Karnataka Times
Trending Stories, Viral News, Gossips & Everything in Kannada

Gold Loan: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಗುಡ್ ನ್ಯೂಸ್! ಬದಲಾಯ್ತು ನಿಯಮ

advertisement

ಚಿನ್ನ ನಮ್ಮ ಕಷ್ಟ ಕಾಲಕ್ಕೆ ನೆರವಾಗುವ ಒಂದು ಬಂಧು ಎಂದು ಹೇಳಬಹುದು. ಚಿನ್ನವನ್ನು ಖರೀದಿ ಮಾಡುವಾಗ ಭವಿಷ್ಯದಲ್ಲಿ ಅದನ್ನು ಅಡವಿಟ್ಟು ಸಾಲ ಸೌಲಭ್ಯ ಪಡೆಯಬಹುದು ಎಂದು ಕೂಡ ಮೊದಲೇ ನಿರೀಕ್ಷೆ ಮಾಡಿಯೇ ಇರುತ್ತೇವೆ ಆದರೆ ಸಾಲ ಪಡೆಯುವಾಗ ಕೆಲವು ಅಗತ್ಯ ನಿಯಮಾವಳಿ ಕೂಡ ಪರಿಶೀಲನೆ ಮಾಡಲಾಗುತ್ತದೆ. ಚಿನ್ನದ ಮೇಲೆ ಸಾಲ (Gold Loan) ಎಲ್ಲರಿಗೂ ಸಿಗುತ್ತಿಲ್ಲ ಎಂದು ಬೇಸರ ಮಾಡುತ್ತಿದ್ದವರಿಗೆ ಇಲ್ಲೊಂದು ಶುಭ ಸಮಾಚಾರ ಇದೆ ಎನ್ನಬಹುದು.

ಬ್ಯಾಂಕ್ ನಲ್ಲಿ ಚಿನ್ನದ ಮೇಲೆ ಸಾಲ (Gold Loan) ಪಡೆಯುವ ನೀತಿ ನಿಯಮಾವಳಿಯಲ್ಲಿ ಕೆಲವು ಅಗತ್ಯ ಮಾರ್ಪಾಡು ಮಾಡಲಾಗಿದೆ. ಚಿನ್ನ ಅಡಮಾನ ಇಟ್ಟವರಿಗೆ ಸರಕಾರದಿಂದ ಈಗ ಭರ್ಜರಿ ಸುದ್ದಿ ಹೊರಟಿದೆ‌. ಚಿನ್ನದ ಮೇಲೆ ಸಾಲ ಪಡೆಯುವಾಗ ಇನ್ನು ಮುಂದೆ ಕಠಿಣ ನೀತಿ ಇರಲಾರದು ಅದರ ಬದಲಿಗೆ ಸುಲಭ ವ್ಯವಸ್ಥೆ ಇರುವ ಸಾಧ್ಯತೆ ಇದೆ. ಹಾಗಾದರೆ ಈ ನೂತನ ವ್ಯವಸ್ಥೆ ಯಾವುದು ಯಾರಿಗೆ ಇದು ಲಾಭ ತರಲಿದೆ ಎಂಬ ಅನೇಕ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

ನಿಯಮ ಸಡಿಲಿಕೆ:

 

Image Source: aachenvalley.de

 

ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸೇರಿದಂತೆ ನಾನಾ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಸಾಲ ನೀಡುವ ವಿಧಾನದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.ಇನ್ನು ಮೇಲೆ ಚಿನ್ನ ಅಡವಿಟ್ಟು ಸಾಲ ನೀಡುವಾಗ ಸಾಲ ಪಡೆಯುವಾತನ ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡುವಂತಿಲ್ಲ ಎಂಬ ನಿಯಮ ಜಾರಿಗೆ ತರಲು ಮುಂದಾಗಿದೆ. ಚಿನ್ನದ ಮೇಲಿನ ಸಾಲಕ್ಕೆ (Gold Loan) ಸಿಬಿಲ್ ಸ್ಕೋರ್ (CIBIL Score) ಅಗತ್ಯ ಇಲ್ಲ. ಹಣಕಾಸು ಸಂಸ್ಥೆಯಲ್ಲಿ ಚಿನ್ನ ಅಡವಿಟ್ಟರೆ ಅದರ ನಿಯಮ ಸಡಿಲಿಕೆ ಮಾಡಲಾಗುತ್ತಿದೆ.

advertisement

ಯಾವೆಲ್ಲ ನಿಯಮ ಬದಲಾಗಲಿದೆ?

 

Image Source: Commercial Credit & Finance PLC

 

ಚಿನ್ನದ ಮೇಲಿನ ನಗದು ಸಾಲದ ಮಿತಿ ಗರಿಷ್ಠ ಎಂದರೆ ನಾಲ್ಕು ಲಕ್ಷ ರೂಪಾಯಿ ಆಗಲಿದೆ. ಚಿನ್ನದ ಮೇಲಿನ ಸಾಲಕ್ಕೆ ಅಸಲು ಪಾವತಿ ಮಾಡುವ ತನಕ ಬಡ್ಡಿ ಕಟ್ಟಿದರೆ ಸಾಕು. ಚಿನ್ನದ ಮೇಲೆ ಸಾಲ ಪಡೆಯುವಾಗ ಬೇರೆ ಯಾವುದೇ ತರನಾಗಿ ಅಡಮಾನ ಅಥವಾ ಗ್ಯಾರೆಂಟಿ ಪಡೆಯುವ ಅಗತ್ಯ ಇಲ್ಲ. ಸಾಲ ಮರುಪಾವತಿ ಮಾಡುವಾಗ ಅಸಲು ಮತ್ತು ಬಡ್ಡಿ ಸೇರಿ ಬರುವ EMI ಮೊತ್ತ ಪಾವತಿ ಮಾಡುವ ಅಗತ್ಯ ಇಲ್ಲ. ಬದಲಿಗೆ ಬಡ್ಡಿ ಮಾತ್ರ ಪಾವತಿ ಮಾಡಬೇಕು.

ಯಾವೆಲ್ಲ ಬ್ಯಾಂಕ್ ನಲ್ಲಿ ಈ ನಿಯಮ ಇದೆ?

ಸದ್ಯ ಈ ಒಂದು ಚಿನ್ನದ ಮೇಲೆ ಸಾಲ (Gold Loan) ಪಡೆಯುವ ವಿಚಾರವಾಗಿ ಬಂದ ಹೊಸ ನಿಯಮವನ್ನು ಎಲ್ಲ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಆರಂಭಿಕ ಹಂತದಲ್ಲಿ ಜಾರಿಗೆ ಬರಲಿದೆ, ಕಾಲ ಕ್ರಮೇಣ ಈ ಕ್ರಮ ಸಂಪೂರ್ಣ ಬದಲಾವಣೆ ಆಗಲಿದೆ ಎಂದು ಹೇಳಬಹುದು. ಮುಂದಿನ ದಿನದಲ್ಲಿ ಎಲ್ಲ ಬ್ಯಾಂಕ್ ನಲ್ಲಿ ಇದೆ ನಿಯಮ ಜಾರಿ ಆಗುವ ಸಾಧ್ಯತೆ ಇದೆ.

advertisement

Leave A Reply

Your email address will not be published.