Karnataka Times
Trending Stories, Viral News, Gossips & Everything in Kannada

PM Kisan Yojana: ಪಿಎಂ ಕಿಸಾನ್ ಯೋಜನೆಯ 17 ನೇ ಕಂತಿನ ಹಣ ಬಾರದವರಿಗೆ ಹೊಸ ಸೂಚನೆ

advertisement

ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ರೈತಪರವಾಗಿ ಈಗಾಗಲೇ ಅನೇಕ ಯೋಜನೆಯನ್ನು ಪರಿಚಯಿಸುತ್ತಲೇ ಬರಲಾಗುತ್ತಿದೆ. ಈಗಾಗಲೇ ಅನೇಕ ಯೋಜನೆ ರೈತರ ಪರವಾಗಿಯೇ ಇದೆ ಎನ್ನಬಹುದು. ರೈತರ ಕಷ್ಟಕ್ಕೆ ಬೇಕಾಗಿ ಆರ್ಥಿಕ ಸಹಾಯಧನ, ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಕೂಡ ಸಿಗುತ್ತಿದೆ. ಹಾಗೆಯೇ ಪ್ರತಿಯೊಂದು ರೈತರ ಯೋಜನೆಯೂ ಅದರದ್ದೇ ಆದ ಮಹತ್ವವ ವನ್ನು ಹೊಂದಿದೆ. ಅಂತಹ ಯೋಜನೆಯಲ್ಲಿ PM Kisan Yojana ಬಹಳ ಮಹತ್ವಪೂರ್ಣ ಸ್ಥಾನ ಪಡೆದಿದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆ?

 

Image Source: Jagran English

 

ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Yojana) ಎನ್ನುವುದು ಅದರದ್ದೇ ಆದ ಮಹತ್ವ ಹೊಂದಿದೆ. ರೈತರಿಗೆ ಕಂತಿನ ಪ್ರಕಾರ ಸಹಾಯಧನ ನೀಡಲಾಗುತ್ತಿದ್ದು ಈ ಸಹಾಯಧನ ವನ್ನು ಕೃಷಿ ಉದ್ದೇಶಕ್ಕೆ ಬಳಸಿಕೊಳ್ಳ ಬಹುದಾಗಿದೆ. ಪಿಎಂ ಕಿಸಾನ್ ಯೋಜನೆಗೆ (PM Kisan Yojana) ಅಪ್ಲೈ ಮಾಡಿದವರಿಗೆ ಎಲ್ಲ ದಾಖಲೆ ಮಾಹಿತಿ ಸರಿಯಾಗಿದ್ದರೆ ಹಂತ ಹಂತವಾಗಿ ಕಂತಿನ ಹಣ ಬಿಡುಗಡೆ ಆಗಲಿದೆ. ಈಗ 17 ಕಂತಿನ ಹಣ ಯಾವಾಗ ಬರುತ್ತೇ ಎಂದು ಕಾದವರಿಗೆ ಈ ಮಾಹಿತಿ ಅನುಕೂಲ ವಾಗಲಿದೆ.

ಸರಕಾರಿ ಉದ್ಯೋಗಸ್ಥರಿಗೆ ಈ ಸೌಲಭ್ಯ ಇಲ್ಲ:

advertisement

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರು ಮಾತ್ರ ಅರ್ಹವಾಗಿದ್ದು ಸರಕಾರಿ ಉದ್ಯೋಗಿಗಳಿಗೆ ಮತ್ತು ತೆರಿಗೆ ಪಾವತಿ ಮಾಡುತ್ತಾ ಇರುವವರಿಗೆ ಪಿಎಂ ಕಿಸಾನ್ ಯೋಜನೆ (PM Kisan Yojana) ಯ ಅಡಿಯಲ್ಲಿ ಫಲಾನುಭವಿಗಳಾಗಲು ಸಾಧ್ಯ ಇಲ್ಲ ಎಂದು ಹೇಳಬಹುದು. ರೈತರಿಗೆ ಮಾತ್ರವೇ ಈ ಅವಕಾಶ ಇದ್ದು ಉಳಿದವರಿಗೆ ಇಲ್ಲ ಎನ್ನಬಹುದು.

ಯಾವಾಗ ಬರುತ್ತೆ?

 

Image Source: Housing

 

PM Kisan Samman Yojana ಅಡಿಯಲ್ಲಿ ಅರ್ಜಿ ಸಲ್ಲಿದವರಿಗೆ ಈಗಾಗಲೇ ಹದಿನಾರು ಕಂತಿನ ಹಣ ಬಂದವರಿಗೆ ಮುಂದಿನ ಕಂತಿನ ಹಣ ಯಾವಾಗ ಬರಲಿದೆ ಎಂಬ ಪ್ರಶ್ನೆ ಇದ್ದರೆ, ಇದೇ 2024ರ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 17 ಕಂತಿನ ಹಣ ಬರುವ ಸಾಧ್ಯತೆ ಇದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣ ಬರಲು ನಿಮ್ಮ ಬ್ಯಾಂಕ್ ಖಾತೆಯ EKYC ಅಪ್ಡೇಟ್ ಮಾಡಿಸಲೇ ಬೇಕಿದೆ.

ಎಷ್ಟು ಹಣ ಬರಲಿದೆ?

ಪಿಎಂ‌ ಕಿಸಾನ್ ಯೋಜನೆ (PM Kisan Yojana) ಯ ಹಣ ಪಡೆಯುವ ಮುನ್ನ ಅದಕ್ಕೆ ಅರ್ಜಿ ಹಾಕಬೇಕಾಗುತ್ತದೆ. ಹಾಗೇ ಅರ್ಜಿ ಹಾಕಿದ್ದವರ ಅರ್ಜಿ ಪರಿಶೀಲನೆ ಮಾಡಿ, ಅದೆ ತರನಾಗಿ ಪ್ರತೀ ತಿಂಗಳಿನಲ್ಲಿ 2000 ದಂತೆ ಹಣ ಮಂಜೂರಾಗಲಿದೆ. ವಾರ್ಷಿಕ 2000 ದಂತೆ 3 ಕಂತಿನ ಹಣ ವರ್ಷಕ್ಕೆ 6000 ದಂತೆ ಮಂಜೂರಾಗಿದೆ. 16ನೇ ಕಂತಿನ ಹಣ ಬಿಡುಗಡೆ ಆಗಿದ್ದು ಇದುವರೆಗೆ 9ಕೋಟಿ ಕೋಟಿಗೂ ಅಧಿಕ ರೈತರು ಈ ಯೋಜನೆ ಅಡಿಯಲ್ಲಿ ಫಲಾನುಭವಿ ಗಳಾಗಿದ್ದಾರೆ. ಇದುವರೆಗೆ 21ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಆಗಿದೆ.

advertisement

Leave A Reply

Your email address will not be published.