Karnataka Times
Trending Stories, Viral News, Gossips & Everything in Kannada

Subsidy: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸಿಗಲಿದೆ 50,000 ರೂ ಸಹಾಯಧನ, ಯಾರು ಈ ಸೌಲಭ್ಯ ಪಡೆಯಬಹುದು?

advertisement

ಇಂದು ಮಹಿಳೆಯರ ಅಭಿವೃದ್ಧಿ ಗಾಗಿ ಸರಕಾರ ಹೆಚ್ಚಿನ ಒತ್ತು ನೀಡುತ್ತಲೇ ಬಂದಿದೆ. ಈಗಾಗಲೇ ರಾಜ್ಯ ಸರಕಾರ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಮಹಿಳೆಯರಿಗೆ ನೇರವಾಗುತ್ತಿದೆ‌. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ ಕೂಡ ಎಲ್ಲ ಪಕ್ಷಗಳು ಪ್ರಣಾಳಿಕೆ ಇಟ್ಟಿದ್ದು ಮಹಿಳಾ ಪರವಾದ ಹೆಚ್ಚು ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದೆ.

ಈಗಾಗಲೇ ಕೇಂದ್ರ ಮತ್ತು ರಾಜ್ಯ ದಿಂದ ಹಲವು ಯೋಜನೆಗಳು ಜಾರಿಗೆ ಬಂದಿದ್ದು ರಾಜ್ಯ ಸರಕಾರ ಇದೀಗ ಇಂತಹ ಮಹಿಳೆಯರಿಗೆ ಹೊಸದಾದ ಯೋಜನೆ ರೂಪಿಸಿದೆ. ಈ ಯೋಜನೆಯಡಿ ಮಹಿಳೆಯರು ಆರ್ಥಿಕ ಸೌಲಭ್ಯ ಪಡೆಯಬಹುದು. ಹಾಗಿದ್ದಲ್ಲಿ ಯಾವುದು ಈ ಯೋಜನೆ? ಯಾರು ಬಳಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ‌.

ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ:

 

Image Source: Goodreturns Kannada

 

ಈ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದಂತಹ ಮಹಿಳೆಯರಿಗೆ ಆರ್ಥಿಕ ಉತ್ತೇಜನ‌ ನೀಡುವ ಸಲುವಾಗಿ ಈ ಯೋಜನೆ ರೂಪಿಸಿದೆ. ಅಲ್ಪಸಂಖ್ಯಾತ ವರ್ಗದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ತರಬೇತಿ ನೀಡುವ ಮೂಲಕ ಅವರ ಕೌಶಲ್ಯ ಅಭಿವೃದ್ಧಿ ಮಾಡುವ ಮೂಲಕ ತಾಂತ್ರಿಕ ಕೌಶಲ್ಯವನ್ನು ವೃದ್ಧಿ ಮಾಡಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲ ಕಡಿಮೆ ಬಡ್ಡಿದರದಲ್ಲಿ ರೂ. 50,000 ವರೆಗೆ ಸಾಲಸೌಲಭ್ಯವನ್ನು ನೀಡಲಾಗುತ್ತದೆ.

ಸಬ್ಸಿಡಿ ಮೊತ್ತ ಸಿಗಲಿದೆ:

 

advertisement

Image Source: Adobe Stock

 

ಅಂದರೆ ಮಹಿಳೆಯರು ಸ್ವ ಉದ್ಯಮ, ಸಣ್ಣ ಉದ್ಯಮ ಅಂದರೆ ತರಕಾರಿ, ಮೀನು ಮಾರಾಟ, ಪಾರ್ಲರ್ ಇತ್ಯಾದಿ ಉದ್ದಿಮೆಗಾಗಿ 50,000 ರೂ. ಪಡೆದರೆ ಮಹಿಳೆ ಕೇವಲ 25000ಗಳನ್ನು ಪಾವತಿ ಮಾಡಿದರೆ ಸಾಕು. ಇನ್ನೂ 25,000ರೂ. ಸರ್ಕಾರದಿಂದ ಸಬ್ಸಿಡಿ (Subsidy) ಯಾಗಿ ಸಿಗಲಿದೆ.

ಅರ್ಹತೆ ಏನು?

ಈ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದರೆ ಅರ್ಜಿ ಹಾಕಬಹುದು. ಅದೇ ರೀತಿ ಆ ಮಹಿಳೆ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು. ಕುಟುಂಬದ ವಾರ್ಷಿಕ ಆದಾಯ 3,50,000 ಗಿಂತ ಕಡಿಮೆ ಇದ್ದರೆ ಅರ್ಜಿ ಹಾಕಬಹುದು.

ಈ ದಾಖಲೆ ಅಗತ್ಯ:

  • ಅಲ್ಪಸಂಖ್ಯಾತ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ
  • ಸ್ವಯಂ ಘೋಷಣೆ ಪತ್ರ ಇತ್ಯಾದಿ

ಈ ಯೋಜನೆಗೆ ಅರ್ಜಿ ಹಾಕಲು ಸರ್ಕಾರದ ಅಧಿಕೃತ ವೆಬ್ಸೈಟ್ kmdconline.karnataka.gov.in.ಇಲ್ಲಿ ಆನ್ಲೈನ್ ಮೂಲಕವೇ ಅರ್ಜಿ ಹಾಕಬಹುದು.

advertisement

Leave A Reply

Your email address will not be published.