Karnataka Times
Trending Stories, Viral News, Gossips & Everything in Kannada

Electric Car: ಕೇವಲ 18 ನಿಮಿಷ ಚಾರ್ಜ್ ಹಾಕಿದ್ರೆ 636Km ಮೈಲೇಜ್ ನೀಡುವ ಅದ್ಭುತ ಎಲೆಕ್ಟ್ರಿಕ್ ಕಾರ್! ಬೆಲೆ ಇಷ್ಟೊಂದು ಕಡಿಮೆ.

advertisement

ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತದೆ, ಪ್ರತಿ ದಿನ ಒಂದಲ್ಲ ಒಂದು ವಿಭಿನ್ನ ಹಾಗೂ ಅತಿ ಆಕರ್ಷಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ವಾಹನಗಳನ್ನು ತಯಾರು ಮಾಡಿ ಇತರೆ ದೇಶದ ವಾಹನಗಳೊಂದಿಗೆ ಸ್ಪರ್ಧಿಸುತ್ತಿರುತ್ತಾರೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಸ್ಪರ್ಧೆ ಕೂಡ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಜೋರಾಗಿಯೇ ಇದ್ದು ಎಲ್ಲಾ ಬ್ರಾಂಡ್ ಕಾರ್ ತಯಾರಿಕಾ ಕಂಪನಿಗಳು ಅತಿ ಆಕರ್ಷಕವಾದ ವೈಶಿಷ್ಟತೆಗಳು (Amazing Features) ಹಾಗೂ ಅದ್ಭುತ ಮೈಲೇಜ್ (Good Mileage) ನೀಡುವಂತಹ ಎಲೆಕ್ಟ್ರಿಕ್ ಕಾರ್ (Electric Car) ಗಳನ್ನು ಪರಿಚಯಿಸುತ್ತಲೇ ಇರುತ್ತಾರೆ.

ಅದರಂತೆ ಸದ್ಯ ಹುಂಡೈ ಕಂಪನಿ (Hyundai Company)ಯು ಅತಿ ಕಡಿಮೆ ಅವಧಿಯಲ್ಲಿ ಬಹುಬೇಗ ಚಾರ್ಚಾಗಿ ಬರೋಬ್ಬರಿ 636 ಕಿಲೋಮೀಟರ್ ಮೈಲೇಜ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿರುವ ಹುಂಡೈ ಐಒನೆಕ್ 5 ಎಲೆಕ್ಟ್ರಿಕ್ ಕಾರ (Electric Car) ನ್ನು ಪರಿಚಯಿಸಿದ್ದು, ಕಾರಿನ ಫೀಚರ್ಸ್ ಗಳು ಹೇಗಿದೆ? ಇದರ ಬೆಲೆ ಎಷ್ಟು? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

Hyundai Ioniq 5 Battery Backup:

 

Image Source: Team-BHP.com

 

ಸೌತ್ ಕೊರಿಯಾದ ಹುಂಡೈ ಕಂಪನಿ ಲಾಂಚ್ ಮಾಡಿರುವಂತಹ ಹುಂಡೈ ಅಯಾನಿಕ್ 5 ಎಲೆಕ್ಟ್ರಿಕ್ ಕಾರ್ ಇದಾಗಿದ್ದು, ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಅದ್ಭುತ ರೇಂಜ್ ನೀಡುವಂತಹ ಕಾರನ್ನು ಒದಗಿಸುವ ನಿಟ್ಟಿನಲ್ಲಿ ಕಂಪನಿ ಕೆಲಸ ಮಾಡಿದ್ದು, ಬರೋಬ್ಬರಿ 76.3kWh ಕೆಪ್ಯಾಸಿಟಿಯನ್ನು ಹೊಂದಿರುವ ಬ್ಯಾಟರಿ ಪ್ಯಾಕನ್ನು ಹುಂಡೈ ಅಯೋನಿಕ್ 5 (Hyundai Ioniq 5) ನಲ್ಲಿ ಅಳವಡಿಕೆ ಮಾಡಲಾಗಿದೆ.

advertisement

ಇತ್ತೀಚಿನ ಯಾವ ಎಲೆಕ್ಟ್ರಿಕ್ ವಾಹನಗಳಲ್ಲಿಯೂ ಕಾಣದಂತಹ ಅದ್ಭುತ ರೇಂಜ್ ಇದರಲ್ಲಿದ್ದು ಬರೋಬ್ಬರಿ 636 km ನಷ್ಟು ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯವಿದೆ.

18 ನಿಮಿಷದಲ್ಲಿ 80 ಪರ್ಸೆಂಟ್ ಚಾರ್ಜ್ ಆಗಲಿದೆ:

 

Image Source: YT- Visual Car Reviews

 

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ (Electric Vehicle) ಗಳ ಬೇಡಿಕೆ ಹೆಚ್ಚಾಗುತ್ತಿರುವುದರ ಜೊತೆಗೆ ಅತಿ ಕಡಿಮೆ ಅವಧಿಯಲ್ಲಿ ವೇಗವಾಗಿ ಚಾರ್ಜ್ ಆಗುವಂತಹ ಎಲೆಕ್ಟ್ರಿಕ್ ವಾಹನಗಳು ಅದ್ಭುತ ಮೈಲೇಜ್ ನೀಡಲಿದೆ ಎಂಬ ಮಾಹಿತಿಯು ಎಲ್ಲೆಡೆ ಹರಿದಾಡುತ್ತಿದ್ದು, ಇದೇ ನಿಟ್ಟಿನಲ್ಲಿ ಕಾರನ್ನು ತಯಾರು ಮಾಡಿದ್ದಾರೆ, ಹುಂಡೈ ಅಯೋನಿಕ್ ಕೇವಲ 18 ನಿಮಿಷದಲ್ಲಿ 80% ಚಾರ್ಜ್ ಆಗುವಂತಹ ಸಾಮರ್ಥ್ಯವನ್ನು ಹೊಂದಿದ್ದು ಇದರ ಫಾಸ್ಟೆಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಇಂದಾಗಿ ಲಾಂಗ್ ರೇಂಜ್ ಮೈಲೇಜ್ ನೀಡುತ್ತದೆ.

ಕೇವಲ 10,000 ಕಾರನ್ನು ಬುಕ್ ಮಾಡಿ:

ಎಕ್ಸ್ ಶೋರೂಮ್ ನಲ್ಲಿ 20 ಲಕ್ಷ ರೂಪಾಯಿಗಳಿಗೆ ಲಭ್ಯವಿರುವಂತಹ ಹುಂಡೈ ಅಯೋನಿಕ್ 5 ಕಾರನ್ನು ಹುಂಡೈ ಕಂಪನಿಯ ಅಫೀಷಿಯಲ್ ವೆಬ್ಸೈಟ್ಗೆ (Hyundai Company Official Website) ಹೋಗಿ 10,000 ಹಣವನ್ನು ಮುಂಗಡವಾಗಿ ನೀಡಿ ಬುಕಿಂಗ್ (Pre Booking) ಮಾಡಿಕೊಳ್ಳಬೇಕಾಗುತ್ತದೆ. ಆನಂತರ ಅದನ್ನು ಕೊಳ್ಳುವ ಸಮಯದಲ್ಲಿ ಇನ್ನುಳಿದ ಮೊತ್ತವನ್ನು ನೀಡಿದರೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಆಗಿ ಅದ್ಭುತ ಮೈಲೇಜ್ ನೀಡುವಂತಹ EV ನಿಮ್ಮದಾಗಲಿದೆ.

advertisement

Leave A Reply

Your email address will not be published.