Karnataka Times
Trending Stories, Viral News, Gossips & Everything in Kannada

ಸದ್ಯಕ್ಕೆ ಪೆಟ್ರೋಲ್ ಡೀಸೆಲ್ ವಾಹನ ಖರೀದಿಸಬೇಡಿ! ಹೊರಬಿತ್ತು ಊಹಿಸದ ಸಿಹಿಸುದ್ದಿ

advertisement

ನೀವೇನಾದರೂ ಎಲೆಕ್ಟ್ರಿಕ್ ಬೈಕ್ (Electric Bike), ಸ್ಕೂಟರ್ ಅಥವಾ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ಸ್ವಲ್ಪ ತಾಳ್ಮೆಯಿಂದ ಕಾಯುವುದು ಒಳ್ಳೆಯದು. ಕೆಲ ಮೂಲಗಳ ವರದಿಯ ಪ್ರಕಾರ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೆಲೆಯನ್ನು 30% ನಷ್ಟು ಇಳಿಕೆ ಮಾಡಿಲಾಗಿದ್ದು, ಪೆಟ್ರೋಲ್ ವಾಹನಗಳಿಗಿಂತಲೂ ಕಡಿಮೆ ದರದಲ್ಲಿ ಹೊಚ್ಚಹೊಸ ಎಲೆಕ್ಟ್ರಿಕ್ ವಾಹನ (Electric Vehicle) ವನ್ನು ಖರೀದಿಸಬಹುದು.

ಡಿಮ್ಯಾಂಡ್ ಹೆಚ್ಚಾದಾಗ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆ ಮಾಡುತ್ತಿರುವುದು ಯಾಕೆ?

 

Image Source: NDTV

 

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ (Indian Automobile Market) ಬಹಳ ಬೇಡಿಕೆ ಇದೆ, ಹೀಗಾಗಿ ಹಲವಾರು ಬ್ರಾಂಡ್ ವಾಹನ ತಯಾರಿಕಾ ಕಂಪನಿಗಳು ವಿಭಿನ್ನವಾದ ವೈಶಿಷ್ಟತೆಗಳನ್ನು ಅಳವಡಿಸಿ ಅತ್ಯುತ್ತಮ ಮೈಲೇಜ್ ನೀಡುವ ಬೈಕ್, ಕಾರ್ ಹಾಗೂ ಸ್ಕೂಟರ್ ಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ.

ಹೀಗಿರುವಾಗ ಕೆಲ ನ್ಯೂಸ್ ಪೇಪರ್ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಮೇಲಿನ ಬೆಲೆ 30% ಕಡಿಮೆಯಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉಪಯೋಗಿಸುತ್ತಿರುವ ಬ್ಯಾಟರಿ ಮತ್ತು ಚಿಪ್ಪಿನ ಬೆಲೆಯಲ್ಲಿ ಇಳಿಕೆ ಕಂಡಿರುವುದು.

advertisement

2021ರಲ್ಲಿ ಒಂದು ಕಿಲೋ ವ್ಯಾಟ್ ಅವರ್(kWh) ಬೆಲೆಯು $130(₹10,850) ಅದರಂತೆ 2023ರಲ್ಲಿ 1kWhನ ಬೆಲೆಯು $100(₹8350), ರಿಸರ್ಚ್ ಅನಾ ಲಿಸ್ಟ್ ಸಾಜಿ ಜಾನ್ (Research Analyst Saji John) ಅವರ ಪ್ರಕಾರ ಮುಂದಿನ ಎರಡು ವರ್ಷಗಳಲ್ಲಿ ಮತ್ತಷ್ಟು ಕಂಪನಿಗಳು ಮಾರುಕಟ್ಟೆಯನ್ನು ಪ್ರವೇಶಿಸುವುದರಿಂದ ಬ್ಯಾಟರಿ ಮೇಲಿನ ಬೆಲೆಯು ಮತ್ತಷ್ಟು ಇಳಿಕೆ ಕಾಣಲಿದೆ.

2025ರ ವೇಳೆಗೆ ಕೇವಲ ₹6,650 ರೂಪಾಯಿಗಳಿಗೆ ಅದ್ಭುತ ಬ್ಯಾಟರಿ ಬ್ಯಾಕಪನ್ನು ಒದಗಿಸುವ ಬ್ಯಾಟರಿಗಳನ್ನು ಮಾರಾಟ ಮಾಡುತ್ತದೆ, ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆಯು ತೀರಾ ಇಳಿಕೆ ಕಾಣಲಿದೆ.

ಪೆಟ್ರೋಲ್ ವಾಹನಗಳಿಗಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಲಭ್ಯ:

 

Image Source: Pew Research Center

 

2025ರ ವೇಳೆಗೆ, ಬ್ಯಾಟರಿ ಮೇಲಿನ ಬೆಲೆಯು ಕಡಿಮೆಯಾಗುವುದರಿಂದ ಎಲೆಕ್ಟ್ರಿಕ್ ಕಾರು ಹಾಗೂ ಬೈಕುಗಳು (Electric Cars And Bikes) ಕೂಡ ಕಡಿಮೆ ಬೆಲೆಗೆ ಲಭ್ಯವಿದ್ದು, ಲಿಥಿಯಂ ಅಯೋನ್ನಂತಹ ಬ್ಯಾಟರಿ (Lithium Ion Battery) ಅಳವಡಿಸಿ ತಯಾರು ಮಾಡಲಾಗಿರುವ ಇವಿ ಕಾರಿನ ಬೆಲೆಯನ್ನು 5 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗುತ್ತದೆ.

ಯಾವುದೇ ಪೆಟ್ರೋಲ್ ಇಂಜಿನ್ ಕಾರುಗಳು (Petrol Engine Cars) ಇಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಿಲ್ಲದ ಕಾರಣ, ಕೇವಲ ಐದು ಲಕ್ಷ ನೀಡಿ ಇವಿಗೆ ಶಿಫ್ಟ್ ಆಗಬಹುದು.

advertisement

Leave A Reply

Your email address will not be published.