Karnataka Times
Trending Stories, Viral News, Gossips & Everything in Kannada

Electric Car: ಭಾರತಕ್ಕೆ ಬರಲಿದೆ ಈ ವಿದೇಶಿ ಎಲೆಕ್ಟ್ರಿಕ್ ಕಾರು! 300Km ಮೈಲೇಜ್, ಬೆಲೆ ಟಾಟಾಗಿಂತ ಕಡಿಮೆ

advertisement

ಇತ್ತೀಚಿನ ದಿನಗಳಲ್ಲಿ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಎಲೆಕ್ಟ್ರಿಕ್ ಕಾರ್ (Electric Car) ಗಳ ಕ್ರಾಂತಿಕಾರಿ ಬದಲಾವಣೆ ಬಂದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ನಮ್ಮಲ್ಲಿ ಇರುವಂತಹ ಭಾರತದ್ದೆ ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುವಂತಹ ಕೆಲಸವನ್ನು ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡುತ್ತಿರುವುದು ವಿಯೇಟ್ನಾಮ್ ಮೂಲದ VinFast ಎಲೆಕ್ಟ್ರಿಕ್ ಕಾರಿನ ಬಗ್ಗೆ. ಹಾಗಿದ್ರೆ ಬನ್ನಿ ಈ ಕಾರಿನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತಹ ಪ್ರಯತ್ನ ಈ ಲೇಖನದ ಮೂಲಕ ಮಾಡೋಣ.

VinFast Electric Car:

 

Image Source: vinfastauto

 

VinFast ಎಲೆಕ್ಟ್ರಿಕ್ ಕಾರು ಒಂದು ಬೇಸಿಕ್ ರೀತಿಯಲ್ಲಿ ಕಾಣಿಸಿಕೊಳ್ಳುವಂತಹ ಸಿಂಪಲ್ ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಕಾರಿನಲ್ಲಿ ಬ್ಯಾಟರಿ ವಿಚಾರಕ್ಕೆ ಬರೋದಾದ್ರೆ Subscription ಬ್ಯಾಟರಿಯನ್ನು ನೀವು ಪಡೆದುಕೊಳ್ಳಬಹುದಾಗಿದ್ದು 70% ಚಾರ್ಜ್ ಕೆಳಗೆ ಹೋಗುತ್ತಿದ್ದಂತೆ ನೀವು ಅದನ್ನು ರಿಪ್ಲೇಸ್ ಮಾಡಬಹುದಾಗಿದೆ. ಈ ಕಾರಿನಲ್ಲಿ ನೀವು 17 ಇಂಚುಗಳ ಅಲೋಯ್ ವೀಲ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

VinFast Electric Car Features: 

advertisement

VinFast ಎಲೆಕ್ಟ್ರಿಕ್ ಕಾರ್ ನಲ್ಲಿ ACDC ಮೂಲಕ ಮನೆಯಲ್ಲಿಯೇ ಚಾರ್ಜ್ ಮಾಡಿದರೆ ಎಂಟು ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗಿರುತ್ತದೆ. ಈ ಮೂಲಕ ಅದು ಫುಲ್ ಚಾರ್ಜ್ ಆಗುತ್ತದೆ. ಹಿಂದಿನ ಕ್ಯಾಮೆರಾ ಜೊತೆಗೆ ಪಾರ್ಕಿಂಗ್ ಸೆನ್ಸಾರ್ ಅನ್ನು ಕೂಡ ನೀವು ಈ ಕಾರ್ ನಲ್ಲಿ ಪಡೆದುಕೊಳ್ಳಬಹುದು.

 

Image Source: Team-BHP.com

 

260 ಲೀಟರ್ಗಳ ಬೂಟ್ ಸ್ಪೇಸ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಎಂಟು ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ವಯರ್ಲೆಸ್ ಆಪಲ್ ಹಾಗೂ ಆಂಡ್ರಾಯ್ಡ್ ಎರಡು ಕೂಡ ಸಪೋರ್ಟ್ ಆಗುತ್ತದೆ. ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಜೊತೆಗೆ ಯು ಎಸ್ ಬಿ ಚಾರ್ಜಿಂಗ್ ಪೋರ್ಟ್ ಅನ್ನು ಕೂಡ ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ.

VinFast Price, Battery & Range

VinFast ಎಲೆಕ್ಟ್ರಿಕ್ ಕಾರಿನ ಸೀಟಿಂಗ್ ವ್ಯವಸ್ಥೆಯ ಬಗ್ಗೆ ಮಾತನಾಡುವುದಾದರೆ ನಾಲ್ಕರಿಂದ ಐದು ಜನರು ಇದರಲ್ಲಿ ಕುಳಿತುಕೊಳ್ಳಬಹುದಾಗಿದೆ. ಇನ್ನು ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ 37Kwh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು 136Bhp ಪವರ್ ಹಾಗೂ 137Nm ಟಾರ್ಕ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಬ್ಯಾಟರಿ ನಿಮಗೆ ಈ ಕಾರಿನ ಮೂಲಕ 300 ಕಿಲೋಮೀಟರುಗಳ ರೇಂಜ್ ನೀಡುತ್ತದೆ.

ಸುರಕ್ಷತೆಗಾಗಿ ಎರಡು ಏರ್ ಬ್ಯಾಗ್ ಗಳನ್ನು ನೀಡಲಾಗಿದ್ದು ಮುಂದೆ ಹಾಗೂ ಹಿಂದೆ ಎರಡು ಕಡೆಗಳಲ್ಲಿಯೂ ಡಿಸ್ಕ್ ಬ್ರೇಕ್ಗಳನ್ನು ಅಳವಡಿಸಲಾಗಿದೆ. 13 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಇದು ಮಾರುಕಟ್ಟೆಗೆ ಬರಬಹುದಾದ ಸಾಧ್ಯತೆ ಇದ್ದು ಮುಂದಿನ ವರ್ಷಗಳ ಅಂತ್ಯದ ಒಳಗೆ ಇದು ಭಾರತದ ಮಾರುಕಟ್ಟೆಯಲ್ಲಿ ಕೂಡ ಕಾಣಿಸಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.