ದೇಶದ ಜನತೆಗೆ ಸಿಹಿಸುದ್ದಿ! ಈ ಮಾರ್ಗಗಳಲ್ಲಿ ಓಡಾಡಲಿದೆ ಬುಲೆಟ್ ಟ್ರೈನ್

advertisement

ವಿಕಸಿತ ಭಾರತದ ಪರಿಕಲ್ಪನೆ ಅಡಿಯಲ್ಲಿ ಸರಕಾರವು ಈಗಾಗಲೇ ಅನೇಕ ಜನಪರ ಕಾರ್ಯಕ್ರಮ ಪರಿಚಯಿಸುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರವು ರೈಲ್ವೇ ವ್ಯವಸ್ಥೆ ಬದಲಾಯಿಸುವ ಜೊತೆಗೆ ನೂತನ ಸಂಪರ್ಕ ಹಾಗೂ ವಿನೂತನ ರೈಲ್ವೇ ವ್ಯವಸ್ಥೆ ಭಾರತದಲ್ಲೂ ಜಾರಿಗೆ ತರಲು ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ಬುಲೇಟ್ ಟ್ರೈನ್ (Bullet Train) ಶೀಘ್ರದಲ್ಲೇ ಭಾರತದಾದ್ಯಂತ ಇರಲಿದ್ದು ಇದರ ಕಾಮಗಾರಿ ಕೆಲಸ ಕಾರ್ಯಗಳು ಬರದಿಂದ ಸಾಗುತ್ತಿದೆ.

ಬಿಜೆಪಿ ಸರಕಾರವು ತನ್ನ ಹೊಸ ಪ್ರಣಾಳಿಕೆ ಹೊರಡಿಸುವಾಗ ಈ ಸೌಲಭ್ಯ ಘೋಷಣೆ ಮಾಡಿದೆ. ಹೊಸದಾಗಿ ಮೂರು ಮಾರ್ಗದಲ್ಲಿ ಬುಲೆಟ್ ಟ್ರೈನ್ ಸಾಗಲಿದ್ದು ದೇಶದಲ್ಲಿ ಒಟ್ಟು 10 ಮಾರ್ಗದಲ್ಲಿ ಬುಲೇಟ್ ಟ್ರೈನ್ ಸಾಗಲಿದೆ. 2026ರ ಒಳಗೆ ದೇಶಾದ್ಯಂತ ಬುಲೇಟ್ ಟ್ರೈನ್ (Bullet Train) ಸಾಗಲಿದೆ ಎಂದು ಕೇಂದ್ರ ರೈಲ್ವೇ ಸಚಿವರು ಕೂಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸ್ಸಿನ ಯೋಜನೆಯಾಗಿದ್ದು  ಎಲೆಲ್ಲ ಹೊಸ ರೈಲಿನ ಮಾರ್ಗ ಸೂಚಿ ಸಿದ್ಧವಾಗುತ್ತಿದೆ ಎಂಬ ವರದಿ ಇಲ್ಲಿದೆ.

ದೇಶದಲ್ಲಿ ಮೊದಲ ರೈಲು:

 

Image Source: Aaj Tak

 

ರಾಷ್ಟ್ರೀಯ ಹೈ ಸ್ಪೀಡ್ ರೈಲ್ವೇ ನಿಗಮವು  ಮುಂಬೈ ನಿಂದ ಅಹಮದಾಬಾದ್ ನಡುವೆ 508 km ಉದ್ದದ ದೇಶದ ಮೊದಲ ರೈಲ್ವೇ ಆರಂಭ ವಾಗಿ ಆ ಬಳಿಕ ಈ ರೈಲ್ವೇ ಕ್ಷೇತ್ರ ವಿವಿಧ ಹಂತದಲ್ಲಿ ಅಭಿವೃದ್ಧಿ ಆಗಿದೆ. ಮುಂದಿನ ದಿನಗಳಲ್ಲಿ ಸಮುದ್ರದ ಸುರಂಗ ಮೂಲಕ ಕೂಡ ಪ್ರಯಾಣಿಸಲು ಅನುಕೂಲ ಆಗುವ ವ್ಯವಸ್ಥೆ ಜಾರಿಗೆ ತರಲು ಸರಕಾರ ಈಗಲೇ ಚಿಂತನೆ ನಡೆಸಿದೆ. ಈ ಒಂದು ಪ್ರಯೋಗವನ್ನು 2026ರಲ್ಲಿ ಬಿಲಿಮೋರ ಹಾಗೂ ಸೂರತ್ ನಡುವೆ ನಡೆಸಲು ಸರಕಾರ ತೀರ್ಮಾನಿಸಲಾಗಿದೆ.

advertisement

ವರದಿ ಸಿದ್ಧ:

 

Image Source: The Federal News

 

ದೇಶದಲ್ಲಿ ಹೊಸ ಬುಲೇಟ್ ರೈಲನ್ನು (Bullet Train) ಎಲ್ಲಿಂದ ಎಲ್ಲಿ ವರೆಗೆ ವಿಸ್ತರಣೆ ಮಾಡಬೇಕು ಎಂಬ ಬಗ್ಗೆ ವಿಸ್ತ್ರತ ವರದಿಯೊಂದು ಸಿದ್ಧವಾಗಿದೆ.

  • ದಹಲಿ-  ಅಮೃತ್ ಸರ
  • ಮುಂಬೈ- ನಾಸಿಕ್- ನಾಗ್ಪುರ
  • ಮುಂಬೈ-ಹೈದ್ರಾಬಾದ್
  • ದೆಹಲಿ – ಆಗ್ರಾ- ಲಕ್ನೋ- ವಾರಣಾಸಿ
  • ದೆಹಲಿ- ಜೈಪುರ- ಉದಯಪುರ-ಅಹಮದಾಬಾದ್
  • ಹೌರ-ವಾರಣಾಸಿ- ಪಾಟ್ನಾಗಳಿಗೆ ಸಂಚಾರ ಮಾಡಲು ಮಾರ್ಗಸೂಚಿ ಸಿದ್ಧತೆ ಮಾಡಲಾಗಿದೆ.

ಚುನಾವಣೆ ಬಳಿಕ ಬದಲಾವಣೆ:

ಈಗ ಎಲ್ಲೆಡೆ ಲೋಕಸಭೆ ಚುನಾವಣೆಯ ಬಿಸಿ ಕಾವು ಎದ್ದಿದೆ. ಹಾಗಾಗಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಕೂಡ ಪಕ್ಷದ ಹೊಣೆಯಾಗಿದೆ ಅದಕ್ಕಾಗಿ ಲೋಕಸಭೆ ಚುನಾವಣೆಯ ಬಳಿಕ ರೈಲ್ವೇ ಬುಲೇಟ್ ಟ್ರೈನ್ ಜಾರಿಗೆ ಬರುವುದಕ್ಕೂ ಮೊದಲು DPR ವ್ಯವಸ್ಥೆಯನ್ನು 6-8ತಿಂಗಳ ಅವಧಿಯೊಳಗೆ ಜಾರಿಗೆ ತರಲು ಸರಕಾರ ತೀರ್ಮಾನಿಸಿದೆ.  DPR ಎಂದರೆ Derailed Project Report ಎಂದಾಗಿದ್ದು ಈ ಯೋಜನೆ ಕುಂದು ಕೊರತೆ , ಮಾರ್ಗ ಇತರ ಮಾಹಿತಿ ನೀಡಲಾಗುತ್ತದೆ.

advertisement

Leave A Reply

Your email address will not be published.